alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಗಿದೆ ಬಿಗ್ ಬಾಸ್ ಆಡಿಷನ್: ಜೋಡಿಗಳ ಜೊತೆ ನೀವೂ ಸಿದ್ಧರಾಗಿ

ಬಿಗ್ ಬಾಸ್, ಕಲರ್ ಚಾನೆಲ್ ನ ಅತಿ ಹೆಚ್ಚು ಟಿ ಆರ್ ಪಿ ಕಾರ್ಯಕ್ರಮ. ಬಿಗ್ ಬಾಸ್ ಆವೃತ್ತಿ 11 ಮುಗಿದು ಕೆಲವೇ ತಿಂಗಳಾಗಿದೆ. ಈಗ ಬಿಗ್ ಬಾಸ್ 12ನೇ ಆವೃತ್ತಿಗೆ ತಯಾರಿ ಜೋರಾಗಿ ನಡೆದಿದೆ. ಕಲರ್ಸ್ ಚಾನೆಲ್ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಬಿಗ್ ಬಾಸ್ -12 ರಲ್ಲಿ ಪಾಲ್ಗೊಳ್ಳಲು ನಿಮಗೂ ಸುವರ್ಣಾವಕಾಶವಿದೆ. ಈಗಾಗಲೇ ಆಡಿಷನ್ ಶುರುವಾಗಿದೆ. ಬಿಗ್ ಬಾಸ್ 12 ಶೀಘ್ರದಲ್ಲಿಯೇ ಬರಲಿದೆ. ರಿಯಾಲಿಟಿ ಶೋ ಸಂಗಾತಿಗಳ ಹುಡುಕಾಟದಲ್ಲಿದೆ ಎಂದು ಕಲರ್ಸ್ ಅಧಿಕೃತ ಟ್ವೀಟರ್ ನಲ್ಲಿ ಟ್ವಿಟ್ ಮಾಡಲಾಗಿದೆ.

ಅತಿ ಹೆಚ್ಚು ಜನಾಕರ್ಷಕ ರಿಯಾಲಿಟಿ ಶೋದಲ್ಲಿ ಪ್ರತಿ ವರ್ಷವೂ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆ. ಪ್ರೇಕ್ಷಕರನ್ನು ಸೆಳೆಯಲು ಹೊಸ ಹೊಸ ಟಾಸ್ಕ್ ಗಳನ್ನು ತರಲಾಗುತ್ತದೆ. ಈ ಬಾರಿ ಬಿಗ್ ಬಾಸ್ ಜೋಡಿಗಳ ಶೋ ಆಗಲಿದೆ ಎನ್ನಲಾಗ್ತಿದೆ.

ಬಿಗ್ ಬಾಸ್ ಆರಂಭದಿಂದ ಈವರೆಗೆ ಶೋವನ್ನು ಬಾಲಿವುಡ್ ಬಾಯ್ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದಾರೆ. ಮುಂದಿನ ಸೀಜನ್ ನಿರೂಪಣೆ ಕೂಡ ಸಲ್ಮಾನ್ ಮಾಡಲಿದ್ದಾರೆ. ಈಗಿನಿಂದಲೇ ಬಿಗ್ ಬಾಸ್ ಜ್ವರ ಶುರುವಾಗ್ತಿದ್ದು, ಯಾರ್ಯಾರು ಬಿಗ್ ಬಾಸ್ ಮನೆ ಸೇರಲಿದ್ದಾರೆಂಬ ಕುತೂಹಲ ಪ್ರೇಕ್ಷಕರನ್ನು ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...