alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ಗೆ ಬಂದ ಶ್ರುತಿ, ಅಯ್ಯಪ್ಪ, ನೀತು

20170110_211138

‘ಬಿಗ್ ಬಾಸ್’ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ, ಮನೆಯಲ್ಲಿದ್ದ ಸದಸ್ಯರೆಲ್ಲಾ ಖಾಲಿಯಾಗತೊಡಗಿದ್ದರು.

ಶೋ 2 ವಾರ ವಿಸ್ತರಣೆಯಾಗುತ್ತಿದ್ದಂತೆ, ಮತ್ತೆ ಮನೆಯೊಳಗೆ ಸದಸ್ಯರು ಆಗಮಿಸಿದ್ದಾರೆ. ಪ್ರಥಮ್, ಮಾಳವಿಕಾ ಸೀಕ್ರೆಟ್ ರೂಂ ಸೇರಿಕೊಂಡಿದ್ದಾರೆ.

ಉಳಿದಿದ್ದು, ಮೋಹನ್, ಕೀರ್ತಿ, ಶಾಲಿನಿ, ಭುವನ್ ಹಾಗೂ ರೇಖಾ ಅವರು ಮಾತ್ರ. ಅವರೊಂದಿಗೆ ಸುನಾಮಿ ಕಿಟ್ಟಿ ಸೇರಿದ್ದರು. ಮಂಗಳವಾರದ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಚಟುವಟಿಕೆಯೊಂದನ್ನು ನೀಡಲಾಗಿತ್ತು.

ಸದಸ್ಯರು ಗಾರ್ಡನ್ ಏರಿಯಾದಲ್ಲಿದ್ದ ವಿಶೇಷ ಫಲಕದಲ್ಲಿ ಲೈಟ್ ಬಂದ ಕೂಡಲೇ ತಮ್ಮ ಆಯ್ಕೆಯನ್ನು ಒತ್ತಬೇಕಿತ್ತು.

ಅದರಂತೆ ಎಂಟರ್ ಟೈನ್ ಮೆಂಟ್, ರೋಮ್ಯಾನ್ಸ್, ಡ್ರಾಮಾ, ಆಕ್ಷನ್ ಸೆಲೆಕ್ಟ್ ಮಾಡಿದ್ದಾರೆ ಸದಸ್ಯರು.

ಹೀಗೆ ಆಯ್ಕೆ ಮಾಡುತ್ತಿದ್ದಂತೆ, ಒಂದಿಷ್ಟು ನೃತ್ಯಗಾರರು ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರೊಂದಿಗೆ ಹಿಂದೆ ಸ್ಪರ್ಧಿಗಳಾಗಿದ್ದವರು ಎಂಟ್ರಿ ಕೊಟ್ಟಿದ್ದಾರೆ.

ಅಯ್ಯಪ್ಪ, ಶ್ರುತಿ, ನೀತು ಪ್ರತ್ಯೇಕವಾಗಿ ಮನೆಯೊಳಗೆ ಆಗಮಿಸಿದ್ದಾರೆ. ಇದರಿಂದಾಗಿ ಮನೆಯೊಳಗೆ ಸದಸ್ಯರ ಸಂಖ್ಯೆ ಮತ್ತೆ ಏರಿಕೆಯಾಗಿದೆ.

ಇನ್ನು ಸೀಕ್ರೆಟ್ ರೂಂನಲ್ಲಿರುವ ಪ್ರಥಮ್ ಹಾಗೂ ಮಾಳವಿಕಾ ಅಲ್ಲಿಂದಲೇ ಮನೆಯೊಳಗಿನ ಚಿತ್ರಣ ವೀಕ್ಷಿಸಿದ್ದಾರೆ. ಜೊತೆಯಾಗಿದ್ದರೂ, ಮಾಳವಿಕಾ ಮತ್ತು ಪ್ರಥಮ್ ನಡುವೆ ಮಾತುಕತೆ ನಡೆದಿಲ್ಲ.

ಸದಸ್ಯರೊಂದಿಗೆ ಮಾತನಾಡುತ್ತಿದ್ದ ಶ್ರುತಿ, ‘ಬಿಗ್ ಬಾಸ್’ ಬಹುದೊಡ್ಡ ವೇದಿಕೆ ಎಂದೆಲ್ಲಾ ಹೇಳಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...