alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಿಂದ ಆಶಿತಾ ಹೊರಕ್ಕೆ

‘ಬಿಗ್ ಬಾಸ್’ನಲ್ಲಿ ಮೊದಲಿಗೆ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಆಶಿತಾ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಎಲ್ಲರೂ ಸೇಫ್ ಆದ ಬಳಿಕ, ದಿವಾಕರ್ ಮತ್ತು ಆಶಿತಾ ಅವರು ಉಳಿದುಕೊಂಡಿದ್ದು, ಕೊನೆಗೆ ಆಶಿತಾ ಹೊರ ಹೋಗಿದ್ದಾರೆ.

ಶನಿವಾರದ ಸಂಚಿಕೆ ‘ವಾರದ ಕತೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಮನೆಯ ಸದಸ್ಯರೊಂದಿಗೆ ಪಂಚಾಯಿತಿ ನಡೆಸಿದ್ದಾರೆ. ‘ಹುಚ್ಚರ ಸಂತೆ’ ಟಾಸ್ಕ್ ನಲ್ಲಿ ಸದಸ್ಯರು ಹೇಗೆಲ್ಲಾ ವರ್ತಿಸಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಿದ ಸುದೀಪ್, ಚಂದನ್ ಅವರು ‘ಕೆಟ್ಟ ಮನಸು’ ಪಾತ್ರ ಮಾಡಿದ್ದನ್ನು ಪ್ರಶಂಸಿಸಿದ್ದಾರೆ. ಅನುಪಮಾ, ಶ್ರುತಿ ಮತ್ತು ಕೃಷಿ ಅವರ ಪಾತ್ರಗಳ ಬಗ್ಗೆ ಪ್ರಸ್ತಾಪಿಸಿದಾಗ ನಗುವಿನ ಅಲೆ ಮೂಡಿದೆ.

ಇನ್ನು ‘ಗಂಧದಗುಡಿ’ ಟಾಸ್ಕ್ ನಲ್ಲಿ ಕಾಡುಪ್ರಾಣಿಗಳು ಮತ್ತು ಮನುಷ್ಯರಾಗಿ ಪ್ರದರ್ಶನ ನೀಡಿದ್ದು, ಅದರಲ್ಲಿಯೂ ಸರ್ಕಸ್ ಉತ್ತಮವಾಗಿತ್ತು ಎಂದು ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ.

ಸಮೀರಾಚಾರ್ಯ ಮತ್ತು ಜಗನ್ ಅವರಿಗೆ ಮಾತಿನಲ್ಲೇ ಬೆಂಡೆತ್ತಿದ ಸುದೀಪ್, ನಿವೇದಿತಾ ಮತ್ತು ಆಶಿತಾ ಅವರಿಗೆ ತಿಳಿ ಹೇಳಿದ್ದಾರೆ. ಸಮೀರಾಚಾರ್ಯ ಅವರಿಂದ ಅಭಿಪ್ರಾಯ ಪಡೆದುಕೊಂಡು, ಮೊಂಡುತನವನ್ನು ಬಿಡಿ ಎಂದು ತಿಳಿಸಿದ್ದಾರೆ.

ಕೋಪ, ಸಿಟ್ಟು ಮಾಡಿಕೊಂಡು ಅನೇಕ ಸಂದರ್ಭದಲ್ಲಿ ರಿಯಾಜ್, ಚಂದನ್ ಮತ್ತು ಅಕುಲ್ ಅವರೊಂದಿಗೆ ಜಗನ್ ಕಿರುಚಾಡಿ ಜಗಳವಾಡಿದ್ದನ್ನು ಸುದೀಪ್ ಪ್ರಸ್ತಾಪಿಸಿ, ಕೋಪ ಕಡಿಮೆ ಮಾಡಿಕೊಳ್ಳಲು ತಿಳಿಸಿದ್ದಾರೆ.

‘ಕಾಲರ್ ಆಫ್ ದಿ ವೀಕ್’ನಲ್ಲಿ ಮಾತನಾಡಿದ ಮೊಹಮ್ಮದ್ ಕೂಡ ಇದೇ ವಿಚಾರವನ್ನು ಜಗನ್ ಬಳಿ ಪ್ರಶ್ನಿಸಿದ್ದಾರೆ. ರಿಯಾಜ್ ಅವರ ಕುರಿತಾಗಿ ನಿಮ್ಮ ಅಭಿಪ್ರಾಯ ಬದಲಾದಂತಿಲ್ಲ ಎಂದು ದಿವಾಕರ್ ಗೆ ಸುದೀಪ್ ಪ್ರಶ್ನಿಸಿದ್ದು, ಅವರು ಪ್ರತಿಕ್ರಿಯೆ ನೀಡಿ, ರಿಯಾಜ್ ಗೆ ಹೊಟ್ಟೆಕಿಚ್ಚು, ಅಸೂಯೆ ಇದೆ ಎಂದಿದ್ದಾರೆ. ದಿವಾಕರ್ ಗೆ ಬೆಸ್ಟ್ ಪರ್ ಫಾರ್ಮರ್ ಆಗಿ ಆಯ್ಕೆ ಮಾಡಿದ್ದಕ್ಕೆ ರಿಯಾಜ್ ಅಸಮಾಧಾನ ವ್ಯಕ್ತಪಡಿಸಿದ್ದರ ಬಗ್ಗೆಯೂ ಸುದೀಪ್ ಮಾತನಾಡಿ, ನೀವೇ ದಿವಾಕರ್ ಅವರಿಗೆ ಮಾತನಾಡಲು ಅಸ್ತ್ರ ಕೊಟ್ಟಿದ್ದೀರಿ. ಮಾಡಿದ ಕೆಲಸ ಮಾತನಾಡಬೇಕು ಎಂದು ತಿಳಿ ಹೇಳಿದ್ದಾರೆ.

ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಮೊದಲಿಗೆ ಅನುಪಮಾ ಸೇಫ್ ಆಗಿದ್ದು, ನಂತರದಲ್ಲಿ ಕೃಷಿ, ಚಂದನ್, ಕಾರ್ತಿಕ್, ಜಯಶ್ರೀನಿವಾಸನ್, ಶ್ರುತಿ, ಸಮೀರಾಚಾರ್ಯ, ರಿಯಾಜ್, ನಿವೇದಿತಾ ಹಾಗೂ ದಿವಾಕರ್ ಸೇಫ್ ಆಗಿದ್ದಾರೆ. ಆಶಿತಾ ಮನೆಯಿಂದ ಹೊರ ಹೋಗುವ ಮೊದಲು ಸೂಪರ್ ಅಧಿಕಾರವನ್ನು ಜಗನ್ ಗೆ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...