alex Certify
ಕನ್ನಡ ದುನಿಯಾ       Mobile App
       

Kannada Duniya

ಮಾತು ಬಿಟ್ಟ ಸದಸ್ಯರು, ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ

‘ಬಿಗ್ ಬಾಸ್’ನಲ್ಲಿ ಸದಸ್ಯರಿಗೆ ‘ಕಾಲಾಯ ತಸ್ಮೈ ನಮಃ’ ಲಕ್ಸುರಿ ಬಜೆಟ್ ಟಾಸ್ಕ್ ನೀಡಲಾಗಿದ್ದು, ಸದಸ್ಯರ ನಡುವೆ 2 ತಂಡಗಳನ್ನು ಮಾಡಲಾಗಿದೆ. 1 ತಂಡಕ್ಕೆ ಕ್ಯಾಪ್ಟನ್ ಸಮೀರಾಚಾರ್ಯ, ಮತ್ತೊಂದು ತಂಡಕ್ಕೆ ಅನುಪಮಾ ಅವರು ನಾಯಕರಾಗಿದ್ದಾರೆ.

ಅನುಪಮಾ ತಂಡದಲ್ಲಿ ಚಂದನ್, ರಿಯಾಜ್ ಹಾಗೂ ನಿವೇದಿತಾ ಅವರಿದ್ದು, ಸಮೀರ್ ತಂಡದಲ್ಲಿ ಕಾರ್ತಿಕ್, ಕೃಷಿ ಹಾಗೂ ಶ್ರುತಿ ಅವರಿದ್ದಾರೆ. ಇದರಲ್ಲಿ ನೀಡಲಾಗಿದ್ದ ಮೊದಲ ಚಟುವಟಿಕೆಯಲ್ಲಿ ಚಂದನ್, 2 ನೇ ಚಟುವಟಿಕೆಯಲ್ಲಿ ಶ್ರುತಿ ಅವರು ವಿಜೇತರಾಗಿದ್ದಾರೆ. ತಮ್ಮ ತಂಡ ಜಯಗಳಿಸಿದೆ ಎಂಬುದು ಗೊತ್ತಾಗುತ್ತಲೇ ಸಮೀರಾಚಾರ್ಯ ಕುಣಿದು ಕುಪ್ಪಳಿಸಿದ್ದಾರೆ. ಅವರು ಖುಷಿಯಲ್ಲಿ ಟೇಬಲ್ ಗೆ ಗುದ್ದಿದ್ದಕ್ಕೆ ಅನುಪಮಾ ಎಚ್ಚರಿಸಿದ್ದಾರೆ.

ಮನೆಯಲ್ಲಿ ಜಯಶ್ರೀನಿವಾಸನ್ ವಿಚಾರವಾಗಿ ಚಂದನ್, ನಿವೇದಿತಾ, ರಿಯಾಜ್ ಹಾಗೂ ಸಮೀರ್ ಅವರ ನಡುವೆ ಚರ್ಚೆ ನಡೆದಿದೆ. ಪ್ರತಿಯೊಂದಕ್ಕೂ ಸಂಖ್ಯಾಶಾಸ್ತ್ರವನ್ನು ಅವರು ಅನ್ವಯಿಸುತ್ತಿದ್ದ ಬಗ್ಗೆ ಚಂದನ್ ವ್ಯಂಗ್ಯವಾಡಿದ್ದಾರೆ.

ನಾನು ಈ ವಾರ ಮನೆಯಿಂದ ಹೊರ ಹೋಗಲಿದ್ದೇನೆ ಎಂದು ಕಾರ್ತಿಕ್ ಹೇಳಿದ್ದು, ಇದಕ್ಕೆ ಸಮೀರಾಚಾರ್ಯ ದನಿಗೂಡಿಸಿದ್ದಾರೆ. ಇಬ್ಬರ ನಡುವೆ ಚರ್ಚೆ ನಡೆದು ಬೆಟ್ಟಿಂಗ್ ಕಟ್ಟಿದ್ದಾರೆ. ಮಧ್ಯೆ ಮಾತನಾಡಿದ ನಿವೇದಿತಾ ಯಾರು ಏನಾದ್ರೂ ಆಗಲಿ, ನಾನು ಟಾಪ್ 5 ರಲ್ಲಿ ಒಬ್ಬಳಾಗಿರುತ್ತೇನೆ ಎಂದು ಹೇಳಿದ್ದು, ಆಗ ಕೆಲವು ಸದಸ್ಯರು ಆಕ್ಷೇಪಿಸಿದ್ದಾರೆ. ನಾನು ತಮಾಷೆಗೆ ಹೇಳಿದ್ದು ಎಂದು ನಿವೇದಿತಾ ಹೇಳಿದರಾದರೂ, ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.

ನನ್ನನ್ನು ಯಾರೂ ಮಾತನಾಡಿಸಬೇಡಿ ಎಂದು ನಿವೇದಿತಾ ಅಳುತ್ತಾ ಹೇಳಿದ್ದಾರೆ. ಅದಕ್ಕೆ ಎಲ್ಲಾ ಸದಸ್ಯರು ನಿವೇದಿತಾ ಅವರೊಂದಿಗೆ ಮಾತು ನಿಲ್ಲಿಸಿದ್ದು. ಇದರಿಂದ ಬೇಸರಗೊಂಡ ನಿವೇದಿತಾ ಅತ್ತಿದ್ದಾರೆ. ಸದಸ್ಯರೆಲ್ಲರನ್ನೂ ಅವರು ಮಾತನಾಡಿಸಲು ಪ್ರಯತ್ನಿಸಿದರೂ, ಯಾರೂ ಸ್ಪಂದಿಸಿಲ್ಲ. ಕೊನೆಗೆ ಸಮೀರಾಚಾರ್ಯ ನಂತರದಲ್ಲಿ ರಿಯಾಜ್ ನಿವೇದಿತಾರನ್ನು ಮಾತನಾಡಿಸಿ ಸಮಾಧಾನಪಡಿಸಿದ್ದಾರೆ.

ಸೀಕ್ರೆಟ್ ರೂಂನಲ್ಲಿರುವ ದಿವಾಕರ್ ಇಲ್ಲಿ ಇರಲಾಗ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲಿಂದಲೇ ಮನೆಯೊಳಗಿನ ಸದಸ್ಯರ ಚಟುವಟಿಕೆಗಳನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...