alex Certify
ಕನ್ನಡ ದುನಿಯಾ       Mobile App
       

Kannada Duniya

ಗೆದ್ದ 40 ಲಕ್ಷದಲ್ಲಿ 20 ಲಕ್ಷ ಸಲ್ಮಾನ್ ಖಾನ್ ಗೆ ನೀಡ್ತಾರೆ ಮನವೀರ್

fgsgsgsg-574x395

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4ರ ಟ್ರೋಫಿ ಪ್ರಥಮ್ ಕೈ ಸೇರಿದೆ. ಇತ್ತ ಭಾನುವಾರವೇ ಹಿಂದಿಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ನ ಅಂತಿಮ ಆಯ್ಕೆ ಕೂಡ ನಡೆದಿದೆ. ನೋಯ್ಡಾದ ಮನ್ ವೀರ್ ಗುರ್ಜರ್ ಬಿಗ್ ಬಾಸ್ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಸೆಲೆಬ್ರಿಟಿ ಮತ್ತು ಶ್ರೀಸಾಮಾನ್ಯನ ನಡುವೆ ಈ ಬಾರಿ ಬಿಗ್ ಬಾಸ್ ಟ್ರೋಫಿಗಾಗಿ ಫೈಟ್ ನಡೆದಿತ್ತು. ಸೆಲಿಬ್ರಿಟಿ ವಿಜೆ ಬಾನಿ ಹಿಂದಿಕ್ಕಿದ ಮನ್ ವೀರ್, ಬಿಗ್ ಬಾಸ್ ಸೀಸನ್ 10 ಪ್ರಶಸ್ತಿ ಗೆದ್ದಿದ್ದಾರೆ. ಇದ್ರ ಜೊತೆಗೆ 40 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್ ಬಾಸ್ ನನ್ನನ್ನು ಸಂಪೂರ್ಣ ರೂಪಾಂತರಗೊಳಿಸಿದೆ ಎಂದಿರುವ ಮನ್ ವೀರ್ ಇಂಡಿಯನ್ ಪರವಾಗಿ ನಾನು ಸ್ಪರ್ಧಿಸಿದ್ದೆ. ಈ ಬಿಗ್ ಬಾಸ್ ನನ್ನ ಲುಕ್ ನಿಂದ ಹಿಡಿದು ಎಲ್ಲವನ್ನೂ ಬದಲಾಯಿಸಿದೆ ಎಂದಿದ್ದಾರೆ. ತಾವು ಗೆದ್ದ 40 ಲಕ್ಷ ರೂಪಾಯಿಯನ್ನು ಅಪ್ಪನಿಗೆ ನೀಡಿದ್ದು, ಇದಕ್ಕೆಲ್ಲ ತಂದೆಯೇ ಕಾರಣ ಎಂದಿದ್ದಾರೆ. ಹಾಗೆ ಗೆದ್ದ ಹಣದಲ್ಲಿ ಶೇಕಡಾ 50ರಷ್ಟನ್ನು ಸಲ್ಮಾನ್ ಖಾನ್ ನಡೆಸುತ್ತಿರುವ ಬೀಯಿಂಗ್ ಹ್ಯೂಮನ್  ಎನ್ ಜಿಒಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮನ್ ವೀರ್ ಮತ್ತು ವಿಜೆ ಬಾನಿ ಜೊತೆ ಮನು ಪಂಜಾಬಿ ಹಾಗೂ ಲೋಪಮುದ್ರ ಕೂಡ ಅಂತಿಮ ಸ್ಪರ್ಧೆಯಲ್ಲಿದ್ದರು. ಆದ್ರೆ ಮನು ಪಂಜಾಬಿ ಬಿಗ್ ಬಾಸ್ ಆಫರ್ ಮಾಡಿದ್ದ 10 ಲಕ್ಷ ಪಡೆದು ಮನೆಯಿಂದ ಹೊರನಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...