alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ ಆದ ಕಾಮನ್ ಮ್ಯಾನ್

ಮೊದಲ ವಾರ ತಣ್ಣಗಿದ್ದ ‘ಬಿಗ್ ಬಾಸ್’ ಮನೆಯಲ್ಲಿ 2 ನೇ ವಾರ ಕಾವೇರಿತ್ತು. 3 ನೇ ವಾರ ಮನೆಯಲ್ಲಿ ಕಾಮನ್ ಮ್ಯಾನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಕ್ಯಾಪ್ಟನ್ ಆಯ್ಕೆಗೆ ನೀಡಲಾಗಿದ್ದ ಹಗ್ಗ ಸುತ್ತುವ ಟಾಸ್ಕ್ ನಲ್ಲಿ ಸಮೀರಾಚಾರ್ಯ ಮೊದಲಿಗರಾಗಿದ್ದು, ಅವರೇ ಕ್ಯಾಪ್ಟನ್ ಆಗಿದ್ದಾರೆ. ಮೇಘಾ ಮನೆಯಿಂದ ಹೊರ ಹೋಗುವ ಮೊದಲು ‘ಬಿಗ್ ಬಾಸ್’ ಸೂಚನೆಯಂತೆ ದಿವಾಕರ್ ಅವರಿಗೆ ಸೂಪರ್ ಅಧಿಕಾರವೊಂದನ್ನು ನೀಡಿದ್ದರು.

ಅದರಂತೆ ದಿವಾಕರ್ ಕ್ಯಾಪ್ಟನ್ ಆಯ್ಕೆಗೆ ಸ್ಪರ್ಧಿಗಳಾಗಿ ಸಿಹಿಕಹಿ ಚಂದ್ರು, ಸಮೀರಾಚಾರ್ಯ, ಜಯಶ್ರೀನಿವಾಸನ್, ರಿಯಾಜ್, ದಯಾಳ್ ಹಾಗೂ ಚಂದನ್ ಅವರನ್ನು ಆಯ್ಕೆ ಮಾಡಿದ್ದರು. ಈ 6 ಮಂದಿ ಸ್ಪರ್ಧಿಗಳಿಗೆ ನೀಡಲಾದ ಟಾಸ್ಕ್ ನಲ್ಲಿ ಸಮೀರಾಚಾರ್ಯ ಮೊದಲಿಗರಾಗಿ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟನ್ ಆದ ಬಳಿಕ ಅವರು ಮನೆಯ ಸದಸ್ಯರಿಗೆ ಯಾರು ಯಾವ ಕೆಲಸ ಮಾಡಬೇಕೆಂಬುದನ್ನು ಹಂಚಿಕೆ ಮಾಡಿದ್ದಾರೆ. ನಂತರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, 3 ನೇ ವಾರದಲ್ಲಿ ರಿಯಾಜ್, ಜಯಶ್ರೀನಿವಾಸನ್, ದಯಾಳ್, ನಿವೇದಿತಾ ಅವರು ನಾಮಿನೇಟ್ ಆಗಿದ್ದಾರೆ.

ಕಳೆದ ವಾರ ನಿಯಮ ಮೀರಿದ ಕಾರಣಕ್ಕೆ ದಿವಾಕರ್ ಮತ್ತು ಶ್ರುತಿ ನೇರ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಸಮೀರಾಚಾರ್ಯ ‘ಬಿಗ್ ಬಾಸ್’ ಸೂಚನೆಯಂತೆ ಒಬ್ಬರನ್ನು ನಾಮಿನೇಟ್ ಮಾಡಬೇಕಿದ್ದು, ಅವರು ಅನುಪಮಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

3 ನೇ ವಾರದ ಮೊದಲ ದಿನ ಮನೆಯಲ್ಲಿ ಸದಸ್ಯರೆಲ್ಲರೂ ಒಂದಾಗಿರುವಂತೆ ಕಂಡು ಬಂದಿದೆ. ದಿವಾಕರ್, ರಿಯಾಜ್ ಮತ್ತು ಸಮೀರಾಚಾರ್ಯ ಒಟ್ಟಿಗೆ ಸೇರಿ ಮನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾತಾಡಿಕೊಂಡಿದ್ದಾರೆ.

ದಯಾಳ್ ಹಾಗೂ ರಿಯಾಜ್ ಮಾತನಾಡುವ ಮೂಲಕ ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ದೂರಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...