alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ನಡೀತು 2 ಜೋಡಿ ಮದುವೆ

‘ಬಿಗ್ ಬಾಸ್’ ಮನೆಯೊಳಗೆ ಸದಸ್ಯರ ಕುಟುಂಬದವರು ಭೇಟಿ ನೀಡಿದ ಸಂದರ್ಭದಲ್ಲಿ ಅವರ ಜೋಡಿ ಸದಸ್ಯರು ಮಡಿಕೆಯನ್ನು ಬ್ಯಾಲೆನ್ಸ್ ಮಾಡಿ ಹಿಡಿದಿಟ್ಟುಕೊಳ್ಳಬೇಕಿದೆ.

ಸಮೀರಾಚಾರ್ಯ ಅವರ ಪತ್ನಿ ಮನೆಯೊಳಗೆ ಆಗಮಿಸಿದಾಗ ಪಾಸ್ ಸೂಚನೆ ನೀಡಲಾಗಿದೆ. ಸಮೀರ್ ಅವರಿಗೆ ನಮಸ್ಕರಿಸಿದ ಅವರ ಪತ್ನಿ ಶ್ರಾವಣಿ ತನಗೆ ಇದು ಕನಸಿನಂತಾಗಿದೆ ಎಂದು ಹೇಳಿದ್ದಾರೆ.

ನಾನು ಬಹಳ ಹೊತ್ತು ಎಲ್ಲರೊಂದಿಗೆ ಇರಬೇಕು. ಮಡಿಕೆಯನ್ನು ಬ್ಯಾಲೆನ್ಸ್ ಮಾಡಿ ಎಂದು ಕಾರ್ತಿಕ್ ಗೆ ಹೇಳಿದ್ದಾರೆ. ಎಲ್ಲಾ ಸದಸ್ಯರನ್ನು ಮಾತನಾಡಿಸಿದ್ದಾರೆ. ಪಾಸ್ ಸೂಚನೆ ಇದ್ದ ಕಾರಣ ‘ಬಿಗ್ ಬಾಸ್’ ಪ್ಲೇ ಮಾಡಿ ಎಂದು ಮನವಿ ಮಾಡಿದ್ದಾರೆ.

ಮನೆಯೊಳಗೆ ಸಮೀರ್ ಅವರು ಪತ್ನಿಯೊಂದಿಗೆ ಮತ್ತೆ ಹಾರ ಬದಲಿಸಿಕೊಂಡು ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಸದಸ್ಯರೆಲ್ಲಾ ಭಾಗಿಯಾಗಿದ್ದಾರೆ. ನಾವು ಮದುವೆಗೆ ಕರೆಯಲು ಆಗಲಿಲ್ಲ. ಇಲ್ಲಿ ಮದುವೆಯಾಗ್ತಿದ್ದೇವೆ ಎಂದು ಶ್ರಾವಣಿ ಅವರು ಹೇಳಿದ್ದಾರೆ. ಮನೆಯೊಳಗೆ ಮದುವೆ ಸನ್ನಿವೇಶ ಸಂಭ್ರಮದಿಂದ ಕೂಡಿತ್ತು.

ಇನ್ನು ಮನೆಯೊಳಗೆಲ್ಲಾ ಓಡಾಡಿ, ಎಲ್ಲರನ್ನೂ ವಿಚಾರಿಸಿದ್ದಾರೆ. ಕಾರ್ತಿಕ್ ಮಡಿಕೆ ಬ್ಯಾಲೆನ್ಸ್ ಮಾಡುವಲ್ಲಿ ಸರ್ಕಸ್ ಮಾಡಿದ್ದಾರೆ. ಸಮೀರ್ ಗೆ ಅವರಿಗೆ ವಿನ್ ಆಗಿ ಬರಬೇಕೆಂದು ಅವರ ಪತ್ನಿ ಪ್ರಾಮಿಸ್ ಮಾಡಿದ್ದಾರೆ. ಸಮೀರ್ ದಂಪತಿಗಾಗಿ ಚಂದನ್ ಹಾಡು ಹಾಡಿದ್ದು ಚಂದನ್ ಹಾಡಿಗೆ ಸಮೀರ್ ದಂಪತಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

ಇನ್ನು ಮನೆಯೊಳಗೆ ಪಾಸ್, ಪ್ಲೇ ಸೂಚನೆಯ ವೇಳೆ ಕಾರ್ತಿಕ್ ಮತ್ತು ಶ್ರುತಿ ಅವರಿಗೆ ಸದಸ್ಯರೆಲ್ಲಾ ಸೇರಿ ತಮಾಷೆಗಾಗಿ ಮದುವೆ ಮಾಡಿದ ಸನ್ನಿವೇಶ ಹಾಸ್ಯಮಯವಾಗಿತ್ತು.

ಸದಸ್ಯರು ಬೇರೆ ಸದಸ್ಯರ ರೀತಿ ನಟಿಸಿದ್ದು, ಶ್ರುತಿ ಅವರು ನಿವೇದಿತಾ ರೀತಿ, ನಿವೇದಿತಾ ಅವರು ದಿವಾಕರ್ ರೀತಿ ನಟಿಸಿದ್ದಾರೆ. ಕಾರ್ತಿಕ್(ಅನುಪಮಾ), ಅನುಪಮಾ(ಶ್ರುತಿ), ದಿವಾಕರ್(ಚಂದನ್), ಸಮೀರ್(ಕಾರ್ತಿಕ್), ಚಂದನ್(ರಿಯಾಜ್), ರಿಯಾಜ್(ಸಮೀರ್) ಅವರ ರೀತಿಯಲ್ಲೇ ಆಕ್ಟಿಂಗ್ ಮಾಡಿ ತೋರಿಸಿದ್ದಾರೆ. ಹೀಗೆ ಸದಸ್ಯರೆಲ್ಲಾ ಬೇರೆ ಸದಸ್ಯರ ರೀತಿ ನಟಿಸಿದ ಸನ್ನಿವೇಶವಂತೂ ಹಾಸ್ಯಮಯವಾಗಿತ್ತು. ದೈಹಿಕ ಕ್ಷಮತೆ ಪರೀಕ್ಷಿಸಲು ನೀಡಲಾದ ಚಟುವಟಿಕೆಯಲ್ಲಿ ಕಾರ್ತಿಕ್, ದಿವಾಕರ್, ರಿಯಾಜ್ ಬಹುಬೇಗನೆ ಮುಗಿಸಿದ್ದಾರೆ.

ಈ ವಾರ ರಿಯಾಜ್, ಚಂದನ್, ಕಾರ್ತಿಕ್, ಶ್ರುತಿ, ಸಮೀರ್, ನಿವೇದಿತಾ ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...