alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯನ್ನು ಕಂಡು ಬಿಕ್ಕಿದ ನಿವೇದಿತಾ

‘ಬಿಗ್ ಬಾಸ್’ ಮನೆಯೊಳಗೆ ಪಾಸ್, ಪ್ಲೇ, ರಿವೈಂಡ್ ಸೂಚನೆ ನೀಡುತ್ತಿದ್ದಂತೆ ಸದಸ್ಯರು ತಮಾಷೆ ಮಾಡುವುದು ಮುಂದುವರೆದಿದೆ. ಪಾಸ್ ನೀಡಿದ ಸಂದರ್ಭದಲ್ಲಿ ನಿವೇದಿತಾ ಅವರ ತಾಯಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

‘ಬಿಗ್ ಬಾಸ್’ ಸೂಚಿಸುವ ಸದಸ್ಯರು ಗಾರ್ಡನ್ ಏರಿಯಾದಲ್ಲಿರುವ ಏತದ ತುದಿಯನ್ನು ಕಾಲಿನಿಂದ ನೆಲಕ್ಕೆ ತಾಗಿಸದಂತೆ ಹಿಡಿದಿಟ್ಟುಕೊಳ್ಳಬೇಕಿದೆ. ಅದರ ಇನ್ನೊಂದು ತುದಿಯಲ್ಲಿ ಮಡಿಕೆಯನ್ನು ಇಟ್ಟು ಬೀಳದಂತೆ ನೋಡಿಕೊಳ್ಳಬೇಕಿದೆ. ಮಡಿಕೆಯನ್ನು ಬ್ಯಾಲೆನ್ಸ್ ಮಾಡದೇ ಬೀಳಿಸಿದಲ್ಲಿ ಜೋಡಿ ಸದಸ್ಯರು ಅಮೂಲ್ಯವಾದುದನ್ನು ಕಳೆದುಕೊಳ್ಳಲಿದ್ದಾರೆ ಎಂದು ‘ಬಿಗ್ ಬಾಸ್’ ಮೊದಲೇ ತಿಳಿಸಿದ್ದಾರೆ.

ನಿವೇದಿತಾ ಅವರ ತಾಯಿ ಆಗಮಿಸಿದ್ದ ಸಂದರ್ಭದಲ್ಲಿ ದಿವಾಕರ್ ಮಡಿಕೆಯನ್ನು ಬ್ಯಾಲೆನ್ಸ್ ಮಾಡುವಲ್ಲಿ ಹಿಡಿತ ತಪ್ಪಿದ್ದರಿಂದ ಮಡಿಕೆ ಜಾರಿದೆ. ಇದರಿಂದಾಗಿ ನಿವೇದಿತಾ ಅವರ ತಾಯಿ ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯೊಳಗೆ ಬಂದ ಸಂದರ್ಭದಲ್ಲಿ ಅವರು ಸದಸ್ಯರನ್ನು ಮಾತನಾಡಿಸಿದ್ದು, ತಾಯಿಯನ್ನು ಕಂಡ ನಿವೇದಿತಾ ಭಾವುಕರಾಗಿದ್ದಾರೆ.

ನಂತರದಲ್ಲಿ ತಮ್ಮ ತಂದೆ ಬಂದಿದ್ದಕ್ಕೆ ಅನುಪಮಾ ಖುಷಿಯಾಗಿದ್ದಾರೆ. ಅವರೊಂದಿಗೆ ಕೆಲ ಸಮಯ ಮಾತನಾಡಿದ್ದು, ಸದಸ್ಯರಿಗೆಲ್ಲಾ ಪರಿಚಯಿಸಿಕೊಟ್ಟಿದ್ದಾರೆ. ಅನುಪಮಾ ತಂದೆ ಬಂದ ಸಂದರ್ಭದಲ್ಲಿ ಶ್ರುತಿ ಮಡಿಕೆಯನ್ನು ಬ್ಯಾಲೆನ್ಸ್ ಮಾಡಿದ್ದಾರೆ. ತಂದೆ ತಂದುಕೊಟ್ಟ ಪತ್ರವನ್ನು ಓದಿದ ಅನುಪಮಾ ಭಾವುಕರಾಗಿದ್ದಾರೆ.

ಇನ್ನು ಮನೆಯೊಳಗಿನ ಸದಸ್ಯರಿಗೆ ವಿವಿಧ ಚಟುವಟಿಕೆಗಳನ್ನು ನೀಡಲಾಗಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಅನುಪಮಾ ಮತ್ತು ಚಂದನ್ ಅವರ ನಡುವೆ ಗಾರ್ಡನ್ ಏರಿಯಾದಲ್ಲಿ ನಡೆದ ಸಂಭಾಷಣೆ ತಮಾಷೆಯಾಗಿತ್ತು. ಸಮೀರಾಚಾರ್ಯ ಮತ್ತು ದಿವಾಕರ್ ಸೇರಿಕೊಂಡು ಚಂದನ್ –ಅನುಪಮಾ ಅವರ ಮದುವೆ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...