alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ಬೆಂಕಿ ಅವಘಡ : ನಟ ಸುದೀಪ್ ಹೇಳಿದ್ದೇನು?

ಬೆಂಗಳೂರು ಹೊರವಲಯದಲ್ಲಿರೋ ಬಿಗ್ ಬಾಸ್ ಮನೆಗೆ ನಿನ್ನೆ ಬೆಂಕಿ ಬಿದ್ದಿತ್ತು. ಬೆಂಕಿಯ ತೀವ್ರತೆಗೆ ಬಿಗ್ ಬಾಸ್ ಮನೆಯ ಮೇಣದ ಮ್ಯೂಸಿಯಂ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಅಂತಾ ತಿಳಿಸಿದ್ದಾರೆ.

ಆರ್ಥಿಕ ನಷ್ಟಕ್ಕಿಂತ್ಲೂ ಹೆಚ್ಚಾಗಿ ಈ ದುರ್ಘಟನೆಯಿಂದ ಭಾವನಾತ್ಮಕ ನಷ್ಟವಾಗಿದೆ. ಆದ್ರೆ ಯಾರಿಗೂ ಗಾಯಗಳಾಗಿಲ್ಲ, ಯಾವುದೇ ಪ್ರಾಣಾಪಾಯವಾಗಿಲ್ಲ ಅನ್ನೋದು ಸಮಾಧಾನಕರ ಸಂಗತಿ ಎಂದಿದ್ದಾರೆ. ವರ್ಷದ 135 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇಡೀ ತಂಡ ಕೆಲಸ ಮಾಡುತ್ತಿತ್ತು.

ಹಾಗಾಗಿ ಮೂರು ವರ್ಷಗಳಿಂದ ಈ ಬಿಗ್ ಬಾಸ್ ಮನೆಯೊಂದಿಗೆ ನಂಟು ಬೆಳೆದಿತ್ತು. ಹಾಗಾಗಿ ಬೆಂಕಿ ಅವಘಡದಿಂದ ತುಂಬಾ ನೋವಾಗಿದೆ ಅಂತಾ ತಿಳಿಸಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಬಿಗ್ ಬಾಸ್ ನಿರೂಪಕ ಸುದೀಪ್, ತಾವು ಸದ್ಯ ಥೈಲ್ಯಾಂಡ್ ನಲ್ಲಿದ್ದು, ಹೆಚ್ಚಿನ ವಿವರ ಸಿಕ್ಕಿಲ್ಲ. ಆದ್ರೆ ಬಿಗ್ ಬಾಸ್ ಮನೆ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು, ಬೆಂಕಿ ಅನಾಹುತ ದುರದೃಷ್ಟಕರ ಎಂದಿದ್ದಾರೆ.

ಇನ್ನು ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಗಳಾಗಿದ್ದ ಶ್ರುತಿ ಪ್ರಕಾಶ್, ನಿವೇದಿತಾ ಗೌಡ ಹಾಗೂ ದಿವಾಕರ್ ಸಹ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆ ಮಾತ್ರವಲ್ಲ ಅಲ್ಲಿನ ನಮ್ಮ ನೆನಪುಗಳೂ ಸುಟ್ಟು ಹೋಗಿವೆ ಅಂತಾ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...