alex Certify
ಕನ್ನಡ ದುನಿಯಾ       Mobile App
       

Kannada Duniya

ನಾನು ಆಗಲೇ ವಿನ್ ಆಗಿದ್ದೇನೆ ಎಂದ ಚಂದನ್

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರಿಗೆ ಲಕ್ಸುರಿ ಬಜೆಟ್ ಟಾಸ್ಕ್ ನ ವಿವಿಧ ಸವಾಲ್ ಗಳನ್ನು ನೀಡಲಾಗಿದ್ದು, ಸದಸ್ಯರೆಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದಾರೆ.

ಅನುಪಮಾ ಅವರನ್ನು ಕನ್ ಫೆಷನ್ ರೂಂಗೆ ಕರೆದ ‘ಬಿಗ್ ಬಾಸ್’ ಮನೆಯಲ್ಲಿನ ಅನುಭವ ಹೇಗಿದೆ ಎಂದು ಕೇಳಿದ್ದು, ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮೊದಲಿಗೆ ಭಾವುಕಳಾಗಿದ್ದರೂ, ನಂತರದಲ್ಲಿ ಸುಧಾರಿಸಿಕೊಂಡಿದ್ದೇನೆ. ಇನ್ನು ಮುಂದೆ ಗೇಮ್ ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಚಂದನ್ ಬಳಿ ಮಾತನಾಡುತ್ತಿದ್ದ ನಿವೇದಿತಾ, ಮುಂಚೆ ಮನೆ ತುಂಬಿತ್ತು. ಎತ್ತ ನೋಡಿದ್ರೂ ಒಬ್ಬರಲ್ಲ ಒಬ್ರು ಕಾಣ್ತಿದ್ರು. ಈಗ ಖಾಲಿ ಖಾಲಿಯಾದಂತಿದೆ ಎಂದಿದ್ದಾರೆ.

ಚಂದನ್, ಒಂದಂತೂ ಸತ್ಯ. ನಾನು ಆಲ್ ರೆಡಿ ವಿನ್ ಆಗಿದ್ದೇನೆ. ಲೈಫ್ ನಲ್ಲಿ ವಿನ್ ಆಗಿದ್ದೇನೆ. ಇಲ್ಲಿ ಯಾರು ಗೆಲ್ತಾರೆ ಎಂಬುದು ಗೊತ್ತಿಲ್ಲ. ನಾನು ಗೆದ್ದಿದ್ದೇನೆ. ನನ್ನಲ್ಲಿ ಬದಲಾವಣೆಯಾಗಿದೆ. ಪೀಸ್ ಫುಲ್ ಆಗಿದ್ದೇನೆ. ನಾನು ಬಂದ ಉದ್ದೇಶ ಶೇ. 75 ರಷ್ಟು ಆಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಬಳಿ ಮಾತನಾಡ್ತಿದ್ದ ಶ್ರುತಿ ಅವರು, ಚಂದನ್, ಸಮೀರ್ ನಾಮಿನೇಟ್ ಆಗಿಲ್ಲ ಎಂದು ಹೇಳಿದರೆ, ಚಂದು ನಾಮಿನೇಟ್ ಆಗ್ತಿಲ್ಲ ಎಂದು ಕೃಷಿ ಪ್ರತಿಕ್ರಿಯೆ ನೀಡಿದ್ದಾರೆ. ವಿವಿಧ ಸವಾಲ್ ಗಳನ್ನು ಸದಸ್ಯರಿಗೆ ನೀಡಲಾಗಿದ್ದು, ತಂಡದ ನಾಯಕರಾಗಿದ್ದ ಸಮೀರಾಚಾರ್ಯ ಮತ್ತು ಅನುಪಮಾ ಅವರು ತಮ್ಮ ತಂಡಕ್ಕೆ ಸಮಯ ನಿಗದಿಪಡಿಸಿದ್ದಾರೆ. ಬಣ್ಣದ ಕಾಯಿನ್ ಗಳನ್ನು ಬಚ್ಚಿಟ್ಟು ಎದುರಾಳಿ ತಂಡದ ಸದಸ್ಯರು ಹುಡುಕುವ ಪ್ರಯತ್ನ ನಡೆಸಿದ್ದು ತಮಾಷೆಯಾಗಿತ್ತು. ಸಮೀರಾಚಾರ್ಯ ಕನ್ ಫೆಷನ್ ರೂಂನಲ್ಲೇ ನಿದ್ದೆ ಮಾಡಿದ್ದು, ‘ಎದ್ದೇಳು ಮಂಜುನಾಥ’ ಹಾಡು ಕೇಳಿ ಬಂದಿದೆ.

ಶ್ರುತಿಗೆ ಜಡೆ ಹಾಕುವುದರ ಕುರಿತಾಗಿ ಕೃಷಿ, ಕಾರ್ತಿಕ್ ತಿಳಿಸಿಕೊಡಲು ಮುಂದಾಗಿದ್ದು, ಇದಕ್ಕೆ ಶ್ರುತಿ ಪ್ರಯತ್ನಿಸಿ ವಿಫಲರಾಗಿದ್ದಾರೆ.

ಸಮೀರಾಚಾರ್ಯ ಆಡಿದ ಮಾತಿಗೆ ರಿಯಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೈಟ್ ಖರೀದಿಸಿದ್ದು, ತಮ್ಮ ಮನೆ ಕಟ್ಟುವ ಕನಸು ಕುರಿತಾಗಿ ಅವರು ಹೇಳಿಕೊಂಡಿದ್ದಾರೆ. ನಾವು ಇಲ್ಲಿಗೆ ಬಂದಿರುವುದು ನಮ್ಮ ಆಟವಾಡಿ ಗೆಲ್ಲಬೇಕು ಎಂಬ ಕಾರಣದಿಂದ. ನಾನು ಯಾರಾದ್ರೂ ಕೆಣಕಿದ್ರೆ  ಸುಮ್ಮನಿರಲ್ಲ. ನೀವು ಫ್ರೆಂಡ್ ಆಗಿದ್ರಿಂದ ಇದನ್ನು ಹೇಳುತ್ತಿದ್ದೇನೆ. ನನಗೆ ಮನೆ ಕಟ್ಟಲು ಫಸ್ಟ್ ಫ್ರೈಜ್ ಗೆಲ್ಲಬೇಕಿದೆ. ನಾನು ಟೈಂ ಪಾಸ್ ಗಾಗಿ, ಮಜಾ ಮಾಡಲು ಇಲ್ಲಿಗೆ ಬಂದಿಲ್ಲ. ನೀವು ಮೊಬೈಲ್ ಸಿಕ್ಕಾಗ ನನ್ನ ಬಗ್ಗೆ ಡೌಟ್ ಪಟ್ಟಿದ್ದು ಸರಿನಾ ಎಂದು ಪ್ರಶ್ನಿಸಿದ್ದು, ಸಮೀರಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ರಿಯಾಜ್ ಅದನ್ನು ಒಪ್ಪಿಕೊಳ್ಳದೇ ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...