alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಕೀರ್ತಿ, ಕಾರುಣ್ಯ ಬೆಸ್ಟ್, ಮಾಳವಿಕಾ ವರ್ಸ್ಟ್

big-keerthi

‘ಬಿಗ್ ಬಾಸ್’ ಸವಾಲಿಗೆ ಸವಾಲ್ ಲಕ್ಸುರಿ ಬಜೆಟ್ ಟಾಸ್ಕ್ ಗಾಗಿ ನೀಡಲಾಗಿದ್ದ ಚಟುವಟಿಕೆ, ಸ್ಪರ್ಧೆಗಳಲ್ಲಿ ಸದಸ್ಯರು ಅತ್ಯುತ್ತಮವಾಗಿ ಭಾಗವಹಿಸಿದ್ದಾರೆ.

ಐಸ್ ಕ್ಯೂಬ್ ಮೇಲೆ ನಿಲ್ಲುವ ಟಾಸ್ಕ್ ನಲ್ಲಿ ಕೀರ್ತಿ ಹಾಗೂ ಕಾರುಣ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಬೆಸ್ಟ್ ಸ್ಪರ್ಧಿಗಳಾಗಿ ಆಯ್ಕೆಯಾದ ಕಾರಣಕ್ಕೆ ಅವರಿಗೆ 2 ಗಂಟೆ ಹೆಚ್ಚು ಮಲಗುವ ಅವಕಾಶ ನೀಡಲಾಗಿದೆ. ಕಾರುಣ್ಯ ನಡೆಯಲಾರದಷ್ಟು ಕಾಲು ನೋವು ಮಾಡಿಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಏಣಿ ಮೇಲೆ ನಿಂತಿದ್ದ ಕೀರ್ತಿ ಮತ್ತು ಭುವನ್ ತಂಡಗಳ ನಡುವೆ ಭಾರೀ ಪೈಪೋಟಿಯೇ ನಡೆಯಿತು.

ಎದುರು ತಂಡದವರನ್ನು ಕೆಳಗಿಳಿಸಲು ಸ್ಪರ್ಧಿಗಳು ನಡೆಸಿದ ಪ್ರಯತ್ನಗಳು ರಂಜನೀಯವಾಗಿದ್ದವು. ಈ ಸ್ಪರ್ಧೆಯಲ್ಲಿ ರೆಡ್ ತಂಡದ ಕೀರ್ತಿ ಜಯಗಳಿಸಿದ್ದಾರೆ. ರೆಡ್ ತಂಡದವರು ಹೆಚ್ಚು ಬಾವುಟಗಳನ್ನು ಸಂಗ್ರಹಿಸಿ, ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ರೆಡ್ ತಂಡದಲ್ಲಿ ಕೀರ್ತಿ, ರೇಖಾ, ಓಂ ಪ್ರಕಾಶ್, ನಿರಂಜನ್, ಸಂಜನಾ ಅವರಿದ್ದರು. ಗ್ರೀನ್ ತಂಡದಲ್ಲಿ ಭುವನ್, ಮಾಳವಿಕಾ, ಕಾವ್ಯ, ಕಾರುಣ್ಯ, ಪ್ರಥಮ್ ಇದ್ದರು.

ಈ ವಾರ ಪ್ರಥಮ್, ಕಾವ್ಯ, ನಿರಂಜನ್, ಓಂ ಪ್ರಕಾಶ್ ನಾಮಿನೇಟ್ ಆಗಿದ್ದು, ಅವರಲ್ಲಿ ಓಂ ಪ್ರಕಾಶ್, ನಿರಂಜನ್ ಸೇಫ್ ಆದಂತಾಗಿದೆ. ಇನ್ನು ಮನೆಯ ಸದಸ್ಯರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕೆ ‘ಬಿಗ್ ಬಾಸ್’ 2500 ಲಕ್ಸುರಿ ಬಜೆಟ್ ಪಾಯಿಂಟ್ ನೀಡಿದ್ದಾರೆ.

ಕ್ಯಾಪ್ಟನ್ ಮೋಹನ್ ಅವರಿಗೆ ಬೆಸ್ಟ್ ಮತ್ತು ವರ್ಸ್ಟ್(ಕಳಪೆ) ಆಟಗಾರರನ್ನು ಆಯ್ಕೆ ಮಾಡಿ ತಿಳಿಸುವಂತೆ ‘ಬಿಗ್ ಬಾಸ್’ ಸೂಚಿಸಿದ್ದಾರೆ. ಅತ್ಯುತ್ತಮವಾಗಿ ಟಾಸ್ಕ್ ಗಳಲ್ಲಿ ಪಾಲ್ಗೊಂಡಿದ್ದ ಕೀರ್ತಿ ಮತ್ತು ಕಾರುಣ್ಯ ಅವರನ್ನು ಬೆಸ್ಟ್ ಸ್ಪರ್ಧಿಗಳಾಗಿ ಆಯ್ಕೆ ಮಾಡಿದ ಮೋಹನ್, ಮಾಳವಿಕಾ ಅವರನ್ನು ವರ್ಸ್ಟ್ ಸ್ಪರ್ಧಿ ಎಂದು ತಿಳಿಸಿದ್ದಾರೆ. ಅದರಂತೆ ಮಾಳವಿಕಾಗೆ ‘ಕಳಪೆ’ ಫಲಕವನ್ನು ನೇತುಹಾಕಲಾಗಿದೆ.

ಇದರಿಂದ ಬೇಸರಗೊಂಡ ಮಾಳವಿಕಾ, ಅಳಲು ತೋಡಿಕೊಂಡಿದ್ದು, ಅವರನ್ನು ಪ್ರಥಮ್ ಸಮಾಧಾನಪಡಿಸಿದ್ದಾರೆ. ಆಟದಲ್ಲಿ ಹಿನ್ನಡೆ ಆಗಿದೆ ಅಷ್ಟೇ. ಇದನ್ನು ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಪರಿಗಣಿಸಬೇಡಿ ಎಂದು ಪ್ರಥಮ್ ಸಲಹೆ ನೀಡಿದ್ದಾರೆ. ಇದೆಲ್ಲವನ್ನೂ ಸೀಕ್ರೆಟ್ ರೂಂನಲ್ಲಿ ಶೀತಲ್ ಅವರೊಂದಿಗೆ ವೀಕ್ಷಿಸಿದ ಶಾಲಿನಿ ಮನೆಯೊಳಗೆ ಹೋದ ನಂತರ ಏನು ಮಾಡ್ತೀನಿ ನೋಡುತ್ತಿರು ಎಂದು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...