alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಸವಾಲ್ ನಲ್ಲಿ ಗೆದ್ದ ಚಂದ್ರು ಟೀಂ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರು ನಿಧಾನವಾಗಿ ಹೊಂದಿಕೊಳ್ಳತೊಡಗಿದ್ದಾರೆ. ಅದೇ ರೀತಿ ತಮ್ಮ ಅಭಿಪ್ರಾಯ, ಅಸಮಾಧಾನಗಳನ್ನು ಹೊರಹಾಕಿದ್ದಾರೆ.

ಮೊದಲನೇ ದಿನದಿಂದಲೂ ಟೇಬಲ್ ಮೇಲೆ ಕುಳಿತುಕೊಳ್ಳುತ್ತಿರುವ ಜಯಶ್ರೀನಿವಾಸನ್ ಅವರಿಗೆ ಅಲ್ಲಿ ಕುಳಿತುಕೊಳ್ಳಬೇಡಿ ಎಂದು ಆಶಿತಾ ಹೇಳಿದ್ದಾರೆ. ಅದಕ್ಕೆ ಒಪ್ಪದ ಶ್ರೀನಿವಾಸನ್ ಇಲ್ಲಿ ಕುಳಿತರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಅಡುಗೆಯನ್ನಿಡುತ್ತೇವೆ. ನಿಮ್ಮ ಕಾಲನ್ನು ಇಡಬೇಡಿ ಎಂದು ಆಶಿತಾ ಹೇಳಿದ್ದು, ಕಾಲು ಕೂಡ ಒಂದು ಅಂಗವೇ ಎಂದು ಶ್ರೀನಿವಾಸನ್ ಹೇಳಿದ್ದಾರೆ.

ಅಲ್ಲಿಂದ ಆಶಿತಾ ನಿರ್ಗಮಿಸಿದ ಬಳಿಕ ಕ್ಯಾಪ್ಟನ್ ಅನುಪಮಾ ಇದೇ ವಿಚಾರವಾಗಿ ಜಯಶ್ರೀನಿವಾಸನ್ ಬಳಿ ಅಸಮಾಧಾನದ ಮಾತುಗಳನ್ನಾಡಿ, ನೀವು ಅಲ್ಲಿ ಕೂರಬೇಡಿ ಎಂದರೂ ಕೇಳುತ್ತಿಲ್ಲ ಎಂದಿದ್ದಾರೆ. ಅದಕ್ಕೆ ಶ್ರೀನಿವಾಸನ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟಾಸ್ಕ್ ನಲ್ಲಿ ತಮಗೆ ಬಂದ ಪದಗಳ ಕುರಿತಾಗಿ ಸದಸ್ಯರು ಅಭಿಪ್ರಾಯವನ್ನು ತಿಳಿಸಬೇಕಿತ್ತು. ಅದರಂತೆ ಸದಸ್ಯರೆಲ್ಲಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮೀರಾಚಾರ್ಯ ‘ಶತ್ರುಗಳು’ ಕುರಿತಾಗಿ ಮಾತನಾಡುವಾಗ, ‘ಬಿಗ್ ಬಾಸ್’ ಮನೆಯಲ್ಲಿ ಎಲ್ಲರೂ ಒಂದಾಗಿರಬೇಕು. ವಿವಾದಗಳ ಬದಲಿಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಬೇಕು ಎಂದಾಗ ಕೆಲವರು ಆಕ್ಷೇಪಿಸಿದ್ದಾರೆ. ಶತ್ರುಗಳ ವಿಚಾರವಾಗಿ ಮಾತನಾಡದೇ ಬೇರೆ ಹೇಳುತ್ತಿದ್ದೀರಿ ಎಂದು ಹೇಳಿದ್ದಾರೆ.

ಹೀಗೆ ಹಲವು ಸದಸ್ಯರು ಅಭಿಪ್ರಾಯ ಹೇಳಿದಾಗ, ಕೊಟ್ಟ ವಿಷಯದ ಬದಲಿಗೆ ವಿಷಯಾಂತರವಾಯ್ತು ಎಂದು ಅನೇಕರು ಹೇಳಿದ್ದಾರೆ. ಗುಟ್ಟೊಂದು ಹೇಳುವೆ ಮೊದಲ ಸವಾಲ್ ನಲ್ಲಿ ಸಿಹಿಕಹಿ ಚಂದ್ರು ಟೀಂ ಗೆದ್ದಿದೆ ಎಂದು ಅನುಪಮಾ ಕ್ಯಾಮೆರಾ ಎದುರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...