alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ನಲ್ಲಿ ರವಿಶಂಕರ್ ಭರ್ಜರಿ ಡೈಲಾಗ್, ಚಿಕ್ಕಣ್ಣ ಹಾಡಿನ ಕಮಾಲ್

big 123

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ಮುಕ್ತಾಯಗೊಂಡಿದ್ದು, ಶ್ರುತಿ ವಿನ್ನರ್ ಹಾಗೂ ಚಂದನ್ ರನ್ನರ್ ಆಗಿದ್ದಾರೆ. ಅದ್ಧೂರಿಯಾಗಿ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ‘ಜಿಗರ್ ಥಂಡ’ ಚಿತ್ರತಂಡದವರು ಆಗಮಿಸಿದ್ದರು.

ವೇದಿಕೆಗೆ ಆಗಮಿಸಿದ ಖ್ಯಾತ ಖಳನಟ ರವಿಶಂಕರ್ ಅವರು, ಕೆಂಪೇಗೌಡ ಸಿನಿಮಾ ಡೈಲಾಗ್ ಹೇಳಿ ರಂಜಿಸಿದರು. ನಂತರದ್ದು ಚಿಕ್ಕಣ್ಣ ಅವರ ಸರದಿ. ನೀವೊಂದು ಡೈಲಾಗ್ ಹೇಳಿ ಇಲ್ಲವೇ, ಡ್ಯಾನ್ಸ್ ಮಾಡಿ ಎಂದು ಸುದೀಪ್ ಹೇಳಿದಾಗ ನಾಚಿ ನೀರಾದ ಚಿಕ್ಕಣ್ಣ ಹಾಡು ಹಾಡುವುದಾಗಿ ಹೇಳಿ, ‘ರನ್ನ’ ಸಿನಿಮಾದ ಹಾಡೊಂದನ್ನು ಹೇಳುವ ಮೂಲಕ ಗಮನ ಸೆಳೆದರು. ಸುದೀಪ್ ಚಿತ್ರರಂಗಕ್ಕೆ ಬಂದು 20 ವರ್ಷಗಳಾದ ಹಿನ್ನೆಲೆಯಲ್ಲಿ ಅವರಿಗೊಂದು ಕೃತಜ್ಞತೆ ಪೂರ್ವಕ ಕಾರ್ಯಕ್ರಮವನ್ನು ‘ಬಿಗ್ ಬಾಸ್’ ಟೀಂ ಆಯೋಜಿಸಿತ್ತು.

ನಟಿ ರಕ್ಷಿತಾ ವೇದಿಕೆಗೆ ಬಂದು ಸುದೀಪ್ ಸಿನಿ ಜರ್ನಿಯ ಬಗ್ಗೆ ಮಾತನಾಡಿದರು. ಅಲ್ಲದೇ, ಸುದೀಪ್ ಅವರ ವಿಟಿಯನ್ನು ‘ಬಿಗ್ ಬಾಸ್’ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು. ಅಲ್ಲದೇ, ಅವರಿಗಾಗಿ ಹಲವು ಕಲಾವಿದರು ಅಭಿನಂದನೆ ಹೇಳಿದ ವಿಟಿ ತೋರಿಸಲಾಯಿತು. ಇದಕ್ಕಾಗಿ ಸುದೀಪ್ ಕೃತಜ್ಞತೆ ಸಲ್ಲಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...