alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲೋ ಕುಳಿತು ಮತ ಚಲಾಯಿಸುವವರಿಗೆ ಧಿಕ್ಕಾರ ಎಂದ ಚಂದನ್

‘ಬಿಗ್ ಬಾಸ್’ನಲ್ಲಿ ಸದಸ್ಯರಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಸಲು ‘ಪ್ರಜಾರಾಜ್ಯ’ ಟಾಸ್ಕ್  ನೀಡಲಾಗಿದೆ. ಒಂದು ತಂಡದಲ್ಲಿ ರಿಯಾಜ್, ದಿವಾಕರ್, ಚಂದನ್, ಶ್ರುತಿ(ಶಾಂತಿ ಕ್ರಾಂತಿ ಪಕ್ಷ) ಅವರಿದ್ದು, ಮತ್ತೊಂದು ತಂಡದಲ್ಲಿ(ಯುವ ಶಕ್ತಿ) ಅನುಪಮಾ, ಕಾರ್ತಿಕ್, ಶ್ರುತಿ, ಕೃಷಿ ಅವರಿದ್ದಾರೆ.

ಸೀಕ್ರೆಟ್ ರೂಂನಲ್ಲಿರುವ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರು ಬೆಂಬಲಿಸಿದ್ದರಿಂದ ದಿವಾಕರ್ ಮತ್ತು ಶ್ರುತಿ ಅವರು ತಮ್ಮ ತಂಡದ ನಾಯಕರಾಗಿದ್ದಾರೆ. ಈ ವಿಷಯ ಮನೆಯೊಳಗಿನ ಸದಸ್ಯರಿಗೆ ತಿಳಿದಿಲ್ಲ. ಎರಡೂ ಪಕ್ಷಗಳಿಗೆ ಹಣ ಕೊಟ್ಟಿರುವ ‘ಬಿಗ್ ಬಾಸ್’ ಬಹುಮತಕ್ಕೆ ಕನಿಷ್ಠ 5 ಸದಸ್ಯರ ಬೆಂಬಲ ಬೇಕೆಂದು ತಿಳಿಸಿದ್ದಾರೆ. ಹಣ ಕಾಪಾಡಿಕೊಳ್ಳಲು ದಿವಾಕರ್ ಹೆಚ್ಚಿನ ಒತ್ತು ನೀಡಿದ್ದು, ಸದಸ್ಯರನ್ನು ಸೆಳೆಯಲು ಪ್ರಯತ್ನ ನಡೆಸಿದ್ದು, ವಿಶೇಷವಾಗಿತ್ತು.

ಚಂದನ್, ಸೂಟ್ ಕೇಸ್ ಕೊಡಿ ಓಟು ಹಾಕುವೆ. ನೀವೇ ಆಡಳಿತ ಪಕ್ಷವಾಗಿ ಎಂದು ಅನುಪಮಾ ಅವರಿಗೆ ಹೇಳಿದ್ದು, ಸೂಟ್ ಕೇಸ್ ಖಾಲಿ ಇದೆ ಎಂದು ಅನುಪಮಾ ತಿಳಿಸಿದ್ದಾರೆ. ಇದನ್ನು ಒಪ್ಪದ ಚಂದನ್ ಹಣ ಕೊಟ್ರೆ ಓಟು ಹಾಕುವುದಾಗಿ ತಿಳಿಸಿದ್ದಾರೆ. ಆಡಳಿತಕ್ಕೆ ಬರಲು ಪಕ್ಷಗಳ ಸದಸ್ಯರ ನಡುವೆ ಪೈಪೋಟಿ ನಡೆದಿದೆ.

ಮನೆಯ ವಿವಿಧ ಏರಿಯಾಗಳನ್ನು ಕ್ಷೇತ್ರಗಳಾಗಿ ವಿಂಗಡಿಸಿದ್ದು, ಎರಡೂ ಪಕ್ಷಗಳಿಂದ ತಲಾ ಒಬ್ಬರು ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಸೀಕ್ರೆಟ್ ರೂಂನಲ್ಲಿದ್ದ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರು(ಇವರಿಬ್ಬರ ನಡುವೆ ಪ್ರತಿನಿಧಿಗಳ ಆಯ್ಕೆ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ) ಬೆಂಬಲಿಸಿದ್ದರಿಂದ ಲಿವಿಂಗ್ ಏರಿಯಾದಿಂದ ಅನುಪಮಾ, ಕಿಚನ್ ಏರಿಯಾದಿಂದ ಕೃಷಿ, ಗಾರ್ಡನ್ ಏರಿಯಾದಿಂದ ಶ್ರುತಿ, ಬೆಡ್ ರೂಂ ಏರಿಯಾದಿಂದ ರಿಯಾಜ್ ಆಯ್ಕೆಯಾಗಿದ್ದಾರೆ.

ಬಹುಮತ ಪಡೆದ ಶಾಂತಿ ಕ್ರಾಂತಿ ಪಕ್ಷ ಆಡಳಿತಕ್ಕೆ ಬಂದಿದೆ. ಮನೆಯ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರಿಗೆ ದಂಡ ವಿಧಿಸುವುದಾಗಿ ಆಡಳಿತ ಪಕ್ಷದವರು ಹೇಳಿದ್ದು, ಇದಕ್ಕೆ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಮತಗಳು ಬಂದರೂ ತಮ್ಮ ಪಕ್ಷ ಗೆಲ್ಲದಿರುವ ಬಗ್ಗೆ ನಿವೇದಿತಾ ಬಳಿ ಮಾತನಾಡಿದ ಚಂದನ್, ಎಲ್ಲೋ ಕುಳಿತು ಮತ ಚಲಾಯಿಸುವವರಿಗೆ ಧಿಕ್ಕಾರ ಎಂದು ಹೇಳಿದ್ದಾರೆ. ಸೀಕ್ರೆಟ್ ರೂಂನಲ್ಲಿ ಕುಳಿತು ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರು ಮತ ಚಲಾಯಿಸಿರುವುದು ಬಹುಶಃ ಚಂದನ್ ಗೆ ಗೊತ್ತಾದಂತಿದೆ.

ಭ್ರಷ್ಟ ಸದಸ್ಯನಾಗಿ ದಿವಾಕರ್, ನಿಷ್ಠಾವಂತ ಸದಸ್ಯರಾಗಿ ನಿವೇದಿತಾ ಆಯ್ಕೆಯಾಗಿದ್ದಾರೆ. ಎರಡೂ ಪಕ್ಷದ ಮುಖಂಡರಾದ ಶ್ರುತಿ ಹಾಗೂ ದಿವಾಕರ್ ಅವರಿಗೆ ವಿಶೇಷ ಉಪಾಹಾರ ನೀಡಲಾಗಿದೆ. ಅದನ್ನು ಬೇರೆ ಸದಸ್ಯರೊಂದಿಗೆ ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...