alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ‘ಕಿರಿಕ್ ಪಾರ್ಟಿ’ ನಿರ್ದೇಶಿಸಿದ ಪ್ರಥಮ್

big-rax-rishab‘ಬಿಗ್ ಬಾಸ್’ ಮನೆಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದ ‘ಕಿರಿಕ್ ಪಾರ್ಟಿ’ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಶಬ್ ಶೆಟ್ಟಿ ಮನೆಯ ಸದಸ್ಯರೆಲ್ಲರಿಗೆ ವಿವಿಧ ಚಟುವಟಿಕೆ ನೀಡಿದ್ದಾರೆ.

ಈ ವಾರ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರಿಂದ ಯಾರೂ ಕ್ಯಾಪ್ಟನ್ ಆಗಿಲ್ಲ. ‘ಬಿಗ್ ಬಾಸ್’ ಅವರೇ ಕ್ಯಾಪ್ಟನ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮನೆಯ ಸದಸ್ಯರು ಮೂಲ ನಿಯಮಗಳನ್ನು ಪಾಲಿಸುವ ಜೊತೆಗೆ, ರಕ್ಷಿತ್ ಶೆಟ್ಟಿ ಮತ್ತು ರಿಶಬ್ ಶೆಟ್ಟಿ ಅವರನ್ನು ‘ಅತಿಥಿ ದೇವೋಭವ’ ರೀತಿಯಲ್ಲಿ ಕಾಣಬೇಕೆಂದು ತಿಳಿಸಲಾಗಿದೆ.

ನಿಯಮ ಪಾಲಿಸದ ಸದಸ್ಯರಿಗೆ ಹಳದಿ ಕಾರ್ಡ್ ನೀಡಲಿದ್ದು, 5 ಕಾರ್ಡ್ ಪಡೆದುಕೊಂಡ ಸದಸ್ಯರು ಮುಂದಿನ ವಾರಕ್ಕೆ ನೇರ ನಾಮಿನೇಟ್ ಆಗಲಿದ್ದಾರೆ. ಜೊತೆಗೆ ಸಂಪೂರ್ಣ ಶಿಸ್ತು ಪಾಲಿಸದಿದ್ದಲ್ಲಿ ಲಕ್ಸುರಿ ಬಜೆಟ್ ಪಾಯಿಂಟ್ ಕಟ್ ಮಾಡುವುದಲ್ಲದೇ, ವಿವಿಧ ಸೌಲಭ್ಯಗಳನ್ನು ಕಡಿತಗೊಳಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿತ್ತು.

ಸದಸ್ಯರಿಗೆ ರಕ್ಷಿತ್ ಶೆಟ್ಟಿ ಮತ್ತು ರಿಶಬ್ ಶೆಟ್ಟಿ ವಿವಿಧ ಚಟುವಟಿಕೆಗಳನ್ನು ನೀಡಿದ್ದರು. ಅದರಂತೆ ಪ್ರಥಮ್ ನಿರ್ದೇಶಕನಾಗಿ ‘ಕಿರಿಕ್ ಪಾರ್ಟಿ’ ಹೆಸರಿನಲ್ಲೇ ಕಿರು ಚಿತ್ರವನ್ನು ನಿರ್ದೇಶಿಸಿದ್ದು, ಅದರಲ್ಲಿ ಸದಸ್ಯರೆಲ್ಲಾ ಅಭಿನಯಿಸಿದ್ದಾರೆ.

ಸಂಜನಾ, ಪ್ರಥಮ್ ಮೊದಲಾದವರು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪಾಯಿಂಟ್ ಕಡಿತಗೊಂಡಿವೆ. ಶೀತಲ್ ಶೆಟ್ಟಿ, ಕಾರುಣ್ಯ, ಕೀರ್ತಿ, ಶಾಲಿನಿ, ಮಾಳವಿಕಾ, ರೇಖಾ, ಮೋಹನ್ ಅತಿಥಿಗಳು ತಮಗೆ ನೀಡಲಾದ ಚಟುವಟಿಕೆಯನ್ನು ಪೂರ್ಣಗೊಳಿಸಿದ್ದಾರೆ.

ಮನೆಯಲ್ಲಿ ಇಡೀ ದಿನ ಕಳೆದ ರಕ್ಷಿತ್ ಮತ್ತು ರಿಶಬ್ ಅವರಿಗೆ ಸದಸ್ಯರೆಲ್ಲಾ ‘ಕಿರಿಕ್ ಪಾರ್ಟಿ’ ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿ ಬೀಳ್ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...