alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಹೊಸ ವರ್ಷಕ್ಕೆ ವೈನ್ ಕೇಳಿದ ದಿವಾಕರ್

‘ಬಿಗ್ ಬಾಸ್’ ಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಈ ವಾರ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆಯಾಗಿದ್ದು, ಸೀಕ್ರೆಟ್ ರೂಂನಲ್ಲಿರುವ ದಿವಾಕರ್ ವೈನ್ ಕೇಳಿದ್ದಾರೆ.

‘ಬಿಗ್ ಬಾಸ್’ ನಲ್ಲಿ ಸದಸ್ಯರಿಗೆ ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾಗಿದ್ದ ಚಟುವಟಿಕೆಯಲ್ಲಿ ಕೊನೆಯವರೆಗೂ ಉಳಿದ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಬೀಗದ ಕೈಗಳನ್ನು ಕೈಯಲ್ಲಿಡಿದು ಅಲ್ಲಾಡದಂತೆ ಹಿಡಿದುಕೊಳ್ಳಬೇಕಿತ್ತು. ಸದಸ್ಯರೆಲ್ಲಾ ಕೈ ಬಿಟ್ಟ ಬಳಿಕ ಕೊನೆಯವರೆಗೂ ಕೃಷಿ, ಅನುಪಮಾ ಹಾಗೂ ಸಮೀರಾಚಾರ್ಯ ಉಳಿದುಕೊಂಡಿದ್ದು, ಅವರಲ್ಲಿ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಸೀಕ್ರೆಟ್ ರೂಂನಲ್ಲಿ ದಿವಾಕರ್ ಮಾತನಾಡುತ್ತಾ, ಚಂದನ್ ಶೆಟ್ಟಿ ಒಳ್ಳೆಯ ಸ್ನೇಹಿತನಾಗಿದ್ದರು. ಎಲ್ಲರೂ ಒಳ್ಳೆಯವರು. ಜಯಶ್ರೀನಿವಾಸನ್ ಕೂಡ ಒಳ್ಳೆಯವರು. ಅವರು ನೋವಾದಾಗ ಮಾತ್ರ ನನಗೆ ಮಾತನಾಡಿದ್ದರು. ಅವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ. ಮನೆಯೊಳಗೆ ಕಾರ್ತಿಕ್, ಕೃಷಿ, ಅನುಪಮಾ ಅವರು ತನ್ನ ಬಗ್ಗೆ ಮಾತನಾಡಿಕೊಂಡಿದ್ದನ್ನು ದಿವಾಕರ್ ಕೇಳಿಸಿಕೊಂಡಿದ್ದಾರೆ.

ಈ ವಾರ ಸದಸ್ಯರ ಆಯ್ಕೆಯನುಸಾರ ಮನೆಯಿಂದ ಹೊರ ಹೋಗಲು ರಿಯಾಜ್, ಶ್ರುತಿ, ನಿವೇದಿತಾ, ಕಾರ್ತಿಕ್, ಕೃಷಿ ಅವರು ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ಸಮೀರಾಚಾರ್ಯ, ಅನುಪಮಾ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಆದ ಸಮೀರಾಚಾರ್ಯ ಅವರಿಗೆ ತಂದೆಯ ಧ್ವನಿ ಮುದ್ರಿಕೆ ಕೇಳಿಸಲಾಗಿದೆ. ಶ್ರುತಿ ಅವರಿಗೆ ಇದುವರೆಗೂ ಮನೆಯಿಂದ ಯಾವುದೇ ಸಂದೇಶ ಬಾರದ ಕಾರಣ ಕಣ್ಣೀರಿಟ್ಟಿದ್ದಾರೆ.

ಸೀಕ್ರೆಟ್ ರೂಂನಲ್ಲಿ ದಿವಾಕರ್, ಯಾರಿಗೂ ಹೇಳಲ್ಲ ‘ಬಿಗ್ ಬಾಸ್,’ ಚಿಕ್ಕ ಬಾಟಲ್ ವೈನ್ ಕೊಡಿ. ನೀವು ಲೈಟ್ ಆಫ್ ಮಾಡಿದಾಗ ಕೊಡಿ. ಹ್ಯಾಪಿ ನ್ಯೂ ಇಯರ್ ಒಬ್ಬನೇ ಸೆಲೆಬ್ರೇಷನ್ ಮಾಡ್ತೀನಿ. ಊಟ ಮಾಡಿ ಮಲಗುತ್ತೇನೆ. ಯಾರಿಗೂ ಹೇಳಲ್ಲ ಎಂದು ಹೇಳಿದ್ದಾರೆ.

‘ಬಿಗ್ ಬಾಸ್’ ಹೊಸ ವರ್ಷದ ಪ್ರಯುಕ್ತ ಸದಸ್ಯರಿಗೆ ಔತಣ ನೀಡಿದ್ದಾರೆ. ಸದಸ್ಯರೆಲ್ಲಾ ಕೇಕ್ ಕತ್ತರಿಸಿ ಹಾಡಿ ಕುಣಿದು ಸಂಭ್ರಮಿಸಿದ್ದಾರೆ. ಸಂಭ್ರಮದ ನಡುವೆಯೂ ಶ್ರುತಿ ಮನೆಯವರನ್ನು ನೆನಪಿಸಿಕೊಂಡು ಭಾವುಕರಾಗಿ ಅತ್ತಿದ್ದಾರೆ. ಇಡೀ ಮನೆಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಜೋರಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...