alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಸಮೀರಾಚಾರ್ಯ ರೌದ್ರಾವತಾರ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದ ತೇಜಸ್ವಿನಿ ಅವರು, ತಮ್ಮ ತಂದೆಯ ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಗೆ ಹೋಗಿದ್ದಾರೆ.

ಯಾರೂ ಜಗಳವಾಡಬೇಡಿ. ಚೆನ್ನಾಗಿ ಆಡಿ. ನೀವೆಲ್ಲಾ ನನಗೆ ಅಕ್ಕಂದಿರು ತಂಗಿಯರ ರೀತಿ ಇದ್ರಿ. ನಾನು ಯಾರಿಗಾದರೂ ನೋವು ಮಾಡಿದ್ದರೆ, ಬೇಜಾರು ಮಾಡಿಕೊಳ್ಳಬೇಡಿ ಎಂದು ತೇಜಸ್ವಿನಿ ಅಳುತ್ತಾ ಹೇಳಿದ್ದು, ಅವರಿಗೆ ಮನೆಯ ಸದಸ್ಯರು ಸಮಾಧಾನಪಡಿಸಿದ್ದಾರೆ. ಬಳಿಕ ತೇಜಸ್ವಿನಿ ಮನೆಯಿಂದ ಹೊರಗೆ ಹೋಗಿದ್ದು, ಅವರು ಮತ್ತೆ ಬರುವ ಸಾಧ್ಯತೆ ಇದೆ.

ಇನ್ನು ಮನೆಯ ಸದಸ್ಯರಿಗೆ ನೀಡಲಾಗಿದ್ದ ಲಕ್ಸುರಿ ಬಜೆಟ್ ಟಾಸ್ಕ್ ನ ತಾಂಬೂಲ ಬೇಕು ಸವಾಲ್ ನಲ್ಲಿ ಸದಸ್ಯರೆಲ್ಲಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಒಂದು ತಂಡದಿಂದ ನಿವೇದಿತಾ ಮತ್ತೊಂದು ತಂಡದಿಂದ ಸಿಹಿಕಹಿ ಚಂದ್ರು ಅವರನ್ನು ದುರ್ಬಲ ಸದಸ್ಯರೆಂದು ಆಯ್ಕೆ ಮಾಡಿದ್ದು, ಅವರು ತಾಂಬೂಲವನ್ನು ಪರಿಶೀಲಿಸಿದ್ದಾರೆ.

ತಾಂಬೂಲಕ್ಕಾಗಿ ತೆಂಗಿನ ಕಾಯಿಯನ್ನು ಸಂಗ್ರಹಿಸುವ ವೇಳೆ ಚಂದನ್, ಕಾರ್ತಿಕ್, ಆಶಿತಾ ಅವರು ಪೆಟ್ಟು, ಗಾಯ ಮಾಡಿಕೊಂಡಿದ್ದಾರೆ.

ತೆಂಗಿನ ಕಾಯಿ ಹಿಡಿಯುವ ಸಂದರ್ಭದಲ್ಲಿ ಸಮೀರಾಚಾರ್ಯ ರೌದ್ರಾವತಾರ ತಾಳಿದ್ದಾರೆ. ಅವರು ಚಂದನ್, ಜಗನ್ ಮತ್ತು ರಿಯಾಜ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇನ್ನು ರಿಯಾಜ್ ಮತ್ತು ಜಗನ್ ನಡುವೆ ಮಾತಿನ ಚಕಮಕಿ ನಡೆದಿದೆ.

ಅಡುಗೆ ಮನೆಯಲ್ಲಿ ಕ್ಲೀನಿಂಗ್ ಮಾಡುವ ವೇಳೆ ಚಂದನ್ ಮತ್ತು ಆಶಿತಾ ಅವರ ನಡುವೆ ವಾಗ್ವಾದ ನಡೆದಿದೆ. ಅದರಲ್ಲಿಯೂ ತಾಂಬೂಲ ಬೇಕು ಸವಾಲ್ ನಲ್ಲಿ ಸದಸ್ಯರು ಜಗಳದ ನಡುವೆಯೂ ಹೆಚ್ಚು ಶ್ರಮ ವಹಿಸಿದ್ದಾರೆ. ಲಾಟೀನ್ ಸಮೀರ್ ಅವರಿಂದ ಕೃಷಿ ಅವರಿಗೆ ವರ್ಗಾವಣೆಯಾಗಿದೆ. ಲಾಟೀನು ಕೆಳಗಿಟ್ಟ ಕಾರಣಕ್ಕಾಗಿ ಅವರು ಶಿಕ್ಷೆ ಅನುಭವಿಸುವಂತಾಗಿದೆ.

ಜಗನ್ ತಂಡ 119 ಮತ್ತು ರಿಯಾಜ್ ತಂಡ 124 ತಾಂಬೂಲಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಕಾಪಾಡಿಕೊಳ್ಳಲು ಕಸರತ್ತು ನಡೆದಿದೆ. ಈ ನಡುವೆ ಅನುಪಮಾ ಮತ್ತು ಜಗನ್ ಅವರ ನಡುವೆ ಮಾತಿಗೆ ಮಾತು ಬೆಳೆದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...