alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಿಚ್ಚನ್ ಟೈಮ್’ಗೆ ಬಂದ ಅರ್ಜುನ್ ಜನ್ಯ

‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀನಿವಾಸನ್ ಅವರು ಬದಲಾಗಿದ್ದಾರೆ ಎಂದು ಚಂದನ್, ದಿವಾಕರ್, ಸಮೀರಾಚಾರ್ಯ, ನಿವೇದಿತಾ ಮಾತಾಡಿಕೊಂಡಿದ್ದಾರೆ. ಸುದೀಪ್ ಅವರ ಎದುರು, ದಿವಾಕರ್ ಮತ್ತು ಸಮೀರಾಚಾರ್ಯ ಅವರ ಮುಖ ನೋಡಲು ಇಷ್ಟವಿಲ್ಲ ಎಂದು ಜಯಶ್ರೀನಿವಾಸನ್ ಹೇಳಿದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

ಸಮೀರ್ ಹೋಗ್ಬೇಕು, ದಿವಾಕರ್ ಹೋಗ್ತಾರೆ ಎಂದು ಪ್ರತಿ ವಾರ ಹೇಳ್ತಾರೆ. ಅವರ ಬಗ್ಗೆ ಗೌರವ ಕೊಡುತ್ತೇನೆ. ಆ ರೀತಿ ಏಕೆ? ಬೇಜಾರಾಯ್ತು ಎಂದು ದಿವಾಕರ್ ಹೇಳಿದ್ದು, ಚಂದನ್ ಸಮಾಧಾನ ಪಡಿಸಿದ್ದಾರೆ.

ರಿಯಾಜ್ ಮತ್ತು ಜಯಶ್ರೀನಿವಾಸನ್ ಅವರ ನಡುವೆ ದಿವಾಕರ್ ಅವರ ಕುರಿತಾಗಿ ಚರ್ಚೆ ನಡೆದಿದೆ. ಮನೆಯೊಳಗೆ ಸದಸ್ಯರ ನಡುವೆ ಮತ್ತೆ ಅಂತರ ಹೆಚ್ಚಾದಂತಿದೆ. ಮನೆಯ ಸದಸ್ಯರನ್ನು 3 ತಂಡಗಳಾಗಿ ಮಾಡಿ ಗೋಪುರ ಜೋಡಿಸುವ ಸವಾಲ್ ನೀಡಲಾಗಿದ್ದು, ಚಂದನ್, ನಿವೇದಿತಾ, ದಿವಾಕರ್ ಅವರ ತಂಡ ಜಯ ಗಳಿಸಿದೆ.

‘ಕಿಚ್ಚನ್ ಟೈಮ್’ಗೆ ಅತಿಥಿಯಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸಿದ್ದು, ವಿವಿಧ ಹಾಡುಗಳನ್ನು ಹಾಡಿ ರಂಜಿಸಿದ್ದಾರೆ. ಸುದೀಪ್ ಅವರು ‘ಕೆಂಪೇಗೌಡ’ ಚಿತ್ರಕ್ಕೆ ಅವಕಾಶ ನೀಡಿದ್ದು, ನಂತರದಲ್ಲಿ ಯಶಸ್ಸು ಕಂಡಿದ್ದನ್ನು ಹೇಳಿಕೊಂಡಿದ್ದಾರೆ.

ಸುದೀಪ್ ಹಾಗೂ ಅರ್ಜುನ್ ಜನ್ಯ ತಿನಿಸುಗಳನ್ನು ಮಾಡಿದ್ದು, ಅದರ ರುಚಿಯನ್ನು ಸವಿದಿದ್ದಾರೆ. ಸುದೀಪ್ ಅವರು ಕೇಳಿದ ಪ್ರಶ್ನೆಗಳಿಗೆ ಅರ್ಜುನ್ ಜನ್ಯ ಉತ್ತರ ನೀಡಿದ್ದಾರೆ. ಅಲ್ಲದೇ, ‘ಬಿಗ್ ಬಾಸ್’ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಪ್ರಕಾರ, ಚಂದನ್ ಗೆಲ್ಲಬಹುದು. ಫಿನಾಲೆಗೆ ದಿವಾಕರ್, ಕಾರ್ತಿಕ್, ಚಂದನ್ ಬರಬಹುದಾಗಿದೆ.

‘ಬಿಗ್ ಬಾಸ್’ ವೇದಿಕೆಯಲ್ಲಿ ಕಾಣಿಸಿಕೊಂಡ ಲಾಸ್ಯ, ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. 2 ವಾರ ಮನೆಯಲ್ಲಿದ್ದು, ಮೊದಲ ವಾರ ಸಂಯುಕ್ತಾ ಅವರೊಂದಿಗೆ ಬೇಡಿ ಹಾಕಿಕೊಂಡಿದ್ದ ಕಾರಣ ಹೆಚ್ಚು ಬೆರೆಯಲಾಗಲಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಸದಸ್ಯರ ಕುರಿತಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಲಾಸ್ಯ ಅವರ ಪ್ರಕಾರ, ಚಂದನ್, ಕೃಷಿ, ಸಮೀರಾಚಾರ್ಯ ಫಿನಾಲೆಗೆ ಬರಬಹುದು. ಚಂದನ್ ಗೆಲ್ಲಬಹುದಾಗಿದೆ.

ಇನ್ನು ಮನೆಯೊಳಗೆ ತಾವು ಕಳೆದ ಕ್ಷಣಗಳನ್ನು ನೋಡಿದ ಲಾಸ್ಯ, ಇನ್ನೂ ಸ್ವಲ್ಪ ದಿನ ಇರಬೇಕಿತ್ತು ಎಂದು ತಿಳಿಸಿದ್ದಾರೆ. ಅಂದ ಹಾಗೇ ಸುದೀಪ್ ನಿರ್ಮಾಣದ ‘ಅಂಬಿ ನಿಂಗೇ ವಯಸ್ಸಾಯ್ತೋ’ ಚಿತ್ರದಲ್ಲಿ ಲಾಸ್ಯ ಅಭಿನಯಿಸುತ್ತಿದ್ದಾರೆ. ಇದನ್ನು ವೇದಿಕೆ ಮೇಲೆ ಲಾಸ್ಯ ಅವರೇ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...