alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ರಗಳೆಗೆ ಕಾರಣವಾಯ್ತು ‘ಕಳಪೆ’ ಬೋರ್ಡ್

ಕಾವೇರಿದ್ದ ‘ಬಿಗ್ ಬಾಸ್’ ಮನೆಯಲ್ಲಿ ‘ಕಳಪೆ’ ಬೋರ್ಡ್ ವಿಚಾರವಾಗಿ ಸದಸ್ಯರ ನಡುವೆ ಮತ್ತೆ ವಾಗ್ವಾದವೇ ನಡೆದಿದೆ. ಈ ವಾರ ನೀಡಲಾಗಿದ್ದ ಒಂದು ಮೊಟ್ಟೆಯ ಕತೆ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ 76 ಮೊಟ್ಟೆಗಳನ್ನು ಉಳಿಸಿಕೊಂಡ ಜೈಹೋ ಟೀಂ ವಿಜೇತವಾಗಿದ್ದು, 56 ಮೊಟ್ಟೆ ಸಂಗ್ರಹಿಸಿದ ಬೆಳಕು ಟೀಂ ಸೋತಿದೆ.

ನೀಡಲಾಗಿದ್ದ 5000 ಲಕ್ಸುರಿ ಬಜೆಟ್ ಪಾಯಿಂಟ್ ಗಳಲ್ಲಿ ಮನೆಯ ಮುಖ್ಯ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ 2200 ಪಾಯಿಂಟ್ ಗಳನ್ನು ಕಟ್ ಮಾಡಲಾಗಿದೆ.

ಕ್ಯಾಪ್ಟನ್ ಶ್ರುತಿ ಅವರಿಗೆ ನೀಡಲಾದ ಸೂಚನೆಯಂತೆ ಬೆಸ್ಟ್ ಫರ್ ಫಾರ್ಮರ್ ಆಗಿ ಸಿಹಿಕಹಿ ಚಂದ್ರು, ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವಾಕರ್ ಅವರನ್ನು ಆಯ್ಕೆ ಮಾಡಿದ್ದಾರೆ.

ತಮ್ಮ ಹೆಸರನ್ನು ಕಳಪೆ ಸ್ಪರ್ಧಿ ಎಂದು ಹೇಳಿದ್ದಕ್ಕೆ ದಿವಾಕರ್ ಆಕ್ಷೇಪಿಸಿದ್ದಾರೆ. ‘ಕಳಪೆ’ ಫಲಕ ಹಾಕಿಕೊಳ್ಳಲು ನಿರಾಕರಿಸಿದ್ದಾರೆ. ಚಂದ್ರು ಅವರೇ ತಾವು ಕಳಪೆ ಫಲಕ ಹಾಕಿಕೊಳ್ಳುವುದಾಗಿ ಹೇಳಿದರಾದರೂ, ಅದಕ್ಕೆ ಸದಸ್ಯರು ಒಪ್ಪಲಿಲ್ಲ.

ದಿವಾಕರ್ ಅವರು ಫಲಕ ಹಾಕಿಕೊಳ್ಳಲು ಮನವೊಲಿಸುವ ಪ್ರಯತ್ನಗಳು ನಡೆದವಾದರೂ, ಅವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇದೇ ವಿಚಾರವಾಗಿ ಅನುಪಮಾ, ತೇಜಸ್ವಿನಿ, ಶ್ರುತಿ, ದಯಾಳ್, ಚಂದ್ರು ಮೊದಲಾದವರು ದಿವಾಕರ್ ಬಳಿ ಮಾತನಾಡಿದರಾದರೂ ಬೋರ್ಡ್ ಹಾಕಿಕೊಳ್ಳಲ್ಲ. ನಾನು ಕಳಪೆ ಪ್ರದರ್ಶನ ನೀಡಿಲ್ಲ ಎಂಬುದು ದಿವಾಕರ್ ವಾದವಾಗಿತ್ತು.

‘ಬಿಗ್ ಬಾಸ್’ ಸೂಚನೆಯನುಸಾರ ಶ್ರುತಿ ಕಳಪೆ ಬೋರ್ಡ್ ಹಾಕಿಸಲು ವಿಫಲವಾದ ಕಾರಣಕ್ಕೆ ಮುಂದಿನವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದಾರೆ. ಪರೋಕ್ಷವಾಗಿ ‘ಬಿಗ್ ಬಾಸ್’ ಸೂಚನೆಯನ್ನು ತಿರಸ್ಕರಿಸಿದ ಕಾರಣಕ್ಕೆ ದಿವಾಕರ್ ಅವರನ್ನೂ ನೇರ ನಾಮಿನೇಟ್ ಮಾಡಲಾಗಿದೆ.

ದಿವಾಕರ್ ಅವರಿಗೆ ರಿಯಾಜ್, ಸಮೀರಾಚಾರ್ಯ ಬೆಂಬಲ ನೀಡಿದ್ದಾರೆ. ಸದಸ್ಯರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಕಾಮನ್ ಮ್ಯಾನ್ ಗಳಿಗೆ ಗೌರವ ಸಿಗುತ್ತಿಲ್ಲ ಎಂಬ ಅಸಮಾಧಾನ ಮುಂದುವರೆದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...