alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದನ್ ಕ್ಯಾಪ್ಟನ್: ಅನುಪಮಾ, ಚಂದ್ರು, ಆಶಿತಾಗೆ ಶಿಕ್ಷೆ

‘ಬಿಗ್ ಬಾಸ್’ ಮನೆಯಲ್ಲಿ 4 ವಾರಗಳಿಂದ ನಾಮಿನೇಟ್ ಆಗದೇ ಉಳಿದಿದ್ದ ಚಂದನ್ 5 ನೇ ವಾರವೂ ಸೇಫ್ ಆಗಿದ್ದಾರೆ. ಕಾರಣ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

‘ಬಿಗ್ ಬಾಸ್’ ಕ್ಯಾಪ್ಟನ್ ಆಯ್ಕೆಗಾಗಿ ನೀಡಿದ್ದ ಚಟುವಟಿಕೆಯಲ್ಲಿ ಕೊನೆಯವರಾಗಿ ನಿವೇದಿತಾ ಮತ್ತು ಚಂದನ್ ಅವರು ಉಳಿದಿದ್ದು, ಚಂದನ್ ಕ್ಯಾಪ್ಟನ್ ಆಗಿದ್ದಾರೆ.

ಈ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸದಸ್ಯರೆಲ್ಲರ ಸಮ್ಮುಖದಲ್ಲಿಯೇ ನಾಮಿನೇಟ್ ಮಾಡಬೇಕಿತ್ತು. ಅವರಲ್ಲಿ ಸಿಹಿಕಹಿ ಚಂದ್ರು ತಮಗೆ ಪ್ರಬಲ ಸ್ಪರ್ಧಿಗಳೆಂದು ಸಮೀರಾಚಾರ್ಯ ಮತ್ತು ದಿವಾಕರ್ ಅವರನ್ನು ನಾಮಿನೇಟ್ ಮಾಡಿ ಜಾಣ್ಮೆ ಮೆರೆದರು. ಅವರಿಗೆ ತಿರುಗೇಟು ನೀಡುವಂತೆ ಸಮೀರಾಚಾರ್ಯ ಕೂಡ ಚಂದ್ರು ಮತ್ತು ಜಗನ್ ಅವರನ್ನು ನಾಮಿನೇಟ್ ಮಾಡಿದ್ದು ವಿಶೇಷವಾಗಿತ್ತು.

ಇನ್ನು ನಿವೇದಿತಾ ಹಾಗೂ ರಿಯಾಜ್ ಅವರನ್ನು ಬಹುತೇಕರು ನಾಮಿನೇಟ್ ಮಾಡಿದ್ದು, ನಿವೇದಿತಾ ಮಾತಿನ ಮೂಲಕವೇ ಅನುಪಮಾ ಮತ್ತು ಆಶಿತಾ ಅವರಿಗೆ ತಿರುಗೇಟು ನೀಡಿದ್ದಾರೆ. ಮನೆಯಿಂದ ಹೊರ ಹೋಗಿದ್ದ ತೇಜಸ್ವಿನಿ ನೀಡಿದ್ದ ಸೂಪರ್ ಅಧಿಕಾರದಂತೆ ಕಾರ್ತಿಕ್, ರಿಯಾಜ್ ಮತ್ತು ದಿವಾಕರ್ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಈ ವಾರ ಸದಸ್ಯರ ಆಯ್ಕೆಯನುಸಾರ ರಿಯಾಜ್, ನಿವೇದಿತಾ, ಕೃಷಿ, ಚಂದ್ರು, ಜಗನ್, ಆಶಿತಾ ಹಾಗೂ ದಿವಾಕರ್ ಅವರು ನಾಮಿನೇಟ್ ಆಗಿದ್ದು, ಕ್ಯಾಪ್ಟನ್ ಚಂದನ್ ಅವರು ಒಬ್ಬರನ್ನು ಉಳಿಸಬಹುದಾಗಿತ್ತು. ಅವರು, ರಿಯಾಜ್ ಅವರನ್ನು ಉಳಿಸಿಕೊಂಡಿದ್ದಾರೆ.

ಇನ್ನು ತಮ್ಮನ್ನು ನಾಮಿನೇಟ್ ಮಾಡಿದ್ದು ಮತ್ತು ಚಂದನ್ ಉಳಿಸಿಕೊಳ್ಳದ ಕಾರಣಕ್ಕೆ ನಿವೇದಿತಾ ಕಣ್ಣೀರಿಟ್ಟಿದ್ದು, ಅವರಿಗೆ ದಿವಾಕರ್ ಸಮಾಧಾನಪಡಿಸಿದ್ದಾರೆ. ನಾಮಿನೇಟ್ ಆದರೆ, ನಮ್ಮನ್ನು ಟಿ.ವಿ.ಯಲ್ಲಿ ತೋರಿಸಿ ಉಳಿಸಲು ವೋಟ್ ಮಾಡಿ ಎಂದು ಹೇಳುತ್ತಾರೆ. ಜನ ನಮ್ಮನ್ನು ಉಳಿಸುತ್ತಾರೆ ಎಂದು ಹೇಳಿದ್ದಾರೆ. ಆದರೂ, ನಿವೇದಿತಾಗೆ ಅಳು ತಡೆಯಲಾಗಿಲ್ಲ.

ಮನೆಯಲ್ಲಿ ಸೆಲೆಬ್ರಿಟಿಗಳು ಮತ್ತು ಕಾಮನ್ ಮ್ಯಾನ್ ಗಳ ನಡುವೆ ಮತ್ತೆ ಪ್ರತ್ಯೇಕತೆ ಕಾಣಿಸಿಕೊಂಡಿದೆ. ಇದೇ ವಿಚಾರ ಎರಡೂ ಕಡೆಯಲ್ಲಿ ಚರ್ಚೆಗೆ ಒಳಗಾಗಿದೆ. ಕ್ಯಾಪ್ಟನ್ ಆಯ್ಕೆಗಾಗಿ ಚಟುವಟಿಕೆಯಲ್ಲಿ ಹಾಡು ನಿಲ್ಲಿಸುವಾಗ ರಿಯಾಜ್ ಅವರ ಕಡೆಯವರಿಗೆ ನೆರವಾಗಿದ್ದಾರೆ ಎಂದು ಕೆಲವು ಸದಸ್ಯರು ಮಾತಾಡಿಕೊಂಡಿದ್ದಾರೆ.

ಇನ್ನು ಕಾರ್ತಿಕ್ ಗೆ ನೀಡಲಾಗಿದ್ದ ಚಾಕೊಲೇಟ್ ಅನ್ನು ಅವರೊಬ್ಬರೇ ತಿನ್ನಬೇಕಿತ್ತು. ಅದನ್ನು ಚಂದ್ರು, ಅನುಪಮಾ, ಆಶಿತಾ ಅವರು ತಿಂದಿದ್ದು, ಅವರಿಗೆ ಹಾಗಲಕಾಯಿ ರಸ ಕುಡಿಯುವ ಶಿಕ್ಷೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...