alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಫಿಯಾ ಹಯಾತ್ ಈ ಫೋಟೋ ಹೆಂಗಿದೆ ಗೊತ್ತಾ?

ಕೆಲ ನಟೀಮಣಿಯರು ಪಬ್ಲಿಸಿಟಿಗಾಗಿ ಏನೇನೆಲ್ಲಾ ಸರ್ಕಸ್ ಮಾಡುತ್ತಾರೆ ಎಂತಾ ಗೊತ್ತೇ ಇದೆ. ಬಿಗ್ ಬಾಸ್ 7ರಲ್ಲಿ ಸ್ಪರ್ಧಿಯಾಗಿದ್ದ ಸೆಕ್ಸಿ ಕ್ವೀನ್ ಸೋಫಿಯಾ ಹಯಾತ್ ಕೂಡ ಈ ವಿಷಯದಲ್ಲಿ ಕಡಿಮೆಯೇನಿಲ್ಲ ಎಂದು ಈಗಾಗಲೇ ಸಾಬೀತಾಗಿದೆ.

ದೇಹದ ಬಿಚ್ಚು ಪ್ರದರ್ಶನದಿಂದಲೇ ಪ್ರಸಿದ್ಧಳಾದ ಈಕೆ ಸರಿಸುಮಾರು ಆರು ವರ್ಷದ ಹಿಂದೆಯೇ ಪಡ್ಡೆಹುಡುಗರ ಎದೆಯೊಳಗೆ ಕಚಗುಳಿಯಿಟ್ಟಿದ್ದಳು. 2012 ರಲ್ಲೇ ಈ ಬಳುಕುವ ಬಳ್ಳಿ ವಾಗ್ ಇಟಾಲಿಯಾದಿಂದ ಕರ್ವಿ ಐಕಾನ್ ಎಂಬ ಅಭಿದಾನಕ್ಕೆ ಪಾತ್ರಳಾಗಿದ್ದಳು.

ಮುಂದಿನ ವರ್ಷವೇ ಫಾರ್ ಹಿಮ್ ಮ್ಯಾಗಝೀನ್ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಸೆಕ್ಸಿ ಮಹಿಳೆಯರಲ್ಲಿ 81ನೇ ರ್ಯಾಂಕ್ ಪಡೆದಿದ್ದಳು. ಅದೇ ಅಧಾರದ ಮೇಲೆ ಬಿಗ್ ಬಾಸ್ ರಿಯಾಲಿಟಿ ಶೋಗೂ ಎಂಟ್ರಿ ಪಡೆದ ಈ ಬಿಂದಾಸ್ ಹುಡುಗಿ ಮುಂದೆ ಕಾಂಟ್ರವರ್ಸಿ ಕ್ವೀನ್ ಅಂತಲೇ ಪ್ರಸಿದ್ಧಿಯಾಗಿದ್ದು ಇತಿಹಾಸ.

ಜನ ಇನ್ನೇನು ಈಕೆಯನ್ನು ಮರೆತೇ ಬಿಟ್ಟರು ಅನ್ನುವಷ್ಟರಲ್ಲಿ ಕಾರಣವೇ ಇಲ್ಲದೆ ತನ್ನ ಮೈಮಾಟ ಪ್ರದರ್ಶಿಸಿ ಬಿಡುತ್ತಾಳೆ ಈಕೆ. ಈಗ ಮತ್ತೆ ಆಕೆ ಸುದ್ದಿಯಾಗಿದ್ದಾಳೆ. ತನ್ನ ಮಾದಕ ದೇಹವನ್ನು ಕೇವಲ ಒಂದು ಟವೆಲ್ ನಿಂದ ಮುಚ್ಚಿಕೊಂಡಿರುವ ಫೋಟೋವನ್ನು ಆಕೆ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವುದು ಇದೀಗ ವೈರಲ್ ಆಗಿದೆ.

ಒತ್ತಡ ನಿವಾರಣೆ, ತೂಕ ಇಳಿಕೆ, ಕೋಶ ಪುನರುತ್ಪಾದನೆ, ರೋಗನಿರೋಧಕ ಶಕ್ತಿ ವೃದ್ಧಿ ಇತ್ಯಾದಿಗಳಿಗೆ ಹಬೆ ಸ್ನಾನ ಬಹಳ ಉಪಯುಕ್ತ ಎಂದು ವಿವರಣೆ ಕೂಡ ಕೊಟ್ಟಿದ್ದಾಳೆ. ವಿವರಣೆ ಯಾರಿಗ್ರೀ ಬೇಕು, ಫೋಟೋ ಅಷ್ಟೇ ಸಾಕು ಅಂತಿದ್ದಾರಂತೆ ಪಡ್ಡೆ ಹುಡುಗರು.

View this post on Instagram

Ready

A post shared by Sofia Hayat (@sofiahayat) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...