alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಗೆಲ್ಲೋರು ಯಾರು ಗೊತ್ತಾ..?

finale

‘ಬಿಗ್ ಬಾಸ್’ ಸೀಸನ್ 4 ಫಿನಾಲೆಗೆ ನಡೆದಿರುವ 5 ಮಂದಿಯಲ್ಲಿ ಯಾರು ಗೆಲ್ತಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, 3 ನೇ ಸೀಸನ್ ನಲ್ಲಿ ಶ್ರುತಿ ವಿಜೇತರಾಗಿದ್ದಾರೆ.

ಕ್ರಮವಾಗಿ ಅರುಣ್ ಸಾಗರ್, ಸೃಜನ್ ಲೋಕೇಶ್ ಹಾಗೂ ಚಂದನ್ ರನ್ನರ್ ಅಪ್ ಆಗಿದ್ದಾರೆ. 4 ನೇ ಸೀಸನ್ ನಲ್ಲಿ ಗೆಲ್ಲುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಮನೆಯಿಂದ ಹೊರಗೆ ಹೋಗಿರುವ ಈಗಿನ ಸೀಸನ್ ಸ್ಪರ್ಧಿಗಳಾದ ದೊಡ್ಡ ಗಣೇಶ್, ಮಸ್ತಾನ್, ಭುವನ್, ಸಂಜನಾ, ಓಂ ಪ್ರಕಾಶ್, ಶೀತಲ್, ಸುಕೃತಾ, ಸಿಂಗರ್ ಚೈತ್ರಾ, ಕಾರುಣ್ಯ ಹಾಗೂ ನಿರಂಜನ್ ಮತ್ತೆ ಮನೆಗೆ ಬಂದಿದ್ದು, ಸದಸ್ಯರ ಖುಷಿಯನ್ನು ಹೆಚ್ಚಿಸಿದೆ.

ಶುಕ್ರವಾರದ ಸಂಚಿಕೆಯಲ್ಲಿ ವಾಣಿಶ್ರೀ ಹಾಗೂ ಕಾವ್ಯ ಬಂದಿದ್ದು, ಮನೆಯ ಹೊರಗೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾಗಿ ಮಾಹಿತಿ ನೀಡಿದ್ದಾರೆ.

ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಕೇಳಿದ ಸದಸ್ಯರು ಪುಳಕಿತರಾಗಿದ್ದಾರೆ. ಇನ್ನು ತಮಗೆ ಬಂದ ಪತ್ರಗಳನ್ನು ಓದಿದ ಸ್ಪರ್ಧಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಸೀಸನ್ 4 ರಲ್ಲಿ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಮೋಹನ್, ಕೀರ್ತಿ ಕುಮಾರ್, ಮಾಳವಿಕಾ, ರೇಖಾ, ಪ್ರಥಮ್ ಅವರಲ್ಲಿ ಗೆಲ್ಲೋರು ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...