alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಕಿಚನ್ ಗೆದ್ದ ಲೇಡಿಸ್, ಬೆಡ್ ರೂಮಲ್ಲಿ ಜೆಂಟ್ಸ್

big-boss

ಬಿಗ್ ಬಾಸ್ ಮನೆಯಲ್ಲಿ 18 ನೇ ದಿನ ಕೂಲಾಗಿತ್ತು, ಹೆಚ್ಚು ಜಗಳ, ವಾಗ್ವಾದ ಇರಲಿಲ್ಲ. ಲಕ್ಷುರಿ ಬಜೆಟ್ ನ ವಸ್ತು ಹುಡುಕೋ ಆಟದಲ್ಲಿ ಶೀತಲ್ ಹಾಗೂ ಪ್ರಥಮ್ ಎದುರು ಬದುರಾದ್ರು. ಹುಡುಗರ ತಂಡಕ್ಕಿಂತ ಮೊದಲೇ ಬಹುತೇಕ ಎಲ್ಲ ವಸ್ತುಗಳನ್ನು ಹುಡುಕಿದ್ರೂ ಒಂದೇ ಒಂದು ಸಾಕ್ಸ್ ಸಿಗದೇ, ಹುಡುಗಿಯರ ತಂಡ ಸೋಲು ಅನುಭವಿಸ್ತು. ಹಾಗಾಗಿ ಬಿಗ್ ಬಾಸ್ ಮನೆಯ ಬೆಡ್ ರೂಮ್ ಹುಡುಗರ ಪಾಲಾಯ್ತು.

ಈ ಆಟದ ನಡುವೆ ತನ್ನನ್ನ ತಳ್ಳುತ್ತಿದ್ದಾನೆ ಅಂತಾ ಭುವನ್, ನಿರಂಜನ್ ಮೇಲೆ ರಾಂಗಾದ್ರು. ನಂತರ ನಡೆದಿದ್ದು ತಿನ್ನೋ ಆಟ, ಇಲ್ಲಿ ಹುಡುಗರ ತಂಡದಿಂದ ಕೀರ್ತಿ, ಹುಡುಗಿಯರ ಪರ ರೇಖಾ ಸ್ಪರ್ಧೆಗಿಳಿದ್ರು.

ರೇಖಾ ಮುಂದೆ ಕೀರ್ತಿ ಆಟ ನಡೆಯಲಿಲ್ಲ. ಅಷ್ಟೂ ಮೆಣಸಿನಕಾಯಿ ಬೋಂಡಾ, ರಸಗುಲ್ಲ ತಿಂದ ರೇಖಾ, ಹುಡುಗಿಯರ ತಂಡಕ್ಕೆ ಕಿಚನ್ ಏರಿಯಾ ಕೈವಶ ಮಾಡಿಕೊಟ್ರು. ತಿಂಡಿಪೋತ ಆಟದ ಗ್ಯಾಪಲ್ಲಿ ಕೀರ್ತಿ ಅಡುಗೆ ಮನೆಯಲ್ಲಿಟ್ಟಿದ್ದ ಒಂದಷ್ಟು ಹಣ್ಣುಗಳನ್ನು ಕದ್ದು ತಂದ್ರೆ, ಸಂಜನಾ ಬಾತ್ ರೂಮಿನಲ್ಲಿದ್ದ ಕೆಲ ವಸ್ತುಗಳನ್ನು ಅಡಗಿಸಿಟ್ರು.

ಮತ್ತೊಂದ್ಕಡೆ ಮಾತ್ರೆ ತಗೋತಾರೆ ಅಂತಾ ಜಗಜ್ಜಾಹೀರು ಮಾಡ್ತಿದ್ದಾರೆ ಅಂತೆಲ್ಲಾ ಮೋಹನ್, ಮಾಳವಿಕಾ ಮೇಲೆ ಕೆಂಡ ಕಾರಿದ್ರು. ನಾನು ಹೀರೋ, ನನ್ ಬಗ್ಗೆ ಜನ ಏನ್ ಅಂದ್ಕೋತಾರೋ ಅನ್ನೋ ಆತಂಕ ಅವರಿಗೆ. ಒಟ್ನಲ್ಲಿ ಅಡುಗೆ ಮನೆಯಲ್ಲಿ ಹುಡುಗಿಯರ ರಾಜ್ಯಭಾರವಾದ್ರೆ, ಬೆಡ್ ರೂಮಲ್ಲಿ ಹುಡುಗರ ದರ್ಬಾರ್. ಮನೆಯ ಉಳಿದ ಸ್ಥಳಗಳನ್ನು ವಶಪಡಿಸಿಕೊಳ್ಳೋಕೆ ಎರಡೂ ತಂಡಗಳು ಕಾಯ್ತಾ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...