alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚಾಯ್ತು ಕಾಮನ್ ಮ್ಯಾನ್ ಗಳು–ಸೆಲೆಬ್ರಿಟಿಗಳ ಅಂತರ

‘ಬಿಗ್ ಬಾಸ್’ ಸೀಸನ್ 5 ನಲ್ಲಿ ಸೆಲೆಬ್ರಿಟಿಗಳೊಂದಿಗೆ ಕಾಮನ್ ಮ್ಯಾನ್ ಗಳಿಗೂ ಅವಕಾಶ ನೀಡಲಾಗಿದೆ. 2 ನೇ ವಾರದಲ್ಲಿ ಮನೆಯೊಳಗೆ ಘರ್ಷಣೆ ಹೆಚ್ಚಾಗಿದೆ. ದಯಾನಂದ್ ಬಳಿಕ ರಿಯಾಜ್ ಕೂಡ ರಾಂಗ್ ಆಗಿದ್ದಾರೆ.

ಜೈಹೋ ತಂಡದ ನಾಯಕರಾಗಿದ್ದ ದಯಾಳ್ ತಾವು ಹೇಳಿದಂತೆ ಕೇಳಿಲ್ಲವೆಂದು ರೇಗಾಡಿದ್ದಾರೆ. ಇದಕ್ಕೆ ರಿಯಾಜ್ ಆಕ್ಷೇಪಿಸಿದ್ದಾರೆ. ಮೊದಲಿಗೆ ಕೂಲಾಗಿ ಮಾತನಾಡಿದ ರಿಯಾಜ್, ದಯಾಳ್ ಏರಿದ ದನಿಯಲ್ಲಿ ಮಾತನಾಡುತ್ತಿದ್ದಂತೆ ತಾವೂ ಜೋರು ಮಾಡಿದ್ದಾರೆ. ದಯಾಳ್ ಆಡಿದ ಮಾತಿಗೆ ದಯಾನಂದ್ ಕೂಡ ಆಕ್ಷೇಪಿಸಿದ್ದಾರೆ. ಹಾಗೆಲ್ಲಾ ಮಾತನಾಡಬೇಡಿ ಎಂದು ಜೋರಾಗಿ ಹೇಳಿದ್ದಾರೆ.

ತಾವು ಕಾಮನ್ ಮ್ಯಾನ್ ಗಳಾಗಿರುವುದಕ್ಕೆ ಹೀಗೆಲ್ಲಾ ಮಾತಾಡ್ತಾರೆ ಎಂದು ರಿಯಾಜ್ ಹೇಳಿದ್ದಕ್ಕೆ, ಆಕ್ಷೇಪಿಸಿದ ಜಗನ್ ಇಲ್ಲಿ ಯಾರೂ ಹಾಗೆ ಮಾಡುತ್ತಿಲ್ಲ. ಇಲ್ಲಿರುವ ಎಲ್ಲರೂ ಒಂದೇ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ. ಅನುಪಮಾ ಕೂಡ ಇದೇ ರೀತಿ ಹೇಳಿದ್ದಾರೆ.

ಕ್ಯಾಪ್ಟನ್ ಶ್ರುತಿ ಅವರೂ, ಸುಮ್ಮನಿರುವಂತೆ ಕೂಗಾಡಿದ ಬಳಿಕ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಸೆಲೆಬ್ರಿಟಿಗಳೆಲ್ಲಾ ಒಂದೆಡೆ ಕಾಣಿಸಿಕೊಂಡರೆ, ಜಯಶ್ರೀನಿವಾಸನ್, ದಯಾನಂದ್, ರಿಯಾಜ್, ಸಮೀರಾಚಾರ್ಯ ಒಂದೆಡೆ ಸೇರಿ ಮಾತನಾಡಿಕೊಂಡಿದ್ದಾರೆ.

ರಿಯಾಜ್ ಮತ್ತು ದಯಾನಂದ್ ಅವರಂತೂ ಕಾಮನ್ ಮ್ಯಾನ್ ವಿಚಾರದ ಕುರಿತಾಗಿಯೇ ಪ್ರತ್ಯೇಕವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮನೆಯಲ್ಲಿ ಸೆಲೆಬ್ರೆಟಿಗಳು ಮತ್ತು ಕಾಮನ್ ಮ್ಯಾನ್ ಗಳ ನಡುವೆ ಅಂತರ ಹೆಚ್ಚಾಗತೊಡಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...