alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್ ಸೀಸನ್-6’ ಸ್ಪರ್ಧಿಗಳು ಯಾರು…? ಇಲ್ಲಿದೆ ಮಾಹಿತಿ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6 ಗೆ ವೇದಿಕೆ ಸಜ್ಜಾಗಿದ್ದು, ಸೀಸನ್-6 ರಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಹೌದು, ಬಿಗ್ ಬಾಸ್ ಆರನೇ ಆವೃತ್ತಿಯ ಸ್ಪರ್ಧಿಗಳ ಪಟ್ಟಿ ಬಹಿರಂಗವಾಗಿದೆ.

ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ನಟಿಯರಾದ ಸುಮನ್ ರಂಗನಾಥ್, ಭಾವನಾ, ರ್ಯಾಪರ್ ಚಂದನ್ ಶೆಟ್ಟಿಯ `ಟಕೀಲಾ’ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಶಾಲಿನಿ, ನಿರೂಪಕಿ ಹೇಮಲತಾ, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್, ಸರಿಗಮಪ ಚೆನ್ನಪ್ಪ, ಇಂದ್ರಜಿತ್ ಲಂಕೇಶ್, ನಟ ನವೀನ್ ಕೃಷ್ಣ ಕೂಡ ಈ ಬಾರಿ ಬಿಗ್‍ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಕಿರಿಕ್ ಪಾರ್ಟಿ ಚಂದನ್ ಆಚಾರ್, ನಟಿಯರಾದ ಮಯೂರಿ, ನೇಹಾ ಶೆಟ್ಟಿ, ತಿಥಿ ಸಿನಿಮಾ ಖ್ಯಾತಿಯ ಅಭಿ, ಡಾ. ಶಂಕರೇಗೌಡ, ಪ್ರೇಮಕುಮಾರಿ ಇವರ ಹೆಸರು ಕೂಡ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ನಟ ಕಿಚ್ಚ ಸುದೀಪ್, ಬಿಗ್‍ಬಾಸ್ ಕಾರ್ಯಕ್ರಮಕ್ಕಾಗಿ ಈಗಾಗಲೇ ಮೊದಲ ಪ್ರೋಮೋ ಶೂಟ್ ಕೂಡ ಮುಗಿಸಿದ್ದು, ಇನ್ನೇನು ಬಿಗ್‍ಬಾಸ್ ಸೀಸನ್ 6ಗೆ ಕ್ಷಣಗಣನೆ ಆರಂಭವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...