alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಿಂದ ಹೊರ ನಡೆದ್ರೆ ಶ್ರೀಶಾಂತ್ ಕಟ್ಟಬೇಕಾಗುತ್ತೆ ಭಾರೀ ದಂಡ

ಬಿಗ್ ಬಾಸ್ 12 ಸೀಸನ್ ಎರಡನೇ ದಿನಕ್ಕೆ ಶ್ರೀಶಾಂತ್ ಷೋ ನಿಂದ ಹೊರನಡೆಯುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಸೋಮಿಖಾನ್ ಜೊತೆ ನಡೆದ ಜಗಳದಿಂದಾಗಿ ಶ್ರೀಶಾಂತ್ ಬಿಗ್ ಹೌಸ್ ನಲ್ಲಿ ಕೋಪ ಮಾಡಿಕೊಂಡು ಕಿರುಚಾಡಿದ್ದರು. ಅಷ್ಟೇ ಅಲ್ಲ ಟಾಸ್ಕ್ ಕೂಡ ಕಂಪ್ಲೀಟ್ ಮಾಡದೆ, ಮನೆಯಿಂದ ಹೊರ ನಡೆಯೋಕೆ ನಿಂತುಬಿಟ್ಟಿದ್ದರು.

ಒಂದು ವೇಳೆ ಶ್ರೀಶಾಂತ್ ಈ ರಿಯಾಲಿಟಿ ಷೋದಿಂದ ತಾವಾಗಿಯೇ ಹೊರಬಂದರೆ ಭಾರೀ ಮೊತ್ತದ ದಂಡ ಕಟ್ಟಬೇಕಾಗುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಈ ರಿಯಾಲಿಟಿ ಷೋ ನ ಸೆಲೆಬ್ರಿಟಿ ಕಂಟೆಸ್ಟೆಂಟ್ ಆಗಿ ಶ್ರೀಶಾಂತ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಇದಕ್ಕಾಗಿ ಕಲರ್ಸ್ ವಾಹಿನಿಯ ಜೊತೆ ಒಪ್ಪಂದ ಮಾಡಿಕೊಂಡಿರುವ ಶ್ರೀಶಾಂತ್ ದೊಡ್ಡ ಅಮೌಂಟ್ ಕೂಡ ಷೋ ಗಾಗಿ ಪಡೆದಿದ್ದಾರೆ. ಒಂದು ವೇಳೆ ಶ್ರೀಶಾಂತ್ ಷೋನಿಂದ ಹೊರನಡೆದ್ರೆ ವಾಹಿನಿಗೆ 50 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿ ಬರಬಹುದು ಅಂತ ಹೇಳಲಾಗ್ತಿದೆ.

ಈ ಹಿಂದೆ ಶ್ರೀಶಾಂತ್ ಝಲಕ್ ದಿಖ್ಲಾಜಾ ಡ್ಯಾನ್ಸಿಂಗ್ ಷೋ ಕೂಡ ಮಧ್ಯದಲ್ಲೇ ಬಿಟ್ಟು ಹೊರನಡೆದಿದ್ದರು. ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಶ್ರೀಶಾಂತ್ ಭಾಗಿಯಾದ ಆರೋಪ ಬಹಿರಂಗವಾದ ಹಿನ್ನಲೆಯಲ್ಲಿ ಅವರಿಗೆ ಜೀವಮಾನದಲ್ಲಿ ಕ್ರಿಕೆಟ್ ಆಡದಂತೆ ನಿಷೇಧ ಹೇರಲಾಗಿತ್ತು. ಹಾಗಾಗಿ ಶ್ರೀಶಾಂತ್ ರಿಯಾಲಿಟಿ ಷೋನಿಂದ ಹೊರನಡೆದಿದ್ದರು. ಈಗ ಮತ್ತೆ ಅವರು ಬಿಗ್ ಬಾಸ್ ರಿಯಾಲಿಟಿ ಷೋ ನಿಂದಲೂ ಹೊರಬರುವ ಮಾತನ್ನಾಡ್ತಿರೋದು ಅವರಿಗೆ ಇನ್ನಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...