alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೀರಿಟ್ಟ ‘ಬಿಗ್ ಬಾಸ್’ ಕ್ಯಾಪ್ಟನ್ ಅನುಪಮಾ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರು ಕ್ಯಾಪ್ಟನ್ ಮಾತನ್ನೇ ಕೇಳುತ್ತಿಲ್ಲ. ಮೊದಲ ವಾರ ಕ್ಯಾಪ್ಟನ್ ಆಗಿರುವ ಅನುಪಮಾ ಅವರು ಕ್ಯಾಪ್ಟನ್ ಸಹವಾಸವೇ ಸಾಕು ಎನ್ನುವಂತಾಗಿದ್ದಾರೆ.

ಮನೆಯಲ್ಲಿ ಸದಸ್ಯರು ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ‘ಬಿಗ್ ಬಾಸ್’ ತರಾಟೆಗೆ ತೆಗೆದುಕೊಂಡಿದ್ದಾರೆ. ಸದಸ್ಯರು ಸವಾಲಿನ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಆ ನಂತರದಲ್ಲಿ ಸದಸ್ಯರೆಲ್ಲರಿಗೆ ಸಲಹೆ ನೀಡಿದ ಸಿಹಿಕಹಿ ಚಂದ್ರು, ಎಲ್ಲರೂ ನಿಯಮಗಳನ್ನು ಪಾಲಿಸೋಣ. ಶಿಸ್ತು ರೂಢಿಸಿಕೊಳ್ಳೋಣ ಎಂದು ತಿಳಿಸಿದ್ದಾರೆ.

ಭುಜಬಲದ ಸವಾಲ್ ನಲ್ಲಿ ಸದಸ್ಯರೊಬ್ಬರನ್ನು ಟೈಯರ್ ಮೇಲೆ ಕೂರಿಸಿ ಎದುರಾಳಿ ತಂಡ ಸೂಚಿಸಿದ ವೀಕ್ ಆಗಿರುವ ಸದಸ್ಯರು ಎಳೆಯಬೇಕಿತ್ತು. ಈ ವೇಳೆ ಆಶಿತಾ ಹಾಗೂ ನಿವೇದಿತಾ ಕೈಗೆ ಗಾಯಗಳಾಗಿವೆ. ‘ಬಿಗ್ ಬಾಸ್’ ಸದಸ್ಯರ ಕಷ್ಟ ಮನಗಂಡು ವಿಶೇಷ ಅವಕಾಶ ನೀಡಿದ್ದು, ಅದರಂತೆ ಜೆ.ಕೆ. ಮತ್ತು ಸಮೀರಾಚಾರ್ಯ ಟೈಯರ್ ಎಳೆದಿದ್ದಾರೆ. ಸಿಹಿಕಹಿ ಚಂದ್ರು ನೇತೃತ್ವದ ತಂಡ ಸವಾಲ್ ನಲ್ಲಿ ಜಯಗಳಿಸಿದೆ.

ಸದಸ್ಯರು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಅನುಪಮಾ ಕಣ್ಣೀರಿಟ್ಟಿದ್ದು, ಅವರನ್ನು ಚಂದ್ರು ಸಮಾಧಾನ ಪಡಿಸಿದ್ದಾರೆ. ತೇಜಸ್ವಿನಿ ನಾವೆಲ್ಲರೂ ಕ್ಯಾಪ್ಟನ್ ಮಾತು ಕೇಳಬೇಕೆಂದು ಸಲಹೆ ನೀಡಿದ್ದಾರೆ. ಇನ್ನು ಗ್ಯಾಸ್ ಬಂದ್ ಮಾಡಿದ್ದರಿಂದ ಐರನ್ ಬಾಕ್ಸ್ ಬಳಸಿ ಚಪಾತಿ ಮಾಡಿಕೊಂಡ ಸದಸ್ಯರು ಜಾಣ್ಮೆ ತೋರಿದ್ದಾರೆ. ಸಮೀರಾಚಾರ್ಯರ ಇದ್ದಿಲು ಒಲೆ ಬಳಸಿ ಬಿಸಿಬೇಳೆ ಬಾತ್ ಮಾಡಲಾಗಿದ್ದು, ಸದಸ್ಯರ ಊಟದ ಸಮಸ್ಯೆ ಬಗೆಹರಿದಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...