alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ಭೂತ ಕಂಡು ಬೆಚ್ಚಿ ಬಿದ್ದ ಸ್ಪರ್ಧಿಗಳು

bigg-buta

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಶನಿವಾರ ರಾತ್ರಿ ಅಚ್ಚರಿಯ ಬೆಳವಣಿಗೆ ನಡೆದಿದೆ.

ಕಾರುಣ್ಯ, ಸಂಜನಾ ಬಾತ್ ರೂಂನಲ್ಲಿದ್ದ ಸಂದರ್ಭದಲ್ಲಿ ಕನ್ನಡಿಯಲ್ಲಿ ದೆವ್ವ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಇಬ್ಬರೂ ಜೋರಾಗಿ ಚೀರಿದ್ದಾರೆ. ಬಳಿಕ ಓಂ ಪ್ರಕಾಶ್, ಭುವನ್, ಕೀರ್ತಿ ಮೊದಲಾದವರು ಅಲ್ಲಿಗೆ ಬಂದಿದ್ದು, ಯಾರಿಗೂ ಏನೂ ಕಾಣಿಸಿಲ್ಲ. ಭಯದಿಂದಾಗಿ ಮನೆಯ ಸದಸ್ಯರೆಲ್ಲ ರಾತ್ರಿ ನಿದ್ದೆ ಇಲ್ಲದೇ ಕಳೆದಿದ್ದಾರೆ. ಅಷ್ಟೊಂದು ಸಂಖ್ಯೆಯ ಕ್ಯಾಮೆರಾಗಳಿರುವ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಬಾತ್ ರೂಂ ಕನ್ನಡಿಯಲ್ಲಿ ಭೂತದ ಆಕೃತಿಯೊಂದು ಕಾಣಿಸಿಕೊಂಡಿದ್ದು, ಅಲ್ಲೇ ನಿಂತಿದ್ದ ಸಂಜನಾ ಮತ್ತು ಕಾರುಣ್ಯ ಭಯದಿಂದ ಜೋರಾಗಿ ಕಿರುಚಾಡಿದ್ದಾರೆ. ಇದೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರಿಗಾದರೂ ಸೀಕ್ರೆಟ್ ಟಾಸ್ಕ್ ಕೊಟ್ಟು ಹೀಗೆ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...