alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’: ಸವಾಲ್ ಗೆಲ್ಲಲು ತಪ್ಪು ಮಾಡಿದ್ರಾ ರಿಯಾಜ್…?

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ನೀಡಲಾಗಿದ್ದ ಲಕ್ಸುರಿ ಬಜೆಟ್ ಟಾಸ್ಕ್ ‘ಕಾಲಾಯ ತಸ್ಮೈ ನಮಃ’ ಮುಕ್ತಾಯವಾಗಿದೆ. ಸದಸ್ಯರೆಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾಗಿ ‘ಬಿಗ್ ಬಾಸ್’ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಕನ್ ಫೆಷನ್ ರೂಂ ನಲ್ಲೇ 3 ಸಲ ನಿದ್ದೆ ಮಾಡಿದ್ದಕ್ಕೆ ಹಾಗೂ ಸದಸ್ಯರು ನಿಯಮಗಳನ್ನು ಪಾಲಿಸದ ಕಾರಣ, ನೀಡಲಾಗಿದ್ದ 5000 ಲಕ್ಸುರಿ ಬಜೆಟ್ ಪಾಯಿಂಟ್ ಗಳಲ್ಲಿ 2500 ಪಾಯಿಂಟ್ಸ್ ಕಟ್ ಮಾಡಲಾಗಿದೆ.

ಕೊನೆಯ ಸವಾಲ್ ನಲ್ಲಿ ತಂಡದ ನಾಯಕರಾಗಿದ್ದ ಅನುಪಮಾ ಮತ್ತು ಸಮೀರಾಚಾರ್ಯ ಅವರು ಕುರ್ಚಿಯಲ್ಲಿ ಕುಳಿತುಕೊಂಡಿದ್ದು, ಅವರನ್ನು ಎದುರಾಳಿ ತಂಡದ ಸದಸ್ಯರು ಕುರ್ಚಿಯಿಂದ ಎಬ್ಬಿಸಬೇಕಿತ್ತು. ಅನುಪಮಾ ಮತ್ತು ಸಮೀರಾಚಾರ್ಯ ಅವರಿಗೆ ವಿವಿಧ ರೀತಿಯಲ್ಲಿ ಎದುರಾಳಿ ತಂಡದ ಸದಸ್ಯರು ಎಬ್ಬಿಸಲು ಪ್ರಯತ್ನ ನಡೆಸಿದ್ದು, ಹಿಂಸೆ ಅನುಭವಿಸಿದರೂ, ಇಬ್ಬರೂ ಏಳದೇ ಕುರ್ಚಿಯಲ್ಲಿಯೇ ಕುಳಿತಿದ್ದಾರೆ. ಸದಸ್ಯರು ನಿಗದಿಪಡಿಸಿದ್ದ ಸಮಯ ಮೀರಿದ್ದರಿಂದ ಸಮೀರಾಚಾರ್ಯ ವಿಜೇತರಾಗಿದ್ದಾರೆ. ಎಬ್ಬಿಸುವ ಪ್ರಯತ್ನದಲ್ಲಿ ಸಮೀರಾಚಾರ್ಯ ಕುಳಿತಿದ್ದ ಕುರ್ಚಿಗೆ ರಿಯಾಜ್ ಕಾಲಿನಿಂದ ಒದ್ದು ಬೀಳಿಸಿದ್ದಾರೆ. ಆದರೂ ಅವರು ಏಳದೇ ಕುಳಿತಿದ್ದರು.

ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಈ ವಾರ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಯಾಗಿ ನಿವೇದಿತಾ ಅವರನ್ನು ಆಯ್ಕೆ ಮಾಡಿದ್ದು, ಅನುಪಮಾ ಅವರಿಗೆ ಕಳಪೆ ಬೋರ್ಡ್ ನೀಡಿದ್ದಾರೆ. ಇದಕ್ಕೆ ಅನುಪಮಾ ಬೇಸರಗೊಂಡು ಅತ್ತಿದ್ದಾರೆ. ಅವರಿಗೆ ಕಾರ್ತಿಕ್ ಮತ್ತು ಚಂದನ್ ಸಮಾಧಾನಪಡಿಸಿದ್ದಾರೆ. ಚಂದನ್ ಇದೇ ವಿಷಯವಾಗಿ ಸಮೀರ್ ಬಳಿ ಮಾತನಾಡಿ, ನಿಮ್ಮ ನಿರ್ಧಾರ ಸರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸೀಕ್ರೆಟ್ ರೂಂನಲ್ಲಿದ್ದ ದಿವಾಕರ್ ಮಧ್ಯರಾತ್ರಿ ಮನೆಯೊಳಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ. ಈ ವಾರ ಅನುಪಮಾ, ಕಾರ್ತಿಕ್, ಕೃಷಿ, ನಿವೇದಿತಾ, ಶ್ರುತಿ, ರಿಯಾಜ್ ಹಾಗೂ ಶ್ರುತಿ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...