alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಸದಸ್ಯರ ಭವಿಷ್ಯ ಹೇಳಿದ ಜಯಶ್ರೀನಿವಾಸನ್, ಸಮೀರ್

‘ಬಿಗ್ ಬಾಸ್’ ಮನೆಯಲ್ಲಿ ಕ್ರಿಸ್ ಮಸ್ ಸಂಭ್ರಮ ಜೋರಾಗಿದೆ. ಮನೆಯ ಸದಸ್ಯರು ತಮ್ಮ ಅನಿಸಿಕೆ, ಆಸೆಗಳನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ. ಪತ್ರ ಓದಲು ಸಮೀರ್ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎಂದು ದಿವಾಕರ್ ಆಕ್ಷೇಪಿಸಿದ್ದಾರೆ.

ಚಂದನ್, ಶ್ರುತಿ, ಸಮೀರಾಚಾರ್ಯ ಮೊದಲಾದವರು ಪತ್ರದಲ್ಲಿ ತಮ್ಮ ಆಸೆಗಳನ್ನು ಹೇಳಿಕೊಂಡಿದ್ದಾರೆ. ಸಮೀರಾಚಾರ್ಯ ಅವಳಿ –ಜವಳಿ ಮಕ್ಕಳಾಗಲಿ ಎಂದು ಕೇಳಿಕೊಂಡಿದ್ದು ವಿಶೇಷವಾಗಿತ್ತು. ಈ ವಾರ ಕ್ಯಾಪ್ಟನ್ ಆಗಿ ರಿಯಾಜ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಆಯ್ಕೆಗಾಗಿ ಕಳೆದ ವಾರ ಕೊಲೆಗಾರನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ ರಿಯಾಜ್ ಮತ್ತು ಅನುಪಮಾ ಅವರನ್ನು ಆಯ್ಕೆ ಮಾಡಲಾಗಿದ್ದು, ತಲಾ ನಾಲ್ವರು ಸದಸ್ಯರು ಇಬ್ಬರನ್ನು ಬೆಂಬಲಿಸಿದ್ದಾರೆ.

ಅನುಪಮಾ ತಂಡದಲ್ಲಿ ಕಾರ್ತಿಕ್, ಶ್ರುತಿ, ಕೃಷಿ, ದಿವಾಕರ್ ಅವರಿದ್ದರೆ, ರಿಯಾಜ್ ತಂಡದಲ್ಲಿ ಚಂದನ್, ಜಯಶ್ರೀನಿವಾಸನ್, ನಿವೇದಿತಾ, ಸಮೀರಾಚಾರ್ಯ ಅವರಿದ್ದರು. ಶ್ರುತಿ ಮತ್ತು ನಿವೇದಿತಾ ಅವರನ್ನು ಗಮ್ ಟೇಪ್ ಮೂಲಕ ಗೋಡೆಗೆ ಅಂಟಿಸಲಾಗಿದ್ದು, ಬಹು ಹೊತ್ತಿನವರೆಗೂ ಗೋಡೆಗೆ ಅಂಟಿಕೊಂಡಿದ್ದ ನಿವೇದಿತಾ ತಂಡದ ನಾಯಕ ರಿಯಾಜ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಪುರುಷ ಸದಸ್ಯರು ಹಾಗೂ ಅನುಪಮಾ(ಲಾಸ್ಯರಿಂದ ಸೂಪರ್ ಅಧಿಕಾರ ಪಡೆದುಕೊಂಡಿದ್ದರು) ಕನ್ ಫೆಷನ್ ರೂಂನಲ್ಲಿ ನಾಮಿನೇಟ್ ಮಾಡಿದ್ದು, ಉಳಿದ ಮಹಿಳಾ ಸದಸ್ಯರು ಎಲ್ಲರೆದುರಲ್ಲೇ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ರಿಯಾಜ್ ‘ಬಿಗ್ ಬಾಸ್’ ಸೂಚನೆಯಂತೆ ದಿವಾಕರ್ ಅವರನ್ನು ನೇರ ನಾಮಿನೇಟ್ ಮಾಡಿದ್ದು, ಇದಕ್ಕೆ ಅವರು ನೀಡಿದ ಕಾರಣ ಸರಿ ಇಲ್ಲ ಎಂದು ದಿವಾಕರ್ ಜಗಳವಾಡಿದ್ದಾರೆ. ರಿಯಾಜ್ ಮತ್ತು ದಿವಾಕರ್ ನಡುವೆ ಮಾತಿಗೆ ಮಾತು ಬೆಳೆದಿದೆ.

ಇನ್ನು ಸಮೀರಾಚಾರ್ಯ ಪಂಚಾಂಗದ ಮೂಲಕ ಮನೆಯ ಸದಸ್ಯರ ಭವಿಷ್ಯ ಹೇಳಿದರೆ, ಜಯಶ್ರೀನಿವಾಸನ್ ಸಂಖ್ಯಾಶಾಸ್ತ್ರದ ಮೂಲಕ ಸದಸ್ಯರ ಭವಿಷ್ಯವನ್ನು ತಿಳಿಸಿದ್ದಾರೆ. ಸಮೀರಾಚಾರ್ಯ ನಮಗೆ ಯುಗಾದಿ ಹೊಸ ವರ್ಷ ಎಂದರೆ, ಜಗತ್ತಿನಲ್ಲಿ ಅತಿ ಹೆಚ್ಚು ಜನ ಜನವರಿ 1 ಹೊಸ ವರ್ಷವಾಗಿ ಆಚರಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಜಯಶ್ರೀನಿವಾಸನ್ ಹೇಳಿದ ಭವಿಷ್ಯದ ಬಗ್ಗೆ ಚಂದನ್, ದಿವಾಕರ್ ಬಳಿ ಗೇಲಿ ಮಾಡಿದ್ದಾರೆ.

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮನೆಗೆ ಸಾಂತಾಕ್ಲಾಸ್ ವೇಷಧಾರಿ ಆಗಮಿಸಿದ್ದು, ಅವರಿಂದ ಉಡುಗೊರೆ ಪಡೆದ ಸದಸ್ಯರು ಸಂಭ್ರಮಿಸಿದ್ದಾರೆ. ಈ ವಾರ ದಿವಾಕರ್, ಜಯಶ್ರೀನಿವಾಸನ್, ಕೃಷಿ, ನಿವೇದಿತಾ, ಸಮೀರಾಚಾರ್ಯ ನಾಮಿನೇಟ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...