alex Certify
ಕನ್ನಡ ದುನಿಯಾ       Mobile App
       

Kannada Duniya

ಮುಜುಗರಕ್ಕೊಳಗಾದರೂ ತೋರಿಸಿಕೊಳ್ಳದ ದಯಾಳ್

‘ಬಿಗ್ ಬಾಸ್’ ಮನೆಯಲ್ಲಿ ದಯಾಳ್ ಮುಜುಗರಕ್ಕೆ ಒಳಗಾಗಿದ್ದಾರೆ. ಪ್ರಾಣಿಗಳಿಗೆ ಮನುಷ್ಯನ ಗುಣಗಳನ್ನು ಹೋಲಿಕೆ ಮಾಡುವ ವಿಶೇಷ ಟಾಸ್ಕ್ ನಲ್ಲಿ ಹೆಚ್ಚಿನವರು ದಯಾಳ್ ಅವರಿಗೆ ಹೋಲಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ಸದಸ್ಯರೆಲ್ಲರೂ ಹೇಳಿದ ಗುಣ ವಿಶೇಷಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ಕೊನೆಯಲ್ಲಿ ಹೇಳಿದ ದಯಾಳ್, ಜಯಶ್ರೀನಿವಾಸನ್ ಸೂಚಿಸಿದ್ದನ್ನು ಒಪ್ಪಿಕೊಳ್ಳಲಾರೆ. ಅವರು ಸರಿಯಾದ ಕಾರಣವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಜಯಶ್ರೀನಿವಾಸನ್ ನಾಮಿನೇಷನ್ ಆಗಿದ್ದಕ್ಕೆ ಸೈಲೆಂಟ್ ಆಗಿದ್ದಾರೆ ಎಂದು ದಯಾಳ್ ಹೇಳಿದ್ದು, ಇದನ್ನು ಒಪ್ಪದ ಶ್ರೀನಿವಾಸನ್, ನೀವು ಮೊದಲು ಮಾತನಾಡಿ ಬಳಿಕ ಮಾತನಾಡುತ್ತೇನೆ. ಮಾತೇ ಆಡದಿದ್ದರೆ, ಪ್ರತಿಕ್ರಿಯೆ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಶ್ರೀನಿವಾಸನ್ ಲೆಮನ್ ಟೀ ಮಾಡಿಕೊಂಡು ಗ್ಯಾಸ್ ಆಫ್ ಮಾಡದೇ ಬಂದಿದ್ದು, ಇದೇ ಕಾರಣಕ್ಕೆ ಮನೆಯಲ್ಲಿ ಗ್ಯಾಸ್ ಬಂದ್ ಮಾಡಲಾಗಿದೆ. ಇದರಿಂದಾಗಿ ಬಹುತೇಕರು ಶ್ರೀನಿವಾಸನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಹಿಕಹಿ ಚಂದ್ರು ಮತ್ತು ಜಗನ್ ತಾಳ್ಮೆಯಿಂದಲೇ ಶ್ರೀನಿವಾಸನ್ ಅವರನ್ನು ಪ್ರಶ್ನಿಸಿದ್ದು, ಶ್ರೀನಿವಾಸನ್ ಕ್ಯಾಮೆರಾ ಬಳಿ ಹೋಗಿ ಗ್ಯಾಸ್ ಪೂರೈಕೆ ಮಾಡುವಂತೆ ‘ಬಿಗ್ ಬಾಸ್’ಗೆ ಮನವಿ ಮಾಡಿದ್ದಾರೆ.

ಲಕ್ಸುರಿ ಬಜೆಟ್ ಟಾಸ್ಕ್ ಆಡು ಆಟ ಆಡು ಮೊದಲ ಸವಾಲ್ ನಲ್ಲಿ ಹಗ್ಗ ಹಿಡಿದು ಜೋತು ಬೀಳಬೇಕಿತ್ತು. ಇದರಲ್ಲಿ ಜಗನ್ ವಿಜೇತರಾಗಿದ್ದಾರೆ. 2 ನೇ ಸವಾಲ್ ನಲ್ಲಿ ಆಶಿತಾ ವಿನ್ ಆಗಿದ್ದು, ದಿನದ ಕೊನೆಯಲ್ಲಿ ಮನೆಯ ಸದಸ್ಯರೆಲ್ಲಾ ಸೇರಿ ವಿಜೇತರೊಬ್ಬರನ್ನು ಆಯ್ಕೆ ಮಾಡಬೇಕಿದ್ದು, ಅದರಲ್ಲಿ ಆಶಿತಾ ಅವರನ್ನು ಸದಸ್ಯರೆಲ್ಲರೂ ಆಯ್ಕೆ ಮಾಡಿದ್ದಾರೆ.

ಒಂದು ಸವಾಲ್ ನಲ್ಲಿ ವಿಜೇತರಾದವರು ಮತ್ತೊಂದು ಸವಾಲ್ ನಲ್ಲಿ ಭಾಗವಹಿಸುವಂತಿಲ್ಲ. ಕಣ್ಣಿಗೆ ಬಟ್ಟೆಕಟ್ಟಿಕೊಂಡು ಜೂಜಾಟ ಆಡುವಾಗ ಜೆ.ಕೆ. ಗಾಯ ಮಾಡಿಕೊಂಡಿದ್ದಾರೆ. ನಿವೇದಿತಾ ಬಳಿ ಮಾತನಾಡುತ್ತಿದ್ದ ಜಗನ್ ಒಂದಿಷ್ಟು ಸಲಹೆ ನೀಡಿದ್ದಾರೆ. ದಿವಾಕರ್ ಸೈಲೆಂಟ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...