alex Certify
ಕನ್ನಡ ದುನಿಯಾ       Mobile App
       

Kannada Duniya

‘ಮಜಾ ಟಾಕೀಸ್’ನಲ್ಲಿ ಬಹಿರಂಗವಾಯ್ತು ಸುನಾಮಿ ಕಿಟ್ಟಿ ಲವ್ ಸ್ಟೋರಿ

sunami

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-3’ ಶೋನಲ್ಲಿ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಮನೆಯಿಂದ ಹೊರ ಬಂದ ನಂತರ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲದೇ, ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿ ಬಂದಿದ್ದರು.

ಸುನಾಮಿ ಕಿಟ್ಟಿ, ನೇತ್ರಾ, ಜಯಶ್ರೀ, ಸುಷ್ಮಾ, ಕೃತಿಕಾ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದವರು. ಅವರೆಲ್ಲಾ ಎಲಿಮಿನೇಟ್ ಆಗಿ ಹೊರಬಂದಿದ್ದು, ಶನಿವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್’ನಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಜಾ ಟಾಕೀಸ್ ತಂಡದವರೊಂದಿಗೆ ಹಾಸ್ಯಮಿಶ್ರಿತ ಡೈಲಾಗ್ ನಲ್ಲಿ ರಂಜಿಸಿದರು. ಈ ಸಂದರ್ಭದಲ್ಲಿ ಸೃಜನ್ ಲೋಕೇಶ್ ಅವರು ಕಿಟ್ಟಿಯ ಲವ್ ಸ್ಟೋರಿ ಬಗ್ಗೆ ಕೇಳಿದರು.

ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡ ಸುನಾಮಿ ಕಿಟ್ಟಿ, ನಾನು ಇದುವರೆಗೂ ಯಾರನ್ನೂ ಲವ್ ಮಾಡಿಲ್ಲ. ಚಿಕ್ಕವಯಸ್ಸಿನಲ್ಲಿ ಒಬ್ಬ ಹುಡುಗಿ ಫ್ರೆಂಡ್ ಆಗಿದ್ದಳು. ನಮ್ಮ ತರಕಾರಿ ಅಂಗಡಿ ಬಳಿ ಬಂದಾಗ ಮಾತಾಡುತ್ತಿದ್ದೆವು. ನಾನು ರಜೆಗೆ ಊರಿಗೆ ಹೋಗಿ ಬಂದ ನಂತರ ಆ ಹುಡುಗಿ ಬಸ್ ಆಕ್ಸಿಡೆಂಟ್ ನಲ್ಲಿ ತೀರಿ ಹೋದ ಸುದ್ದಿ ತಿಳಿಯಿತು. ಅದೇನು ಲವ್ ಅಲ್ಲ ಎಂದರು. ಈ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು, ಕಿಟ್ಟಿ ಎಲಿಮಿನೇಟ್ ಆಗಿದ್ದರಿಂದ ನನಗೆ ನೋಡುವ ಅವಕಾಶ ಸಿಕ್ತು, ಖುಷಿಯಾಯ್ತು ಎಂದಾಗ ಕಿಟ್ಟಿ ಹಾಸ್ಯಮಿಶ್ರಿತವಾಗಿ ರೇಗಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...