alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಕ್ರೆಟ್ ರೂಂನಲ್ಲೇ ಪ್ರಥಮ್, ಮಾಳವಿಕಾ ವಾಗ್ವಾದ

20170109_215332

ಈ ವಾರದ ನಾಯಕನ ಆಯ್ಕೆ ಚಟುವಟಿಕೆಗಾಗಿ ‘ಬಿಗ್ ಬಾಸ್’ ಮನೆಗೆ ಬಂದ, ಸುನಾಮಿ ಕಿಟ್ಟಿ ಕೂಡ ಸ್ಪರ್ಧಿಯಾಗಿದ್ದು, ಟಾಸ್ಕ್ ಗಳಲ್ಲಿ ಪಾಲ್ಗೊಂಡಿದ್ದಾರೆ.

ನಾಯಕರಾಗಲು ಬಲೂನ್ ಗಳಲ್ಲಿದ್ದ ಚೀಟಿಗಳನ್ನು ಹುಡುಕಬೇಕಿತ್ತು. ಇದರಲ್ಲಿ ಕೀರ್ತಿ 2 ಚೀಟಿ ಹುಡುಕಿದರೆ, ಶಾಲಿನಿ, ಭುವನ್ ಹಾಗೂ ಮೋಹನ್ ತಲಾ ಒಂದು ಚೀಟಿ ಹುಡುಕಿದ್ದಾರೆ.

ಅವರಲ್ಲಿ ಮೋಹನ್ ತಮ್ಮ ಚೀಟಿಯನ್ನು ಭುವನ್ ಗೆ ಕೊಟ್ಟಿದ್ದಾರೆ. ಶಾಲಿನಿ ಮನವೊಲಿಸಿದ ಕೀರ್ತಿ, ಅವರಿಂದ 1 ಚೀಟಿ ಪಡೆದಿದ್ದು, ಈ ವಾರ ನಾಯಕನಾಗಿದ್ದಾರೆ.

‘ಬಿಗ್ ಬಾಸ್’ ಸದಸ್ಯರಿಗೆ ಬಿಲ್ಲೆಗಳನ್ನು ಹುಡುಕುವ ಚಟುವಟಿಕೆಯಲ್ಲಿ ಮೋಹನ್, ಕೀರ್ತಿ ಹಾಗೂ ರೇಖಾ ಅವರಿದ್ದ ತಂಡ ಸೋತಿದೆ.

ಸುನಾಮಿ ಕಿಟ್ಟಿ, ಭುವನ್ ಹಾಗೂ ಶಾಲಿನಿ ಅವರ ತಂಡ ಗೆದ್ದು ವಿಶೇಷ ಬಹುಮಾನ ಪಡೆದುಕೊಂಡಿದೆ.

ಇನ್ನು ಮನೆಯಲ್ಲಿ ಮಾಳವಿಕಾ ಮತ್ತು ಪ್ರಥಮ್ ಅವರ ಕುರಿತಾಗಿ ಸದಸ್ಯರು ಮಾತಾಡಿಕೊಂಡಿದ್ದು, ಇದನ್ನು ಸೀಕ್ರೆಟ್ ರೂಂನಲ್ಲಿ ಕುಳಿತ ಇಬ್ಬರೂ ಕೇಳಿಸಿಕೊಂಡಿದ್ದಾರೆ.

ಸೀಕ್ರೆಟ್ ರೂಂನಲ್ಲಿ ಪ್ರಥಮ್ ಮತ್ತು ಮಾಳವಿಕಾ ನಡುವೆ ವಾಗ್ವಾದವೇ ನಡೆದಿದೆ. ಸದಸ್ಯರು ತನ್ನ ಬಗ್ಗೆ ಹೆಚ್ಚಾಗಿ ಮಾತನಾಡುವುದನ್ನು ಕೇಳಿಸಿಕೊಂಡ ಪ್ರಥಮ್, ನಾನು ಗೆಲ್ತೇನೆ ಎಂದಾಗ, ಮಾಳವಿಕಾ ನೀನು ಗೆಲ್ಲಲ್ಲ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ರೇಗಾಡಿದ ಪ್ರಥಮ್ ನೀವು ಹಾಗೆಲ್ಲಾ ಹೇಳಿಬೇಡಿ ಎಂದಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಒಂದು ಹಂತದಲ್ಲಿ ಪ್ರಥಮ್ ಮಾತಿನಿಂದ ಮಾಳವಿಕಾ ಸೈಲೆಂಟ್ ಆಗಿದ್ದಾರೆ. ಆದರೂ ಮಾತು ನಿಲ್ಲಿಸದ ಪ್ರಥಮ್ ಮಾತು ಮುಂದುವರೆಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...