alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ದಾಖಲೆ ಮುರಿದ ಮಲೆಯಾಳಂ ಚಿತ್ರ

ಮಲೆಯಾಳಂ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡ ಕಯಮ್ ಕುಲಂ ಕೋಚುನ್ನಿ ಚಿತ್ರ ವಿಶ್ವದಾದ್ಯಂತ ಗುರುವಾರ ತೆರೆಕಂಡಿದೆ.

ಈ ಚಿತ್ರ ಮಲೆಯಾಳಂ ಚಿತ್ರರಂಗದ ಪಾಲಿಗೆ ಬಿಗ್ಗೆಸ್ಟ್ ರಿಲೀಸ್ ಎಂಬ ಖ್ಯಾತಿಗೆ ಒಳಗಾಗಿದ್ದು, ಹೊಸ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.

ಕೇರಳದ 351 ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿದ್ದು, ಬಾಹುಬಲಿ-2 ಚಿತ್ರ ಕೇರಳದಲ್ಲಿ 320 ಪರದೆ ಮೇಲೆ ತೆರೆ ಕಂಡಿತ್ತು. ಈ ಚಿತ್ರ ದಿನದ 24 ಗಂಟೆಯೂ ನಿರಂತರ ಮ್ಯಾರಥಾನ್ ಪ್ರದರ್ಶನ ಕಾಣುತ್ತಿದ್ದು, ಒಂದಾದ ಮೇಲೊಂದು ಪ್ರದರ್ಶನ ಕಾಣಲಿದೆ.

ಗೋಕುಲಂ ಗೋಪಾಲನ್ 45 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದು, ರೋಶನ್ ಆಂಡ್ರೂಸ್ ನಿರ್ದೇಶಿಸಿದ್ದಾರೆ. ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...