alex Certify
ಕನ್ನಡ ದುನಿಯಾ       Mobile App
       

Kannada Duniya

‘ಡಿಕ್ಟೇಟರ್’ ವೆಂಕಟ್ ಗೆ ನಾಯಕಿಯಾಗಿ ‘ಬಿಗ್ ಬಾಸ್’ ಗೌತಮಿ

gowthami

ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕರಾಗಿದ್ದರೂ ‘ಬಿಗ್ ಬಾಸ್-3’ ಶೋ ಗೆ ಬರುವವರೆಗೂ ಹುಚ್ಚ ವೆಂಕಟ್ ಮೇನಿಯಾ ಶುರುವಾಗಿರಲಿಲ್ಲ. ಯು ಟ್ಯೂಬ್ ನಲ್ಲಿ ಮಿಂಚುತ್ತಿದ್ದ ಹುಚ್ಚ ವೆಂಕಟ್, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ವಿಭಿನ್ನ ಮ್ಯಾನರಿಸಂ, ಡೈಲಾಗ್ ಗಳಿಂದ ಕೆಲವೇ ದಿನಗಳಲ್ಲಿ ವೀಕ್ಷಕರನ್ನು ಸೆಳೆದಿದ್ದರು.

ಮನೆಯಿಂದ ಹೊರಬಂದ ನಂತರ ಅವರು ಆಡಿದ ಮಾತಿನಿಂದ ಜೈಲಿಗೂ ಹೋಗಿಬಂದರು. ಇನ್ಮುಂದೆ ನಾನು ಹುಚ್ಚವೆಂಕಟ್ ಅಲ್ಲ, ಬರೀ ವೆಂಕಟ್ ಎಂದು ಹೇಳಿದ್ದರು. ಇದೇ ವೇಳೆ ವೆಂಕಟ್ ಅಭಿನಯಿಸಿದ್ದ  ‘ಸ್ವತಂತ್ರ ಪಾಳ್ಯ’ ಸಿನಿಮಾ ರೀ ರಿಲೀಸ್ ಕೂಡ ಆಯಿತು. ‘ಪರಪಂಚ’ ದಲ್ಲಿ ವೆಂಕಟ್ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡು ಹಾಡೊಂದನ್ನು ಹಾಡಿದ್ದಾರೆ. ಇದೀಗೆ ವೆಂಕಟ್, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದಲ್ಲಿ ನಟಿಸಲಿದ್ದು, ಇದಕ್ಕೆ ‘ಡಿಕ್ಟೇಟರ್’ ಎಂದು ಹೆಸರಿಡಲಾಗಿದೆ.

ವೆಂಕಟ್ ಅವರಿಗೆ ನಾಯಕಿಯಾಗಿ ‘ಬಿಗ್ ಬಾಸ್’ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು 52 ದಿನಗಳ ನಂತರ ಹೊರಗೆ ಬಂದ ಗೌತಮಿ ನಟಿಸಲಿದ್ದಾರೆ. ವೆಂಕಟ್ ಒಳ್ಳೆಯವರು. ಅವರೊಂದಿಗೆ ನಟಿಸುವುದು ಖುಷಿಯ ವಿಚಾರ. ಅದರಲ್ಲಿಯೂ ಎಸ್. ನಾರಾಯಣ್ ಅವರಂತಹ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಲು ಅವಕಾಶ ದೊರೆತಿರುವುದು ಖುಷಿ ತಂದಿದೆ ಎಂದು ಗೌತಮಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...