alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯ ರಹಸ್ಯ ಬಿಚ್ಚಿಟ್ಟ ದೊಡ್ಡ ಗಣೇಶ್

dodda-ganesh

‘ಬಿಗ್ ಬಾಸ್’ ಮನೆಯಿಂದ ಹೊರ ಬಂದಿರುವ ದೊಡ್ಡ ಗಣೇಶ್, ‘ಸೂಪರ್ ಸಂಡೇ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡಿದ್ದಾರೆ.

ಸುದೀಪ್, 2 ವಾರ ಮನೆಯಲ್ಲಿದ್ದ ನಿಮ್ಮ ಅನುಭವ ಹೇಗಿತ್ತು ಎಂದು ಪ್ರಶ್ನಿಸುತ್ತಲೇ, ಅಲ್ಲಿನ ಚಿತ್ರಣವನ್ನು ಬಿಡಿಸಿಟ್ಟ ದೊಡ್ಡ ಗಣೇಶ್, ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಮಾಳವಿಕಾ, ಶಾಲಿನಿ, ನಿರಂಜನ್, ಕೀರ್ತಿ ಮೊದಲಾದವರು ಗ್ರೂಪ್ ಮಾಡಿಕೊಂಡಿದ್ದಾರೆ. ಬೇರೆ ಸದಸ್ಯರನ್ನು ಸೇರಿಸಿಕೊಳ್ಳಲು ಪ್ಲಾನ್ ಮಾಡುತ್ತಾರೆ. ಕಾವ್ಯ, ಕಾರುಣ್ಯ ಜೊತೆ ಸೇರಿ ಪ್ಲಾನ್ ಮಾಡಿದ್ದಾರೆ. ನಾನು ಹೊರಗಿನವನಾದ್ದರಿಂದ ಮನೆಯಲ್ಲಿ ಹೊಂದಿಕೊಳ್ಳಲು ಕಷ್ಟವಾಯಿತಾದರೂ, ನಿಧಾನಕ್ಕೆ ಹೊಂದಿಕೊಂಡೇ ಎಂದು ಹೇಳಿದ್ದಾರೆ.

ಅವರೆಲ್ಲಾ ಕಲಾವಿದರಾಗಿದ್ದರಿಂದ ಒಂದಾದರು. ಕಲಾವಿದರಾಗಿದ್ದರೂ ಮೋಹನ್ ಸೈಲೆಂಟ್ ಆಗಿದ್ದಾರೆ. ಓಂ ಪ್ರಕಾಶ್ ರಾವ್ ಅವರು ತಾಳ್ಮೆ ಕಳೆದುಕೊಂಡರೆ ‘ಬಿಗ್ ಬಾಸ್’ ನಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು. ಸಂಜನಾ ಮಗು ತರಹ. ಆಕೆಯನ್ನು ಭುವನ್ ಹ್ಯಾಂಡಲ್ ಮಾಡುತ್ತಾನೆ. ಪ್ರಥಮ್ ‘ಬಿಗ್ ಬಾಸ್’ ಮನೆಯಲ್ಲಿ ಇದ್ದಷ್ಟು ಒಳ್ಳೆಯದು. ಅವರನ್ನು ಓಡಿಸಲು ಸಂಚು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ನನಗೆ ‘ಬಿಗ್ ಬಾಸ್’ ಮನೆಯಲ್ಲಿ ಕಳೆದ 13 ದಿನಗಳು ಜೀವನದಲ್ಲಿ ಹೊಸ ಅನುಭವ ನೀಡಿದೆ. ಗುಂಪಿನಲ್ಲಿ ಸೇರದಿದ್ದರೂ, ಟಾಸ್ಕ್, ಕೆಲಸಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೇನೆ ಎಂದು ದೊಡ್ಡಗಣೇಶ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...