alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ವೇಷದಲ್ಲಿ ಮನರಂಜಿಸಿದ ಪುರುಷರು

‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಿರುವ ತೇಜಸ್ವಿನಿ ಮತ್ತು ಆಶಿತಾ ಅವರು ಮತ್ತೆ ಆಗಮಿಸಿದ್ದಾರೆ. ‘ಬಿಗ್ ಬಾಸ್’ ಪ್ರಶ್ನೆಗಳನ್ನು ಕೇಳಿದಾಗ ‘ಹೌದು’ ಎಂದು ಸದಸ್ಯರು ಉತ್ತರಿಸಬೇಕಿದೆ. ಅನುಪಮಾ ಅವರು ಅಡುಗೆ ಮಾಡುವುದನ್ನು ನಿಲ್ಲಿಸಬೇಕೆ ಎಂದು ಬಿಗ್ ಬಾಸ್ ಪ್ರಶ್ನಿಸಿದಾಗ, ಸದಸ್ಯರೆಲ್ಲಾ ಹೌದು ಎಂದು ಹೇಳಿದ್ದಾರೆ.

ಮೊದಲಿಗೆ ಮನೆಯೊಳಗೆ ತೇಜಸ್ವಿನಿ ಬಂದಾಗ ಸದಸ್ಯರೆಲ್ಲಾ ಸಂಭ್ರಮಿಸಿದ್ದಾರೆ. ಇದೇ ವೇಳೆ ಸದಸ್ಯರಿಗೆ ಫೋಟೋ ಪ್ರತಿಕೃತಿಗೆ ಕಿರೀಟವನ್ನು ಹಿಡಿದಿಟ್ಟುಕೊಳ್ಳುವ ಸವಾಲ್ ನೀಡಲಾಲಾಗಿದ್ದು, ಅದರಲ್ಲಿ ಮೊದಲಿಗೆ ಅನುಪಮಾ ಹೊರಗೆ ಬಂದಿದ್ದಾರೆ. ನಂತರದಲ್ಲಿ ಒಬ್ಬೊಬ್ಬರೇ ಹೊರ ಬಂದು, ಶ್ರುತಿ ಕೊನೆಯವರೆಗೂ ಉಳಿದು ವಿಜೇತರಾಗಿದ್ದಾರೆ.

ನಂತರದಲ್ಲಿ ನಿವೇದಿತಾ ಅವರಿಗೆ ಕತೆ ಹೇಳುವಂತೆ ಸೂಚನೆ ನೀಡಲಾಗಿದ್ದು, ಅವರು ಸಮೀರ್ ಬಳಿ ಕತೆ ಹೇಳಿದ್ದು ತಮಾಷೆಯಾಗಿತ್ತು.

ದಿವಾಕರ್, ಚಂದನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ‘ಬಿಗ್ ಬಾಸ್’ 250 ಪಾಯಿಂಟ್ ಗಳನ್ನು ಕಟ್ ಮಾಡಿ, ಮನೆಯೊಳಗಿದ್ದ ಸಿಹಿ ತಿನಿಸುಗಳನ್ನು ಹಿಂಪಡೆಯಲಾಗಿದೆ. ಇದಕ್ಕೆ ಅನುಪಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೇಜಸ್ವಿನಿ ಮನೆಯಿಂದ ಹೊರಗೆ ಹೋದ ನಂತರದಲ್ಲಿ ಮನೆಯೊಳಗೆ ಆಶಿತಾ ಎಂಟ್ರಿ ಕೊಟ್ಟಿದ್ದಾರೆ. ಆಶಿತಾ ಅವರೊಂದಿಗೆ ಮಾತನಾಡಿದ ಸದಸ್ಯರು ಖುಷಿಯಾಗಿದ್ದಾರೆ.

ಆಶಿತಾ ಅವರು ಬಂದಾಗ ವಿಶೇಷ ಸವಾಲ್ ನಲ್ಲಿ ಚೆಂಡುಗಳನ್ನು ಸಂಗ್ರಹಿಸಿಬೇಕಿತ್ತು. ಓಡಾಡುತ್ತಾ ಚೆಂಡುಗಳನ್ನು ಸಂಗ್ರಹಿಸಲು ಎಲ್ಲರೂ ಪ್ರಯತ್ನಿಸಿದ್ದು, ತಮಾಷೆಯಾಗಿತ್ತು. ನಿಯಮಗಳನ್ನು ಉಲ್ಲಂಘಿಸದಂತೆ ಶ್ರುತಿ ಅವರಿಗೆ ಮಾತ್ರ ಅನುಪಮಾ ಸೂಚನೆ ನೀಡಿದ್ದನ್ನು ಗಮನಿಸಿದ್ದಾಗಿ ಚಂದನ್ ಹೇಳಿದ್ದಾರೆ.

ಮನೆಯ ಸದಸ್ಯರು ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ಬೆಡ್ ರೂಂ ಬಳಸಲು ನಿರ್ಬಂಧ ಹೇರಲಾಗಿದೆ. ಪುರುಷ ಸದಸ್ಯರೆಲ್ಲಾ ಮಹಿಳೆಯರ ರೀತಿ ವೇಷ ಧರಿಸಿ ಮನರಂಜಿಸಿದ ಸನ್ನಿವೇಶ ಹಾಸ್ಯಮಯವಾಗಿತ್ತು. ಚಂದನ್, ದಿವಾಕರ್, ಸಮೀರ್ ಸೀರೆಯುಟ್ಟು ಡ್ಯಾನ್ಸ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...