alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಗೆ ಯಾರ್ಯಾರು ಬರ್ತಿದ್ದಾರೆ ಗೊತ್ತಾ?

ಇದೇ ತಿಂಗಳ 15ರಂದು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ಆರಂಭವಾಗಲಿದೆ. ಬೆಂಗಳೂರಿನ ಬಿಡದಿಯಲ್ಲಿ ಹಾಕಿರೋ ಸೆಟ್ ನಲ್ಲಿ ಶೂಟಿಂಗ್ ಕೂಡ ಶುರುವಾಗಲಿದೆ. ಕಳೆದ ಆವೃತ್ತಿಗಿಂತ್ಲೂ ಈ ಬಾರಿ ಬಿಗ್ ಬಾಸ್ ಮನೆ ಕಲರ್ಫುಲ್ ಆಗಿರಲಿದೆ ಅಂತಾ ಹೇಳಲಾಗ್ತಿದೆ.

ಈ ಬಾರಿ ಬಿಗ್ ಬಾಸ್ ನಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ ನಟ ದಿಗಂತ್, ಸುನಿಲ್ ರಾವ್, ಪಂಕಜ್ ನಾರಾಯಣ್, ರಾಜು ತಾಳಿಕೋಟೆ, ಮತ್ತು ಭಾವನಾ ‘ಬಿಗ್ ಬಾಸ್’ ಮನೆಗೆ ಬರ್ತಿದ್ದಾರಂತೆ.

ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ಸಿಸಿಎಲ್ ನ ರಾಜೀವ್, ಶೈನ್ ಶೆಟ್ಟಿ, ಶ್ರೀಕಿ, ಹರ್ಷ, ಕವಿತಾ ಹಾಗೂ ಕವಿತಾ ಗೌಡ ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರಿಗೂ ಈ ಬಾರಿ ಅವಕಾಶ ನೀಡಲಾಗಿದೆ. ನಾಲ್ವರನ್ನು ವಾಹಿನಿಯೇ ಆಯ್ಕೆ ಮಾಡಲಿದೆ.

ಸಿಹಿಕಹಿ ಚಂದ್ರು ಪುತ್ರಿ ಹಿತ ಮಾತ್ರ ತಾವು ಬಿಗ್ ಬಾಸ್ ಮನೆಗೆ ಹೋಗ್ತಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ನಟ ಸುದೀಪ್ ಶೋ ಹೋಸ್ಟ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...