alex Certify
ಕನ್ನಡ ದುನಿಯಾ       Mobile App
       

Kannada Duniya

ಮಸಿ ಬಳಿದಿದ್ದಕ್ಕೆ ಸಿಟ್ಟಾದ ರಿಯಾಜ್

ಸುದೀಪ್ ಅವರು ‘ಬಿಗ್ ಬಾಸ್’ ಮನೆಯೊಳಗೆ ಬಂದ್ರೂ ಗೊತ್ತಾಗಲಿಲ್ಲವಲ್ಲ ಎಂದು ಮನೆಯೊಳಗೆ ಸದಸ್ಯರು ಬೇಸರಪಟ್ಟುಕೊಂಡಿದ್ದು, ಇದೇ ವಿಚಾರವಾಗಿ ಮಾತನಾಡಿದ್ದಾರೆ. ಇಲ್ಲೇ ಅವರನ್ನು ಗುರುತಿಸಿದ್ದರೆ ನಮ್ಮೊಂದಿಗೆ ಮಾತನಾಡುತ್ತಿದ್ದರು ಎಂದು ಚಂದನ್ ಹೇಳಿದ್ದಾರೆ.

ಶ್ರುತಿ ಮತ್ತು ಚಂದನ್ ಅವರ ಕುರಿತಾಗಿ ಕಾರ್ತಿಕ್ ಮಾತನಾಡಿದ್ದು, ಇದಕ್ಕೆ ಶ್ರುತಿ ಸಿಟ್ಟಾಗಿದ್ದಾರೆ. ಇನ್ನು ಈ ವಾರ ಕ್ಯಾಪ್ಟನ್ ಆಯ್ಕೆಗೆ ನೀಡಲಾಗಿದ್ದ ಚಟುವಟಿಕೆಯಲ್ಲಿ ಅನುಪಮಾ ಅವರು ಆಯ್ಕೆಯಾಗಿದ್ದಾರೆ. ಅವರಿಗೆ ಚಾಕೋಲೇಟ್ ಗಳನ್ನು ಕೊಡಲಾಗಿದ್ದು, ಅದನ್ನು ದಿವಾಕರ್ ಮತ್ತು ಕಾರ್ತಿಕ್ ಅವರಿಗೆ ಹಂಚಿದ್ದಾರೆ.

ಈ ವಾರ ಸದಸ್ಯರ ಆಯ್ಕೆಯನುಸಾರ ರಿಯಾಜ್, ನಿವೇದಿತಾ, ಶ್ರುತಿ, ಕಾರ್ತಿಕ್, ಸಮೀರಾಚಾರ್ಯ ನಾಮಿನೇಟ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಅನುಪಮಾ ಅವರು, ಚಂದನ್ ರನ್ನು ನೇರ ನಾಮಿನೇಟ್ ಮಾಡಿದ್ದಾರೆ.

ನಾಮಿನೇಟ್ ವೇಳೆ ಕೃಷಿ ಅವರಿಂದ ಸೂಪರ್ ಅಧಿಕಾರ ಪಡೆದುಕೊಂಡಿದ್ದ ಶ್ರುತಿ, ಚಂದನ್ ಮತ್ತು ರಿಯಾಜ್ ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಚಂದನ್ ಅವರು ರಿಯಾಜ್ ಮತ್ತು ಶ್ರುತಿ ಅವರನ್ನು ನಾಮಿನೇಟ್ ಮಾಡಿದ್ದರು. ರಿಯಾಜ್ ಅವರು, ನಿವೇದಿತಾ ಮತ್ತು ಚಂದನ್ ಅವರನ್ನು ನಾಮಿನೇಟ್ ಮಾಡಿದ್ದು, ಇದನ್ನು ತಿಳಿದುಕೊಂಡ ಶ್ರುತಿ, ಸಮೀರ್ ಮತ್ತು ನಿವೇದಿತಾ ಅವರನ್ನು ನಾಮಿನೇಟ್ ಮಾಡಿದ್ದಾರೆ.

ನಿವೇದಿತಾ ಅವರು ಅಡುಗೆ ಮಾಡುವ ಕುರಿತಾಗಿ ಮಾತನಾಡಿದ್ದಕ್ಕೆ ದಿವಾಕರ್ ಮತ್ತು ಚಂದನ್ ರೇಗಾಡಿಸಿದ್ದಾರೆ. ಸದಸ್ಯರಿಗೆ ಮಸಿ ಬಳಿಯುವ ಮತ್ತು ಹಾರ ಹಾಕುವ ಚಟುವಟಿಕೆಯಲ್ಲಿ ರಿಯಾಜ್ ತನಗೆ ಮಸಿ ಬಳಿದ ದಿವಾಕರ್ ಮತ್ತು ಚಂದನ್ ಅವರ ಬಗ್ಗೆ ಬೇಸರವಾಗಿದ್ದಾರೆ. ಅವರು ಕೊಟ್ಟ ಕಾರಣ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ. ಯಾರು ಮಸಿ ಬಳಿದರೂ ಅದರ ಮೇಲೆ ರಾಜ್ಯದ ಜನ ವಿನ್ನರ್ ಎಂದು ಬರೆಯುತ್ತಾರೆ ಎಂದು ಸಮೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಬಿಗ್ ಬಾಸ್’ ಪಾಸ್, ಪ್ಲೇ, ರಿವೈಂಡ್ ಎಂದು ಹೇಳಿದಾಗ ಸದಸ್ಯರು ನಿಲ್ಲುವ, ಚಟುವಟಿಕೆ ಮಾಡುವ ಪ್ರಸಂಗ ತಮಾಷೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...