alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಐವರಲ್ಲಿ ಗೆಲ್ಲೋರು ಯಾರು…?

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದು, ಐವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್, ಚಂದನ್, ಶ್ರುತಿ, ನಿವೇದಿತಾ ಹಾಗೂ ದಿವಾಕರ್ ಅವರು ಮನೆಯೊಳಗೆ ಇದ್ದು, ಎಲ್ಲರೂ ತಮಗೆ ನೀಡಲಾದ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

ಕ್ಯಾಮೆರಾಗಳ ಬಳಿ ಶ್ರುತಿ ಫಿನಾಲೆಗೆ ತಮ್ಮ ಮನೆಯವರನ್ನೆಲ್ಲಾ ಆಹ್ವಾನಿಸಿದ್ದಾರೆ. ಇನ್ನು ಚಂದನ್ ಗೆ ನೀಡಲಾದ ಚಟುವಟಿಕೆಯಲ್ಲಿ ಕ್ಯಾಮೆರಾ ಎದುರು ಮಾತನಾಡಿದ್ದು, ಹಾಡಿದ್ದು ವಿಶೇಷವಾಗಿತ್ತು. ಸ್ಪರ್ಧಿಗಳಿಗೆ ಉಡುಗೊರೆಗಳನ್ನು ನೀಡಲಾಗಿದ್ದು, ಅದರಲ್ಲಿ ಸದಸ್ಯರು ತಮಗೆ ಬಂದ ಉಡುಗೊರೆಗಳನ್ನು ತಾವೇ ಇಟ್ಟುಕೊಳ್ಳಬೇಕಿತ್ತು. ಇಲ್ಲವೇ ಬೇರೆಯವರಿಗೆ ಕೊಡಬಹುದಾಗಿತ್ತು. ಗಿಫ್ಟ್ ನಲ್ಲಿ ನೀಡಲಾದ ಸೂಚನೆಯಂತೆ ದಿವಾಕರ್ ಹಿಟ್ಟು ಸುರಿದುಕೊಂಡಿದ್ದು ತಮಾಷೆಯಾಗಿತ್ತು. ಶ್ರುತಿಗೆ ತಿಂಡಿ, ತಿನಿಸು ತಿನ್ನಲು ದಿವಾಕರ್ ಬಲವಂತ ಮಾಡಿದ ಸನ್ನಿವೇಶವೂ ಹಾಸ್ಯಮಯವಾಗಿತ್ತು.

ಕಾರ್ತಿಕ್ ಅವರೊಂದಿಗೆ ಅಭಿಮಾನಿ ಅರವಿಂದ್ ಎಂಬುವವರು ಮಾತನಾಡಿದ್ದಾರೆ. ಅವರ ಧ್ವನಿ ಕೇಳಿದ ಕಾರ್ತಿಕ್ ಖುಷಿಯಾಗಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದೀರಿ. ಸೀರಿಯಸ್ ಕ್ಯಾರೆಕ್ಟರ್ ಬಿಟ್ಟು ಫನ್ ಮಾಡ್ತಿರುವುದು. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ ಎಂದು ಅರವಿಂದ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಫಿನಾಲೆಗೆ ಬಂದ ಸ್ಪರ್ಧಿಗಳೆಲ್ಲಾ ಇಷ್ಟವೆಂದು ಅವರು ಹೇಳಿದ್ದಾರೆ.

ಇದಕ್ಕೆ ಕಾರ್ತಿಕ್ ಹಾಗೂ ಉಳಿದ ಸ್ಪರ್ಧಿಗಳು ಥ್ಯಾಂಕ್ಸ್ ಹೇಳಿದ್ದಾರೆ. ಶ್ರುತಿ ಗಿಫ್ಟ್ ಬದಲಿಸಿಕೊಂಡಿದ್ದಕ್ಕೆ ಫ್ಯಾನ್ ಜೊತೆ ಮಾತನಾಡುವ ಅವಕಾಶ ಕಾರ್ತಿಕ್ ಅವರಿಗೆ ಸಿಕ್ಕಿತ್ತು. ಮನೆಯ ಸದಸ್ಯರು ಬೇರೆ ವೃತ್ತಿಗಳಿಂದ ಬಂದವರಾಗಿದ್ದು, ಅವರ ನಿಜ ಜೀವನದ ವೃತ್ತಿಗಳನ್ನು ಪ್ರದರ್ಶಿಸಲು ‘ಅದಲು, ಬದಲು’ ಸವಾಲ್ ನೀಡಲಾಗಿತ್ತು.

ಇದರಲ್ಲಿ ಮನೆಯ ಸದಸ್ಯರೊಬ್ಬರ ವೃತ್ತಿಯನ್ನು ಉಳಿದ ಸದಸ್ಯರು ಮಾಡಿ ತೋರಿಸಬೇಕಿತ್ತು. ಆ ವೃತ್ತಿಯ ಸದಸ್ಯರು ಉತ್ತಮ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಬೇಕಿತ್ತು. ಈ ಸವಾಲ್ ಸಖತ್ತಾಗಿತ್ತು. ಫಿನಾಲೆ ಸಮೀಪಿಸುತ್ತಿರುವಂತೆಯೇ ಐವರಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...