alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ಸ್ಪರ್ಧಿಗಳಿಗೆ ಶಾಕ್ ಕೊಟ್ಟ ‘ಬಿಗ್ ಬಾಸ್’…!

‘ಬಿಗ್ ಬಾಸ್’ ಮನೆಯೊಳಗೆ ಸದಸ್ಯರಿಗೆ ವಿವಿಧ ಚಟುವಟಿಕೆಗಳನ್ನು ನೀಡಲಾಗಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದಾರೆ. ‘ಮನದ ಮಾತು’ ಚಟುವಟಿಕೆಯಲ್ಲಿ ಸದಸ್ಯರು ತಮ್ಮ ಜೊತೆಗಾರ ಸದಸ್ಯರೊಬ್ಬರ ಬಗ್ಗೆ ಅನಿಸಿಕೆಯನ್ನು ಪತ್ರದಲ್ಲಿ ಬರೆದು ತಿಳಿಸಬೇಕಿತ್ತು. ಇದರಲ್ಲಿ ಹೆಚ್ಚಿನವರು ಚಂದನ್ ಬಗ್ಗೆ ಬರೆದಿದ್ದಾರೆ.

‘ಹೇಳಿ ಹೋಗು ಕಾರಣ’ ಚಟುವಟಿಕೆಯಲ್ಲಿ ಸದಸ್ಯರು ತಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಷಯವನ್ನು ಹೇಳಿ ಬಲೂನ್ ಹಾರಿ ಬಿಡಲು ಹೇಳಲಾಗಿದೆ. ಸದಸ್ಯರು ತಮ್ಮ ಜೀವನದಲ್ಲಿ ನಡೆದ ಘಟನೆ ಬಗ್ಗೆ ಮೆಲುಕು ಹಾಕಿ ಸಾರಿ ಕೇಳಬೇಕಾದವರ ಹೆಸರು ಹೇಳಿ ಸಾರಿ ಕೇಳಿದ್ದು, ಬಲೂನ್ ಹಾರಿಬಿಟ್ಟಿದ್ದಾರೆ.

‘ಬಿಗ್ ಬಾಸ್’ ಸೂಪರ್ ಟಿ.ವಿ. ಶೋ ಸಖತ್ತಾಗಿತ್ತು. ಟಿ.ವಿ. ವಾಹಿನಿಯಲ್ಲಿರುವಂತೆಯೇ ಕ್ರೀಡೆ, ನೃತ್ಯ, ಹಾಸ್ಯ, ಧಾರಾವಾಹಿ, ಟಾಕ್ ಶೋ ಮೊದಲಾದವುಗಳನ್ನು ಪ್ರದರ್ಶಿಸುವಂತೆ ಸದಸ್ಯರಿಗೆ ತಿಳಿಸಲಾಗಿದೆ.

ಅದರಲ್ಲಿ ಶ್ರುತಿ, ಕೃಷಿ ನೃತ್ಯ ಪ್ರದರ್ಶಿಸಿದ್ದು, ಕಾರ್ತಿಕ್ ಧಾರಾವಾಹಿ ನಡೆಸಿಕೊಟ್ಟಿದ್ದಾರೆ. ಚಂದನ್ ಹಾಡು ಹಾಗೂ ದಿವಾಕರ್(ಸಿನಿಮಾ ನಟನಾಗಿ ಕಾಣಿಸಿಕೊಂಡಿದ್ದರು) ಅವರೊಂದಿಗೆ ನಡೆಸಿದ ಸಂದರ್ಶನ ಹಾಸ್ಯಮಯವಾಗಿತ್ತು. ಸಂದರ್ಶನದಲ್ಲಿ ಚಂದನ್ ಕೇಳಿದ ಪ್ರಶ್ನೆಗಳಿಗೆ ದಿವಾಕರ್ ನೀಡಿದ ಉತ್ತರ ಮತ್ತು ಇಡೀ ಸನ್ನಿವೇಶ ಗಮನ ಸೆಳೆಯುವಂತಿತ್ತು.

ಮಧ್ಯ ರಾತ್ರಿ ಬಿಗ್ ಶಾಕ್ ಕೊಟ್ಟ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗುವ ಪ್ರಕ್ರಿಯೆ ಈಗ ಆರಂಭವಾಗುತ್ತಿದೆ ಎಂದು ಹೇಳುತ್ತಿದ್ದಂತೆ ಸದಸ್ಯರು ನಿದ್ದೆಯಲ್ಲೇ ಎದ್ದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಕಾರ್ತಿಕ್, ಕೃಷಿ ಸೇಫ್ ಆಗಿದ್ದು, ಉಳಿದವರು ಲಿವಿಂಗ್ ಏರಿಯಾಗೆ ಬಂದಿದ್ದಾರೆ. ಅಲ್ಲಿ ಚಂದನ್, ನಿವೇದಿತಾ, ಅನುಪಮಾ ಸೇಫ್ ಆಗಿದ್ದಾರೆ. ಪ್ರಕ್ರಿಯೆ ಮುಗಿಯುವವರೆಗೆ ಅಲ್ಲೇ ಇರುವಂತೆ ಸದಸ್ಯರಿಗೆ ಸೂಚಿಸಲಾಗಿದೆ.

ಉಳಿದ ಸದಸ್ಯರಾದ ಶ್ರುತಿ, ಸಮೀರಾಚಾರ್ಯ ಮತ್ತು ದಿವಾಕರ್ ಗಾರ್ಡನ್ ಏರಿಯಾಗೆ ಬಂದಿದ್ದು, ಅವರಲ್ಲಿ ಒಬ್ಬರು ಮನೆಯಿಂದ ನಿರ್ಗಮಿಸಬೇಕಿದೆ. ಮನೆಯಿಂದ ಹೊರ ಹೋಗಬೇಕಿದ್ದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂವರಲ್ಲಿ ಮನೆಯಿಂದ ಯಾರು ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಜಯಶ್ರೀನಿವಾಸನ್ ಅವರನ್ನು ಕನ್ ಫೆಷನ್ ರೂಂಗೆ ಕರೆಸಿಕೊಂಡ ‘ಬಿಗ್ ಬಾಸ್’ ಅಲ್ಲಿಂದ ಕಣ್ಣಿಗೆ ಬಟ್ಟೆ ಕಟ್ಟಿಸಿ ಸೀಕ್ರೆಟ್ ರೂಂಗೆ ಬಿಟ್ಟಿದ್ದಾರೆ. ಮನೆಯೊಳಗೆ ಎಂಟ್ರಿ ಪಡೆದ ಸಂದರ್ಭದಲ್ಲಿ ಹಲವು ಗಂಟೆಗಳ ಕಾಲ ಯಾರಿಗೂ ತಿಳಿಯದಂತೆ ಇದ್ದೆ. ಈಗ ಸೀಕ್ರೆಟ್ ರೂಂನಲ್ಲಿ ಯಾರಿಗೂ ತಿಳಿಯದಂತೆ ಇರಬೇಕಿದೆ ಎಂದು ಜಯಶ್ರೀನಿವಾಸನ್ ಹೇಳಿದ್ದಾರೆ.

ಕನ್ ಫೆಷನ್ ರೂಂನಿಂದ ಜಯಶ್ರೀನಿವಾಸನ್ ಅವರು ನಾಪತ್ತೆಯಾಗಿರುವುದು ಸದಸ್ಯರಿಗೆ ಅಚ್ಚರಿ ಮೂಡಿಸಿದೆ. ಅವರ ಬಗ್ಗೆಯೇ ಹಲವು ಸದಸ್ಯರು ಮಾತನಾಡಿಕೊಂಡಿದ್ದಾರೆ. ಜಯಶ್ರೀನಿವಾಸನ್ ಸೀಕ್ರೆಟ್ ರೂಂನಲ್ಲಿ ಕುಳಿತು, ಮನೆಯೊಳಗಿನ ದೃಶ್ಯಗಳನ್ನು ವೀಕ್ಷಿಸಿದ್ದಾರೆ.

ದಿವಾಕರ್, ಜಯಶ್ರೀನಿವಾಸನ್, ಕೃಷಿ, ನಿವೇದಿತಾ, ಸಮೀರಾಚಾರ್ಯ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಮನೆಯೊಳಗಿನ ಸದಸ್ಯರಿಗೆ ಈ ಮಾಹಿತಿ ಇಲ್ಲವಾಗಿದೆ. ಹೊರ ಹೋಗುವುದ್ಯಾರು ಎಂಬುದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...