alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಾಸ್ ಟಾಸ್ಕ್ ಗೆ ಬಳಲಿ ಬೆಂಡಾದ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ಈ ವಾರ ಆರಂಭದಿಂದ್ಲೇ ಹೇಳಿಕೊಳ್ಳುವಂಥ ಬಿರುಸಿನ ವಿದ್ಯಮಾನಗಳೇನೂ ನಡೆಯುತ್ತಿಲ್ಲ. ಜಗಳ, ಕಿತ್ತಾಟಗಳಿಲ್ಲದೆ ಬಿಗ್ ಬಾಸ್ ಸಪ್ಪೆಯಾಗಿದೆ. 31ನೇ ದಿನದ ಆರಂಭದಲ್ಲೇ ವಗ್ಗರಣೆ ಡಬ್ಬಿ ಬೀಳಿಸುವ ಮೂಲಕ ಶ್ರುತಿ ಹೊಸ ಕೆಲಸ ಮೈಮೇಲೆಳೆದುಕೊಂಡ್ರು.

ಜಗನ್ ಹಾಗೂ ಆಶಿತಾ ಮಧ್ಯೆ ಕುಛ್ ಕುಛ್ ನಡೀತಿದೆ ಅನ್ನೋದು ಪ್ರೇಕ್ಷಕರ ಅನುಮಾನ. ಅದಕ್ಕೆ ಪುಷ್ಠಿ ಕೊಡುವಂತಿತ್ತು ಇಬ್ಬರ ನಡುವಿನ ಮುನಿಸು. ಜಗನ್ ತನ್ನ ಜೊತೆ ಮಾತನಾಡ್ತಿಲ್ಲ ಅನ್ನೋದು ಆಶಿತಾಳ ಕೋಪ. 31ನೇ ದಿನ ಕೂಡ ಮ್ಯೂಸಿಕಲ್ ಟಾಸ್ಕ್ ಮುಂದುವರೀತು.

ನಾಲ್ಕನೆಯವರಾಗಿ ಹೊರಬಿದ್ದ ಆಶಿತಾ, ಜಗನ್, ರಿಯಾಜ್ ಹಾಗೂ ದಿವಾಕರ್ ಪ್ಲಾಸ್ಟಿಕ್ ರೋಲ್ ಮೈತುಂಬಾ ಸುತ್ತಿಕೊಂಡು ಸರ್ಕಸ್ ಮಾಡಬೇಕಾಯ್ತು. ಒಂದು ರೌಂಡ್ ಹಾಕುವಷ್ಟರಲ್ಲಿ ಜಗನ್ ಉಸಿರುಗಟ್ಟಿ ಒದ್ದಾಡಿದ್ರು. ನಂತರ ರಿಯಾಜ್ ಸರದಿ. ಪ್ಲಾಸ್ಟಿಕ್ ರೋಲ್ ಸುತ್ತಿ ಮುಗಿಸುವಷ್ಟರಲ್ಲೇ ರಿಯಾಜ್ ಸುಸ್ತಾಗಿದ್ರು.

ನಂತರ ಆಶಿತಾ ಹಾಗೂ ದಿವಾಕರ್ ಸರದಿ. ದಿವಾಕರ್ ಕಷ್ಟಪಟ್ಟು ಟಾಸ್ಕ್ ಮುಗಿಸಿದ್ರೆ, ಆಶಿತಾ ಉಸಿರುಗಟ್ಟಿದ್ರಿಂದ ಟಾಸ್ಕ್ ಮಾಡಲಿಲ್ಲ. ಅಪಾಯಕಾರಿ ಟಾಸ್ಕ್ ನಲ್ಲಿ ಅವರ ಆರೋಗ್ಯ ಏರುಪೇರಾಗಿದ್ದರಿಂದ ಕೂಡಲೇ ವೈದ್ಯರನ್ನು ಕರೆಸಲಾಯ್ತು. ನಂತರ ಆಶಿತಾರನ್ನು ಹೊರಗಿಟ್ಟು ಟಾಸ್ಕ್ ಮುಂದುವರೀತು.

ನಂತರ ಹೊರಬಿದ್ದವರು ಚಂದನ್. ಬಟ್ಟೆಯನ್ನೆಲ್ಲಾ ಕೆದರಿ ಬಿಗ್ ಬಾಸ್ ಲಾಂಚನ ಹುಡುಕೋ ಟಾಸ್ಕ್ ಕೊಡಲಾಗಿತ್ತು. ದಿವಾಕರ್, ಜಗನ್, ರಿಯಾಜ್, ಚಂದನ್ ಜೊತೆಯಾಗಿ ಗಂಟೆಗಟ್ಟಲೆ ಹುಡುಕಿದ್ರೂ ಎಲ್ಲಾ ಲಾಂಚನ ಹುಡುಕಲು ಸಾಧ್ಯವಾಗಲಿಲ್ಲ. ಕುರ್ಚಿ ಹಿಡಿಯೋ ವಿಚಾರಕ್ಕೆ ನಿವೇದಿತಾ ಹಾಗೂ ಸಮೀರ್ ಮಧ್ಯೆ ಕಿತ್ತಾಟವೂ ನಡೀತು.

ನೀರು ತುಂಬಿದ ಬಲೂನ್ ಹೊಡೆಯೋ ಟಾಸ್ಕ್ ಮಾತ್ರ ಸಖತ್ ಫನ್ನಿಯಾಗಿತ್ತು. ಮಧ್ಯರಾತ್ರಿ ನೀರು ತುಂಬಿದ ಬಲೂನ್ ನಲ್ಲಿ ಹೊಡೆತ ತಿಂದು ಮನೆಯ ಸದಸ್ಯರೆಲ್ಲ ಗಡಗಡ ನಡುಗಿದ್ರು. ಮಧ್ಯರಾತ್ರಿ ನಡೆದ ಚರ್ಚೆಯಲ್ಲಿ ಸಮೀರ್ ಹಾಗೂ ಜಯಶ್ರೀನಿವಾಸನ್ ಇಬ್ಬರೂ ಸಿಹಿಕಹಿ ಚಂದ್ರು ಬಗೆಗಿನ ಅಸಮಾಧಾನ ಹೊರಹಾಕಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...