alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಲ್ಲಿ ದೀಪಿಕಾ ಸಂಭಾವನೆ ಎಷ್ಟು ಗೊತ್ತಾ…?

ಹಿಂದಿಯ ಬಹುದೊಡ್ಡ ಟಿ.ವಿ. ಶೋ ಬಿಗ್ ಬಾಸ್ ನ 12ನೇ ಆವೃತ್ತಿಯಲ್ಲಿ ಟಿ.ವಿ.ಯ ಜನಪ್ರಿಯ ನಟಿ ದೀಪಿಕಾ ಕಾಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಆಕೆ, ತನಗೆ ಕಳೆದ ವರ್ಷದ ರನ್ನರ್ ಹೀನಾ ಖಾನ್ ಗೆ ನೀಡಿದ ಸಂಭಾವನೆಯ ದುಪ್ಪಟ್ಟು ಸಂಭಾವನೆ ಆಫರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಅನೇಕ ಬಾರಿ ಬಿಗ್ ಬಾಸ್ ನಿಂದ ಆಫರ್ ಬಂದಿದ್ದಾಗಲೂ ಆಕೆ ನಿರಾಕರಿಸಿದ್ದರು. ಆದರೆ ಈ ಬಾರಿ ಆಕೆಯ ಎಲ್ಲಾ ಡಿಮ್ಯಾಂಡ್ ಗಳಿಗೂ ಅಸ್ತು ಎಂದಿರುವ ಕಾರ್ಯಕ್ರಮದ ಪ್ರಾಯೋಜಕರು ಶತಾಯಗತಾಯ ಆಕೆಯನ್ನು ಒಪ್ಪಿಸಿಯೇ ಬಿಟ್ಟಿದ್ದಾರೆ. ಈ ಬಾರಿ ನಿರಾಕರಿಸಲು ಯಾವುದೇ ಕಾರಣಗಳಿಲ್ಲ ಎಂದು ಆಕೆಯೇ ತಿಳಿಸಿದ್ದಾರೆ.

‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೇ’ ಸೀರಿಯಲ್ ನಲ್ಲಿ ಅಕ್ಷರಾಳ ಪಾತ್ರ ನಿರ್ವಹಿಸಿದ್ದ ಹೀನಾ ಖಾನ್, ಕಳೆದ ವರ್ಷ ವಾರಕ್ಕೆ 8 ರಿಂದ 9 ಲಕ್ಷ ಸಂಭಾವನೆ ಗಳಿಸಿದ್ದರು. ಇದರ ದುಪ್ಪಟ್ಟು ಅಂದರೆ 16 ರಿಂದ 18 ಲಕ್ಷ ರೂ. ದೀಪಿಕಾ ಸಂಭಾವನೆ ಇರಬಹುದೆಂದು ಭಾವಿಸಲಾಗಿದೆ. ಇನ್ನು ಈ ಬಾರಿ ವಿಚಿತ್ರ ಜೋಡಿ ಎಂಬ ಥೀಮ್ ನೊಂದಿಗೆ ಬಿಗ್ ಬಾಸ್ ರಿಯಾಲಿಟಿ ಶೋ ರಂಗೇರಲಿದ್ದು, ಸ್ಪರ್ಧಿಗಳು ತಮ್ಮ ಸಂಗಾತಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಕಳೆದ ವರ್ಷವಷ್ಟೇ ವಿವಾಹ ಬಂಧನಕ್ಕೊಳಗಾಗಿರುವ ದೀಪಿಕಾ ತನ್ನ ಪತಿ ಶೋಯೆಬ್ ಇಬ್ರಾಹಿಂ ಜೊತೆ ‘ಬಿಗ್ ಬಾಸ್’ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...