alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಈ ವಾರ ಹೋಗೋದ್ಯಾರು ಗೊತ್ತಾ..?

‘ಬಿಗ್ ಬಾಸ್’ನಲ್ಲಿ 2 ನೇ ವಾರ ಮನೆಯಿಂದ ಹೊರ ಹೋಗೋದ್ಯಾರು ಎಂಬ ಕುತೂಹಲ ಹೆಚ್ಚಿದೆ. ಮೊದಲ ವಾರ ಸುಮಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ.

ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಪಂಚಾಯಿತಿ ನಡೆಸಲಿದ್ದು, ಇಡೀ ವಾರ ನಡೆದ ಘಟನಾವಳಿಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ.

ಮೊದಲ ವಾರ ತಣ್ಣಗಿದ್ದ ಮನೆಯಲ್ಲಿ 2 ನೇ ವಾರಕ್ಕೆ ಕಾವೇರಿದ್ದು, ಕಾಮನ್ ಮ್ಯಾನ್ ಗಳು ಮತ್ತು ಸೆಲೆಬ್ರಿಟಿಗಳ ನಡುವೆ ಅಂತರ ಹೆಚ್ಚಾಗಿದೆ. ಟಾಸ್ಕ್ ವಿಚಾರಕ್ಕೆ ಸದಸ್ಯರ ನಡುವೆ ವಾಗ್ವಾದವೇ ನಡೆದಿದೆ. ದಿವಾಕರ್ ಅವರಂತೂ ಅನೇಕರ ಬಳಿ ಮಾತಿನ ಚಕಮಕಿ ನಡೆಸಿದ್ದಾರೆ.

ಅನೇಕ ಸದಸ್ಯರು ದಿವಾಕರ್ ಅವರನ್ನೇ ಟಾರ್ಗೆಟ್ ಮಾಡಿದಂತಿದೆ. ಇನ್ನು ಕೆಲವರು ದಿವಾಕರ್ ಗೆ ಬೆಂಬಲ ಸೂಚಿಸಿದ್ದಾರೆ. ಈ ವಾರ ದಿವಾಕರ್, ಜಗನ್ನಾಥ್, ಮೇಘಾ, ರಿಯಾಜ್, ಸಮೀರಾಚಾರ್ಯ, ದಯಾಳ್, ಕೃಷಿ, ಆಶಿತಾ ಅವರು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಮನೆಯಿಂದ ಹೊರ ಹೋಗೋದ್ಯಾರು ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...