alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಬಂದಾಗ ಬಿಕ್ಕಿ ಬಿಕ್ಕಿ ಅತ್ತ ರಿಯಾಜ್

‘ಬಿಗ್ ಬಾಸ್’ ಮನೆಯಲ್ಲಿ ಪಾಸ್, ಪ್ಲೇ ಸೂಚನೆಯನ್ನು ಪಾಲಿಸುವ ಸಂದರ್ಭದಲ್ಲಿ ಸದಸ್ಯರು ಸುಸ್ತಾಗಿದ್ದಾರೆ. ಪಾಸ್ ಸೂಚನೆ ಪಡೆದ ಸದಸ್ಯರಿಗೆ ಪ್ಲೇಯಲ್ಲಿದ್ದ ಸದಸ್ಯರು ಇನ್ನಿಲ್ಲದಂತೆ ಕಾಡಿದ್ದಾರೆ. ಪಾಸ್ ನೀಡಿದಾಗ ಅನುಪಮಾ, ನಿವೇದಿತಾ, ಚಂದನ್, ದಿವಾಕರ್, ಸಮೀರ್, ಕಾರ್ತಿಕ್, ಶ್ರುತಿ ಅವರಿಗೆ ಆಯಾ ಸಂದರ್ಭದಲ್ಲಿ ಸದಸ್ಯರು ಬಣ್ಣ ಹಚ್ಚಿ, ತರಕಾರಿ, ಬಟ್ಟೆ ಮೊದಲಾದವುಗಳನ್ನು ಮೈಮೇಲೆ ಇಡುವ ಮೂಲಕ ಕೀಟಲೆ ಮಾಡಿದ್ದಾರೆ.

ಜೋಡಿಗಳು ತಮ್ಮ ಜೊತೆಗಾರರಿಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ತಿಳಿಸಲು ಕಾಲಕಾಲಕ್ಕೆ ‘ಬಿಗ್ ಬಾಸ್’ ಸೂಚಿಸುವ ಸದಸ್ಯರು ಗಾರ್ಡನ್ ಏರಿಯಾದಲ್ಲಿರುವ ಏತದ ತುದಿಯನ್ನು ಕಾಲಿನಿಂದ ನೆಲಕ್ಕೆ ತಾಗಿಸದಂತೆ ಹಿಡಿದಿಟ್ಟುಕೊಳ್ಳಬೇಕಿದೆ. ಅದರ ಇನ್ನೊಂದು ತುದಿಯಲ್ಲಿ ಮಡಿಕೆಯನ್ನು ಇಟ್ಟು ಬೀಳದಂತೆ ನೋಡಿಕೊಳ್ಳಬೇಕಿದೆ. ಅವರು ಮಡಿಕೆಯನ್ನು ಬೀಳಿಸಿದಲ್ಲಿ ಜೋಡಿ ಸದಸ್ಯರು ಅಮೂಲ್ಯವಾದುದನ್ನು ಕಳೆದುಕೊಳ್ಳಲಿದ್ದಾರೆ ಎಂದು ‘ಬಿಗ್ ಬಾಸ್’ ತಿಳಿಸಿದ್ದಾರೆ.

ಕಾರ್ತಿಕ್ ತಂದೆ ಮನೆಯೊಳಗೆ ಬಂದ ಸಂದರ್ಭದಲ್ಲಿ ಅನೇಕ ಸದಸ್ಯರಿಗೆ ಪಾಸ್ ಸೂಚನೆ ನೀಡಿದ್ದರಿಂದ ಎಲ್ಲರೂ ಕದಲದಂತೆ ನಿಂತಿದ್ದಾರೆ. ಕಾರ್ತಿಕ್ ಅವರ ತಂದೆ ಮನೆಯೊಳಗೆ ಎಲ್ಲ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಎಲ್ಲರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಂದೆಯನ್ನು ಕಂಡು ಭಾವುಕರಾದ ಕಾರ್ತಿಕ್ ಅತ್ತಿದ್ದಾರೆ.

ನಂತರದಲ್ಲಿ ರಿಯಾಜ್ ಅವರ ಪತ್ನಿ ಮನೆಯೊಳಗೆ ಬಂದಿದ್ದಾರೆ. ಈ ವೇಳೆ ಪಾಸ್ ನಲ್ಲಿದ್ದ ರಿಯಾಜ್ ಪತ್ನಿಯನ್ನು ಕಂಡು ಭಾವುಕರಾಗಿದ್ದು, ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮನೆಯೊಳಗೆ ಎಲ್ಲ ಸದಸ್ಯರನ್ನು ಪರಿಚಯಿಸಿಕೊಟ್ಟು, ಮನೆಯನ್ನು ತೋರಿಸಿದ್ದಾರೆ. ಸದಸ್ಯರೆಲ್ಲಾ ಕಾರ್ತಿಕ್ ಹಾಗೂ ರಿಯಾಜ್ ಅವರ ಮನೆಯಿಂದ ಬಂದಿದ್ದ ಅಡುಗೆಯ ರುಚಿ ನೋಡಿದ್ದಾರೆ.

ಚಂದನ್ ಮತ್ತು ದಿವಾಕರ್ ಅವರು, ರಿಯಾಜ್ ಕುರಿತಾಗಿ ಮಾತನಾಡಿಕೊಂಡಿದ್ದಾರೆ. ಇನ್ನು ಚಂದನ್ ಸರಿಯಾಗಿ ಮಾತನಾಡಿಸುತ್ತಿಲ್ಲ ಎಂದು ಶ್ರುತಿ ಸಿಟ್ಟು ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...