alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್ ಕೊಟ್ಟ ‘ಪದ್ಮಾವತಿ’ ಚಿತ್ರತಂಡ

ನವದೆಹಲಿ: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರಕ್ಕೆ ಆರಂಭದಿಂದಲೂ ಅಡ್ಡಿ, ಆತಂಕ ಎದುರಾಗಿದೆ. ವಿವಾದಗಳಿಂದಲೂ ಚಿತ್ರ ಮುಕ್ತವಾಗಿಲ್ಲ. ಹೀಗಿರುವಾಗಲೇ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಚಿತ್ರ ತಂಡ ನೀಡಿದೆ.

ಡಿಸೆಂಬರ್ 1 ರಂದು ರಿಲೀಸ್ ಆಗಬೇಕಿದ್ದ ‘ಪದ್ಮಾವತಿ’ ಬಿಡುಗಡೆಯಾಗುವುದಿಲ್ಲ. ಭಾರೀ ವಿವಾದ, ಪ್ರತಿಭಟನೆಗಳ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಪದ್ಮಾವತಿ ಬಿಡುಗಡೆಗೆ ಕರ್ಣಿ ಸೇನಾ, ರಾಜಸ್ತಾನ ಬಿ.ಜೆ.ಪಿ. ಘಟಕ, ಕೆಲವು ಕಾಂಗ್ರೆಸ್ ಶಾಸಕರು ಸೇರಿ ಅನೇಕರಿಂದ ವಿರೋಧ ವ್ಯಕ್ತವಾಗಿದೆ.

ಸೆನ್ಸಾರ್ ಪ್ರಮಾಣ ಪತ್ರ ಇಲ್ಲದೆಯೇ ಕೆಲವರಿಗೆ ಚಿತ್ರವನ್ನು ತೋರಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಛೀಮಾರಿ ಹಾಕಿದೆ. ಚಿತ್ರದ ಕತೆ ಕಾಲ್ಪನಿಕವೇ ಅಥವಾ ಇತಿಹಾಸ ಆಧಾರಿತವೇ ಎಂಬುದರ ಬಗ್ಗೆ ಅರ್ಜಿಯಲ್ಲಿ ಮಾಹಿತಿ ನೀಡದ ಕಾರಣ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸದೇ ವಾಪಸ್ ಕಳಿಸಿತ್ತು. ಡಿಸೆಂಬರ್ 1 ರೊಳಗೆ ಇದು ಬಗೆಹರಿಯುವ ಸಾಧ್ಯತೆ ಇಲ್ಲ.

ಅಲ್ಲದೇ ವಿವಾದ ಕೂಡ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ಕಾರಣದಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಯಾವ ದಿನಾಂಕವೆಂದು ತಿಳಿಸಿಲ್ಲವಾದರೂ, ಗುಜರಾತ್ ಚುನಾವಣೆ ಮುಗಿದ ಬಳಿಕ ಇಲ್ಲವೇ ಜನವರಿಯಲ್ಲಿ ‘ಪದ್ಮಾವತಿ’ ತೆರೆಗೆ ಬರಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...