alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯ ರಹಸ್ಯ ಬಿಚ್ಚಿಟ್ಟ ವಾಣಿಶ್ರೀ

vanishri-big-sun

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ಸೀಸನ್ 4 ಮೊದಲನೇ ವಾರ ಮುಕ್ತಾಯವಾಗಿದ್ದು, ಭಾನುವಾರ ನಡೆದ ‘ಸೂಪರ್ ಸಂಡೇ ವಿತ್ ಸುದೀಪ್’ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯ್ತು.

ಮೊದಲ ವಾರ ಮನೆಯಿಂದ ಹೊರಬಂದ ವಾಣಿಶ್ರೀ ಅವರನ್ನು ವೇದಿಕೆಗೆ ಆಹ್ವಾನಿಸಿದ ಸುದೀಪ್, ಮನೆಯಲ್ಲಿನ ಅನುಭವದ ಬಗ್ಗೆ ಕೇಳಿದರು. ಕನ್ಫೆಕ್ಷನ್ ರೂಂ ನೋಡಲಿಲ್ಲ. ಟಾಸ್ಕ್ ಮಾಡಲಿಲ್ಲ ಎಂದು ಹೇಳಿದ ವಾಣಿಶ್ರೀ ಅವರು, ಮೊದಲ ವಾರದಲ್ಲಿಯೇ ನಾಮಿನೇಟ್ ಆದಾಗ, ಪ್ರಥಮ್ ಜಾಸ್ತಿ ಮಾತನಾಡಬೇಕಿತ್ತು ಎಂದೆಲ್ಲಾ ಸಲಹೆ ನೀಡಿದ್ದರು.

ಬಹುಶಃ ಅವರು ‘ಬಿಗ್ ಬಾಸ್’ ಮನೆಯಲ್ಲಿ ಪ್ಲಾನ್ ಮಾಡುತ್ತಿದ್ದಾರೆ ಅನಿಸಿದೆ. ಇನ್ನು ಕೀರ್ತಿ ಹಾಗೂ ಪ್ರಥಮ್ ಎಷ್ಟೊಂದು ದ್ವೇಷದಿಂದ ಜಗಳವಾಡಿದರೂ, ಮರುಕ್ಷಣದಲ್ಲೇ ಸ್ನೇಹದಿಂದ ಮಾತನಾಡಿಕೊಳ್ಳುತ್ತಿದ್ದುದನ್ನು ಗಮನಿಸಿದಾಗ, ಪ್ಲಾನ್ ಮಾಡಿಕೊಂಡೇ ಆಡುತ್ತಿರುವಂತಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ಮಾಳವಿಕಾ ಅವರೊಂದಿಗೆ ಕೋಲ್ಡ್ ವಾರ್ ಇರಲಿಲ್ಲ. ಅಡುಗೆ ಮನೆಗೆ ತಲೆ ಹಾಕಬೇಡಿ ಎಂದಾಗ ಮತ್ತು ಕೆಲವು ವಿಷಯಗಳಲ್ಲಿ ಅವರು ಇಷ್ಟ ಆಗಲಿಲ್ಲ ಎಂದು ತಿಳಿಸಿದ್ದಾರೆ. ಮೇಕಪ್ ಕಿಟ್ ಕುರಿತು ಮಾತನಾಡುತ್ತಾ ವಾಣಿಶ್ರೀ ವೇದಿಕೆಯಲ್ಲೇ ಅತ್ತರು. ಮನೆಯ ಸದಸ್ಯರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರಲ್ಲದೇ, ಜೀವನದ ಕ್ಷಣಗಳನ್ನು ನೆಪಿಸಿಕೊಂಡು ಅತ್ತಾಗ, ಸುದೀಪ್ ಸ್ಪೂರ್ತಿಯ ಮಾತುಗಳನ್ನಾಡಿ ಅವರನ್ನು ಸಮಾಧಾನಪಡಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...