alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಿಂದ ದಯಾಳ್ ಹೊರಕ್ಕೆ

ಕೊನೆಯವರೆಗೂ ಉಳಿಯಲಿದ್ದಾರೆ ಎನ್ನಲಾಗಿದ್ದ ದಯಾಳ್ ಪದ್ಮನಾಭನ್ 3 ನೇ ವಾರಕ್ಕೆ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಿದ್ದಾರೆ.

ಈ ವಾರ ಶ್ರುತಿ ಮತ್ತು ದಿವಾಕರ್ ನೇರ ನಾಮಿನೇಷನ್ ಆಗಿದ್ದರೆ, ರಿಯಾಜ್, ಜಯಶ್ರೀನಿವಾಸನ್, ನಿವೇದಿತಾ ಗೌಡ, ದಯಾಳ್ ಅವರು ಸದಸ್ಯರಿಂದ ನಾಮಿನೇಷನ್ ಆಗಿದ್ದರು. ಅನುಪಮಾ ಅವರನ್ನು ಕ್ಯಾಪ್ಟನ್ ನಾಮಿನೇಟ್ ಮಾಡಿದ್ದರು. ಇವರಲ್ಲಿ ಶ್ರುತಿ ಮೊದಲೇ ಸೇಫ್ ಆಗಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.

ಶನಿವಾರದ ಸಂಚಿಕೆಯಲ್ಲಿ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸದಸ್ಯರೆಲ್ಲರ ಜೊತೆ ಪಂಚಾಯಿತಿ ನಡೆಸಿದ್ದಾರೆ. ಸಿಹಿಕಹಿ ಚಂದ್ರು ಅವರು ಭೋವಿ ಸಮಾಜದ ಕುರಿತಾಗಿ ಆಡಿದ ಮಾತಿಗೆ ಕ್ಷಮೆ ಯಾಚಿಸಿದ್ದಾರೆ. ಪ್ರತ್ಯೇಕವಾಗಿ ಸದಸ್ಯರೆಲ್ಲರೂ ಈ ವಾರ ತೋರಿದ ವರ್ತನೆಯ ಕುರಿತಾಗಿ ಪ್ರಸ್ತಾಪಿಸಿದ ಸುದೀಪ್, ಸಲಹೆ ಸೂಚನೆ ನೀಡಿದ್ದಾರೆ. ಮತ್ತೆ ಕೆಲವರಿಗೆ ಟಾಂಗ್ ಕೊಟ್ಟಿದ್ದಾರೆ.

ಮನೆಯಲ್ಲಿ ಸದಸ್ಯರೆಲ್ಲರೂ ಪದೇ, ಪದೇ ತಪ್ಪು ಮಾಡುತ್ತಾ ಗ್ಯಾಸ್ ಬಂದ್ ಆಗಿದ್ದು ಮತ್ತು ಹಾಲು ಹೆಚ್ಚುವರಿಯಾಗಿದ್ದರೂ, ಅದನ್ನು ತೋರಗೊಡದ ಕಾರಣಕ್ಕೆ ತಿಳಿ ಹೇಳಿದ್ದಾರೆ. ಗ್ಯಾಸ್ ವಿಚಾರದಲ್ಲಿ ತಪ್ಪುಗಳು ರಿಪೀಟ್ ಆಗಿದ್ದು ಸರಿಯಲ್ಲ, ಅದು ಡೇಂಜರ್ ಎಲ್ಲರೂ ಗಮನಿಸಬೇಕಿತ್ತು ಎಂದು ತಿಳಿಸಿದ್ದಾರೆ.

ಅದೇ ರೀತಿ 3 ವಾರದಲ್ಲಿ ಮೂವರು ಕ್ಯಾಪ್ಟನ್ ಆಗಿದ್ದು, ಅವರಲ್ಲಿ ಬೆಸ್ಟ್ ಮತ್ತು ವರ್ಸ್ಟ್ ಯಾರು ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಕೆಲವರು ಬೆಸ್ಟ್ ಕ್ಯಾಪ್ಟನ್ ಆಗಿ ಅನುಪಮಾ ಅವರನ್ನು ಮತ್ತೆ ಕೆಲವರು ಶ್ರುತಿ ಅವರ ಹೆಸರನ್ನು ಹೇಳಿದ್ದಾರೆ. ಎಲ್ಲರೂ ವರ್ಸ್ಟ್ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಅವರನ್ನು ಸೂಚಿಸಿದ್ದಾರೆ.

ಇನ್ನು ಸ್ಪರ್ಧಿಯೊಬ್ಬರು ಗೆದ್ದ ಸಂದರ್ಭದಲ್ಲಿ ಆಶಿತಾ ನೀಡಿದ್ದ ಪ್ರತಿಕ್ರಿಯೆ ಕುರಿತಾಗಿ ಸುದೀಪ್ ಪ್ರಸ್ತಾಪಿಸಿದರಾದರೂ, ಅದನ್ನು ಬೆಳೆಸಲಿಲ್ಲ. ಇನ್ನು ಚಂದನ್, ಜಯಶ್ರೀನಿವಾಸನ್ ಮತ್ತು ನಿವೇದಿತಾ ಅವರೊಂದಿಗಿನ ಸಂಭಾಷಣೆ ತಮಾಷೆಯಾಗಿತ್ತು. ಜೆ.ಕೆ. ಮತ್ತು ಜಗನ್ ಅವರಿಗೆ ಕಿಚಾಯಿಸಿದ ಕಿಚ್ಚ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ನಾಮಿನೇಟ್ ಆದ ಸದಸ್ಯರಲ್ಲಿ ನಿವೇದಿತಾ, ಅನುಪಮಾ, ಜಯಶ್ರೀನಿವಾಸನ್, ರಿಯಾಜ್ ಅವರು ಸೇಫ್ ಆದರೆ ದಯಾಳ್ ಅವರು ಮನೆಯಿಂದ ಹೊರ ಬಂದಿದ್ದಾರೆ. ಮನೆಯಿಂದ ಹೊರ ಬರುವ ಮೊದಲು ರಿಯಾಜ್ ಗೆ ಸೂಪರ್ ಅಧಿಕಾರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...