alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಯುಕ್ತ ಹೆಗ್ಡೆ – ಲಾಸ್ಯ ನಡುವೆ ಮಾತಿನ ಚಕಮಕಿ

‘ಬಿಗ್ ಬಾಸ್’ ಮನೆಯೊಳಗೆ ಎಂಟ್ರಿ ಕೊಡುತ್ತಲೇ ಬಹುತೇಕ ಸದಸ್ಯರಿಗೆ ಕಿರಿಕ್ ಮಾಡಿದ್ದ ಸಂಯುಕ್ತಾ ಹೆಗ್ಡೆ ತನ್ನ ಜೊತೆಯಾಗಿ ಎಂಟ್ರಿ ಕೊಟ್ಟಿದ್ದ ಲಾಸ್ಯರೊಂದಿಗೂ ಕಿರಿಕ್ ಮಾಡಿಕೊಂಡಿದ್ದಾರೆ.

ಸದಸ್ಯರು ಟಾಸ್ಕ್ ಮಾಡುವಾಗ ನಿಯಮ ಉಲ್ಲಂಘಿಸಿದ್ದಾಗಿ ಸಂಯುಕ್ತಾ ಹೇಳಿದ್ದು, ಇದಕ್ಕೆ ಲಾಸ್ಯ ಹಾಗೇ ಹೇಳದಂತೆ ತಿಳಿಸಿದ್ದಾರೆ. ಇದನ್ನು ಪ್ರತ್ಯೇಕವಾಗಿ ಲಾಸ್ಯ ಬಳಿ ಪ್ರಸ್ತಾಪಿಸಿದ ಸಂಯಕ್ತಾ, ನನ್ನ ಬಗ್ಗೆ ನೀನು ಅಂತಹ ಹೇಳಿಕೆ ನೀಡಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಸ್ಯ ಸಮಜಾಯಿಷಿ ನೀಡಿದರೂ, ಕೇಳುವ ಸ್ಥಿತಿಯಲ್ಲಿ ಸಂಯುಕ್ತಾ ಇರಲಿಲ್ಲ. ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದವೇ ನಡೆದಿದೆ. ಒಂದು ಹಂತದಲ್ಲಿ ಸಂಯುಕ್ತಾ ಭಾವುಕರಾಗಿದ್ದಾರೆ. ಅವರಿಗೆ ಶ್ರುತಿ ಸಮಾಧಾನ ಮಾಡಲು ಮುಂದಾದರೂ, ಅದಕ್ಕೆ ಸಂಯುಕ್ತಾ ಅವಕಾಶ ನೀಡದೇ ಲಾಸ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನು ಸದಸ್ಯರು ಟಾಸ್ಕ್ ಮಾಡುವಾಗ ಸಂಯುಕ್ತಾ ನಿಯಮ ಉಲ್ಲಂಘಿಸಿದ್ದಾಗಿ ಹೇಳಿದ್ದು, ಆಗ ದಿವಾಕರ್ ಕ್ಯಾಪ್ಟನ್ ಗಮನಿಸುತ್ತಾರೆ. ನೀವು ಹೇಳಬೇಡಿ ಎಂದಿದ್ದಾರೆ. ಇದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಲು ಕಾರಣವಾಗಿದೆ. ನಿವೇದಿತಾ ಬಳಿಯೂ ಸಂಯುಕ್ತಾ ಕಿರಿಕ್ ಮಾಡಿದ್ದಾರೆ. ನಿಮ್ಮನ್ನು ಹೊರಗೆ ಕಳಿಸಿಯೇ ನಾನು ಹೋಗೋದು ಎಂದು ಹೇಳಿದ್ದಾರೆ.

ಸದಸ್ಯರಿಗೆ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ವಿವಿಧ ಹಂತದ ಸವಾಲುಗಳನ್ನು ನೀಡಲಾಗಿದೆ. ಬಾಲ್ ಗಳನ್ನು ಕಾಲಿನ ನಡುವೆ ಇಟ್ಟುಕೊಂಡು ರಿಂಗ್ ನಲ್ಲಿ ಹಾಕುವ, ಖಾಲಿ ಬಾಟಲಿಗೆ ನೀರು ತುಂಬಿಸುವ ಸವಾಲುಗಳಲ್ಲಿ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಬೇಡಿ ಹಾಕಿಕೊಂಡು ಜೊತೆಯಾಗಿರುವ ಸದಸ್ಯರು ತಮ್ಮ ಜೊತೆಗಾರ ಸದಸ್ಯರನ್ನು ಅರ್ಥ ಮಾಡಿಕೊಂಡು ಅವರ ಬಗ್ಗೆ ಗೊತ್ತಿಲ್ಲದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ದಿವಾಕರ್ ಮತ್ತು ಸಮೀರಾಚಾರ್ಯ ಡ್ರೆಸ್ ಬದಲಿಸಿಕೊಂಡು ಅನಿಸಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಸಂಯುಕ್ತಾ ಮತ್ತು ಲಾಸ್ಯ, ಚಂದನ್ –ನಿವೇದಿತಾ ವಿಭಿನ್ನವಾಗಿ ಜೊತೆಗಾರರ ಬಗ್ಗೆ ಅನಿಸಿಕೆಯನ್ನು ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ರಿಯಾಜ್ ಮತ್ತು ಜಯಶ್ರೀನಿವಾಸನ್ ಜೋಡಿ ವಿನ್ ಆಗಿದೆ.

ಅಳುವ ಮಗುವನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ಜಗನ್ –ಕಾರ್ತಿಕ್ ಜೋಡಿ ನಿರ್ವಹಿಸಿದ ರೀತಿ ಹಾಸ್ಯಮಯವಾಗಿತ್ತು. ರಿಯಾಜ್ ಅವರ ಕೈಯಿಂದ ಬೇಡಿ ಬಿಡಿಸಿಕೊಂಡು ಜಯಶ್ರೀನಿವಾಸನ್ ದೂರ ಹೋಗಿದ್ದು, ಇಬ್ಬರ ನಡುವೆ ವಾಗ್ವಾದವೇ ನಡೆದಿದೆ. ಕ್ಯಾಪ್ಟನ್ ಕೃಷಿ ಇಬ್ಬರನ್ನು ಸಮಾಧಾನಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...