alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಈ ವಾರ ಹೊರ ಬಂದಿದ್ಯಾರು ಗೊತ್ತಾ…?

‘ಬಿಗ್ ಬಾಸ್’ ಮನೆಯಿಂದ ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಯಾರು ಹೊರ ಬರಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಜಗನ್ ಹೊರ ಬಂದಿದ್ದಾರೆ.

ಮೊದಲಿಗೆ ಮನೆಯೊಳಗೆ ಅಡುಗೆ ಮನೆಯಲ್ಲಿ ಮೊಸರಿನ ವಿಚಾರಕ್ಕೆ ಕೃಷಿ ಚರ್ಚೆ ಮಾಡಿದ್ದಾರೆ. ಸಮೀರಾಚಾರ್ಯ ಮತ್ತು ಸಂಯುಕ್ತಾ ನಡುವೆ ಮಾತಿನ ಚಕಮಕಿ ನಡೆದಿದೆ.

ಶನಿವಾರದ ಸಂಚಿಕೆಯಲ್ಲಿ ಸುದೀಪ್, ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸದಸ್ಯರೊಂದಿಗೆ ಪಂಚಾಯಿತಿ ನಡೆಸಿದ್ದಾರೆ. ಮನೆಯ ಸದಸ್ಯರು ಈ ವಾರ ಮಾಡಿದ ಟಾಸ್ಕ್ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಸದಸ್ಯರು ತೋರಿದ ವರ್ತನೆ ಕುರಿತಾಗಿ ಪ್ರಸ್ತಾಪಿಸಿದ್ದು, ಕೆಲವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಬೇಡಿ ಹಾಕಿಕೊಂಡು ಈ ವಾರ ಸದಸ್ಯರೆಲ್ಲಾ ಜೊತೆಯಾಗಿದ್ದ ಬಗ್ಗೆ ಕೇಳಿದ ಸುದೀಪ್, ನಿಮಗೆ ಯಾರು ಜೊತೆಯಾಗಿದ್ದರೆ ಚೆನ್ನಾಗಿತ್ತು ಎಂದು ಕಾರ್ತಿಕ್ ಅವರನ್ನು ಪ್ರಶ್ನಿಸಿದ್ದು ಮತ್ತು ಕಾರ್ತಿಕ್ ನೀಡಿದ ಪ್ರತಿಕ್ರಿಯೆ ಹಾಸ್ಯಮಯವಾಗಿತ್ತು.

ನಿದ್ದೆಗಣ್ಣಿನಲ್ಲಿ ದಿವಾಕರ್ ಮಾತನಾಡುವ ಮತ್ತು ಬೈದಾಡುವ ವಿಚಾರದ ಬಗ್ಗೆ ಪ್ರಸ್ತಾಪವಾದಾಗ ಎಲ್ಲರೂ ನಗಾಡಿದ್ದಾರೆ. ಇನ್ನು ಚಂದನ್, ನಿವೇದಿತಾ ಅವರ ರೀತಿ ನಡೆದಾಡಿ ತೋರಿಸಿದ್ದಾರೆ. ಗೊಂಬೆ ಮಗುವನ್ನು ಸದಸ್ಯರು ಕಾಳಜಿಯಿಂದ ನೋಡಿಕೊಂಡಿದ್ದರ ಬಗ್ಗೆ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಂಯುಕ್ತಾ ಮತ್ತು ಲಾಸ್ಯ ಅವರ ಮಾತು, ಮನೆಯ ಸದಸ್ಯರೊಂದಿಗೆ ಸಂಯುಕ್ತಾ ನೇರ ಮಾತುಗಳ ಬಗ್ಗೆ ಚರ್ಚೆಯೇ ನಡೆದಿದೆ. ಬೇರೆಯವರಿಗೆ ಪ್ರಶ್ನೆ ಕೇಳಿದಾಗ, ಅವರ ಉತ್ತರವನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಇರಲಿ ಎಂದು ಸಂಯುಕ್ತಾಗೆ ಸಲಹೆ ನೀಡಿದ್ದಾರೆ.

‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಬೆಂಗಳೂರಿನ ನಿರ್ಮಲಾ ಅವರು, ಅನುಪಮಾಗೆ ಪ್ರಶ್ನೆ ಕೇಳಿದ್ದು, ನೀವು ದಿವಾಕರ್ ಇಷ್ಟು ದಿನ ಉಳಿದುಕೊಂಡಿದ್ದೇಗೆ ಎಂದು ಕೃಷಿ ಅವರ ಬಳಿ ಹೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುಪಮಾ, ನಾನು ದಿವಾಕರ್ ಅವರನ್ನು ವೀಕ್ ಕಂಟೆಸ್ಟೆಂಟ್ ಎಂದು ಪರಿಗಣಿಸಿಲ್ಲ. ಅವರನ್ನು ಯಾರೊಂದಿಗೂ ಹೋಲಿಸಿಲ್ಲ. ಬದಲಾದ ಅವರ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಮೊದಲಿಗೆ ಚಂದನ್ ಸೇಫ್ ಆಗಿದ್ದಾರೆ. ನಂತರದಲ್ಲಿ ಶ್ರುತಿ, ಜಯಶ್ರೀನಿವಾಸನ್, ದಿವಾಕರ್ ಅವರು ಸೇಫ್ ಆಗಿದ್ದಾರೆ. ಕೊನೆಗೆ ಉಳಿದ ಸಮೀರಾಚಾರ್ಯ ಮತ್ತು ಜಗನ್ ಅವರಲ್ಲಿ ಸಮೀರಾಚಾರ್ಯ ಉಳಿದುಕೊಂಡಿದ್ದಾರೆ.

ಜಗನ್ ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಗೊತ್ತಾಗುತ್ತಲೇ, ಅನುಪಮಾ, ಕೃಷಿ, ಕಾರ್ತಿಕ್, ಶ್ರುತಿ ಅತ್ತಿದ್ದಾರೆ. ಜಗನ್ ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಮನೆಯ ಸದಸ್ಯರಿಗೆ ಹೇಳಿ ಹೊರಟಿದ್ದಾರೆ. ಮನೆಯಿಂದ ಹೊರ ಹೋಗುವ ಮೊದಲು ಸೂಪರ್ ಅಧಿಕಾರವನ್ನು ಕಾರ್ತಿಕ್ ಅವರಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...